Thursday, July 7, 2022
Home ಲೋಕಾಭಿರಾಮ ಕ್ಯಾನ್ಸರ್ ಪುನಶ್ಚೇತನ ಸೌಕರ್ಯ ಉದ್ಘಾಟನೆ

ಕ್ಯಾನ್ಸರ್ ಪುನಶ್ಚೇತನ ಸೌಕರ್ಯ ಉದ್ಘಾಟನೆ

ಮಣಿಪಾಲ: ಇಲ್ಲಿನ ಕೆಎಂಸಿ ಆಸ್ಪತ್ರೆಯಲ್ಲಿ ದೊಡ್ಡ ಕರುಳಿನ ಕ್ಯಾನ್ಸರ್ ನಿಂದ ಬದುಕುಳಿದವರ ಪುನಶ್ಚೇತನ ಸೌಕರ್ಯ ಉದ್ಘಾಟನೆ ಮತ್ತು ನಿರಂತರ ವೈದ್ಯಕೀಯ ಶಿಕ್ಷಣ ತರಬೇತಿ ನಡೆಸಲಾಯಿತು.

ಕಾಲೇಜು ಮತ್ತು ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗದ ಮಣಿಪಾಲ ಸಮಗ್ರ ಕ್ಯಾನ್ಸರ್ ಆರೈಕೆ ಕೇಂದ್ರ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮದ ಅಭ್ಯಾಗತರಾಗಿ ಮಾಹೆ ಸಹಕುಲಾಧಿಪತಿ ಡಾ| ಎಚ್. ಎಸ್. ಬಲ್ಲಾಳ್, ಸಹ ಉಪಕುಲಪತಿ ಡಾ| ಪಿ. ಎಲ್. ಎನ್.ಜಿ ರಾವ್, ಕೆಎಂಸಿ ಆಸ್ಪತ್ರೆ ಡೀನ್ ಡಾ. ಶರತ್ ಕುಮಾರ್ ರಾವ್, ಆಸ್ಪತ್ರ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ಮಣಿಪಾಲ ಸಮಗ್ರ ಕ್ಯಾನ್ಸರ್ ಅರೈಕೆ ಕೇಂದ್ರ ಸಂಯೋಜಕ ಡಾ. ನವೀನ್ ಎಸ್. ಸಲಿನ್ಸ್ ಮತ್ತು ಕ್ಯಾನ್ಸರ್ ಶಸ್ತ್ರಚಿಕಿತ್ಸಾ ವಿಭಾಗ ಮುಖ್ಯಸ್ಥ ಡಾ. ನವೀನ ಕುಮಾರ್ ಇದ್ದರು.

ಕಾರ್ಯಕ್ರಮದಲ್ಲಿ ದೊಡ್ಡ ಕರುಳಿನ ಕ್ಯಾನ್ಸರ್ ಆರೈಕೆಯ ಈಚಿನ ಚಿಕಿತ್ಸಾ ವಿಧಾನಗಳ ಬಗ್ಗೆ ಚರ್ಚಿಸಲಾಯಿತು. ಕ್ಯಾನ್ಸರ್ ಶಸ್ತ್ರಚಿಕಿತ್ಸೆ, ಕೀಮೋಥೆರಪಿ, ರೇಡಿಯೊಥೆರಪಿ ಮತ್ತು ಪ್ರಶಾಮಕ ಮತ್ತು ಸಹಾಯಕ ಆರೈಕೆ ವಿಭಾಗದ 6 ಕ್ಯಾನ್ಸರ್ ಕೇಂದ್ರಗಳ 28 ವೈದ್ಯರು ಭಾಗವಹಿಸಿದರು. ಮುಖ್ಯ ಟಿಪ್ಪಣಿಯನ್ನು ಮುಂಬೈನ ಟಾಟಾ ಸ್ಮಾರಕ ಆಸ್ಪತ್ರೆಯ ಕರುಳಿನ ಕ್ಯಾನ್ಸರ್ ಮತ್ತು ರೊಬೊಟಿಕ್ ಸರ್ಜನ್ ಪ್ರೊ. ಡಾ. ಅವನಿಶ್ ಸಕ್ಲಾನಿ ಮಾಹಿತಿ ನೀಡಿದರು.

ನಿರಂತರ ವೈದ್ಯಕೀಯ ಶಿಕ್ಷಣ ಕಾರ್ಯಕ್ರಮದಲ್ಲಿ ಉಡುಪಿ, ಮಂಗಳೂರು, ಶಿವಮೊಗ್ಗ, ದಾವಣಗೆರೆ, ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲೆಗಳಿಂದ 150ಕ್ಕೂ ಹೆಚ್ಚು ವೈದ್ಯರು ಭಾಗವಹಿಸಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!