ಕಾರ್ಕಳ: ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಿಸಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ಚಿತ್ರಕೂಟ ಪೋಷಕ್ ನ 250 ಪೊಟ್ಟಣಗಳನ್ನು ಈಚೆಗೆ ಇಲ್ಲಿ ನಡೆದ ವಾತ್ಸಲ್ಯ ಕಾರ್ಯಕ್ರಮದಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಶಾಸಕ ಸುನಿಲ್ ಕುಮಾರ್, ಜಿಲ್ಲಾಧಿಕಾರಿ ಜಿ. ಜಗದೀಶ್ ಸಮ್ಮುಖದಲ್ಲಿ ವಿತರಿಸಲಾಯಿತು.
ಚಿತ್ರಕೂಟ ಫುಡ್ಸ್ ಇದರ ಪೋಷಕ್ ಆಹಾರ ಔಷಧೀಯ ಗಿಡಮೂಲಿಕೆಗಳಿಂದ ತಯಾರಿಸಿದ್ದು ಮಕ್ಕಳ ಪೋಷಣೆ ಮತ್ತು ಬೆಳವಣಿಗೆಗೆ ಸಹಕರಿಸುವ ಜೊತೆಗೆ ಅವರಲ್ಲಿ ಪೌಷ್ಟಿಕತೆ ಹೆಚ್ಚಿಸಿ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಸಿರಿ ಧಾನ್ಯ, ಕಾಳು ಮೆಣಸು, ಅಶ್ವಗಂಧ, ಮೊಳಕೆ ಬರಿಸಿದ ಕಾಳುಗಳು ಸೇರಿದಂತೆ 35 ಬಗೆಯ ಪದಾರ್ಥಗಳನ್ನು ಚಿತ್ರಕೂಟ ಪೋಷಕ್ ಒಳಗೊಂಡಿದೆ.
ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳಿಗೆ ಆಶಾ ಕಾರ್ಯಕರ್ತೆಯರ ಮೂಲಕ ಚಿತ್ರಕೂಟ ಶಿಶುಪೋಷಕ್ ಮತ್ತು ಚಿತ್ರಕೂಟ ಪೋಷಕ್ ಕೂಡಾ ನೀಡಲಾಗಿದೆ ಎಂದು ಚಿತ್ರಕೂಟ ಸಂಸ್ಥೆ ಮುಖ್ಯಸ್ಥ ಡಾ. ರಾಜೇಶ್ ಬಾಯರಿ ತಿಳಿಸಿದ್ದಾರೆ