Sunday, July 3, 2022
Home ಲೋಕಾಭಿರಾಮ ಡಯಾಲಿಸಿಸ್ ಯಂತ್ರ ಕೊಡುಗೆ

ಡಯಾಲಿಸಿಸ್ ಯಂತ್ರ ಕೊಡುಗೆ

ಕಾರ್ಕಳ: ಸಮುದಾಯದಲ್ಲಿ ಮಧುಮೇಹ ತಡೆಗಟ್ಟುವಿಕೆ ಮತ್ತು ದೀರ್ಘಕಾಲದ ಮೂತ್ರಪಿಂಡ ಕಾಯಿಲೆ ಜಾಗೃತಿ ಕಾರ್ಯಕ್ರಮಕ್ಕಾಗಿ ಮಣಿಪಾಲ ರೋಟರಿ ಕ್ಲಬ್ ಜಾಗತಿಕ ಅನುದಾನ ಯೋಜನೆಯಡಿ ಇಲ್ಲಿನ ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಈಚೆಗೆ ಸುಮಾರು 25 ಲಕ್ಷ ರೂ. ವೆಚ್ಚದಲ್ಲಿ 3 ಡಯಾಲಿಸಿಸ್ ಯಂತ್ರ ನೀಡಲಾಯಿತು. ಇದೇ ಸಂದರ್ಭದಲ್ಲಿ ಜಾಗತಿಕ ಅನುದಾನ ಯೋಜನೆಯನ್ನು ರೋಟರಿ 3182 ಜಿಲ್ಲಾ ಗವರ್ನರ್ ರಾಜಾರಾಮ್ ಭಟ್ ಉದ್ಘಾಟಿಸಿದರು.

ರೋಟರಿ 3182 ಚುನಾಯಿತ ಗವರ್ನರ್ ಡಾ. ಎಚ್. ಜಯಗೌರಿ, ರೋಟರಿ ಕ್ಲಬ್ ಮಣಿಪಾಲ ಅಧ್ಯಕ್ಷ ಪ್ರಶಾಂತ್ ಹೆಗ್ಡೆ, ಮಣಿಪಾಲ ಕೆಎಂಸಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ, ರೋಟರಿ ಪೂರ್ವ ಜಿಲ್ಲಾ ಗವರ್ನರ್ ಡಾ. ಭರತೇಶ್ ಅಧಿರಾಜ್, ಮಣಿಪಾಲ ಕೆಎಂಸಿ ಆಸ್ಪತ್ರೆ ಮೂತ್ರ ಪಿಂಡ ವಿಭಾಗ ಮುಖ್ಯಸ್ಥ ಡಾ. ಶಂಕರ್ ಪ್ರಸಾದ್ ಮತ್ತು ಪ್ರಾಧ್ಯಾಪಕ ಡಾ. ರವೀಂದ್ರ ಪ್ರಭು, ಡಾ. ಟಿಎಂಎ ಪೈ ರೋಟರಿ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಕೀರ್ತಿನಾಥ ಬಲ್ಲಾಳ ಭಾಗವಹಿಸಿದ್ದರು.

ಜು. 6ರಿಂದ ಸೌಲಭ್ಯ
ಆಸ್ಪತ್ರೆಯಲ್ಲಿ ಜು. 6ರಿಂದ ಮೂತ್ರಪಿಂಡ ವಿಭಾಗ ಹೊರರೋಗಿ ವಿಭಾಗ ಮತ್ತು ಡಯಾಲಿಸಿಸ್ ಸೌಲಭ್ಯ ಆರಂಭಿಸಲಾಗುವುದು. ಈ ವಿಭಾಗ ಪ್ರತೀ ಮಂಗಳವಾರ ಮತ್ತು ಶುಕ್ರವಾರ ಅಪರಾಹ್ನ 2ರಿಂದ ಸಂಜೆ 5ರ ವರೆಗೆ ಕಾರ್ಯನಿರ್ವಹಿಸಲಿದೆ. ಡಯಾಲಿಸಿಸ್ ಸೌಲಭ್ಯ ಪ್ರತಿದಿನ ದೊರೆಯಲಿದೆ.

ಹೆಚ್ಚಿನ ಮಾಹಿತಿಗಾಗಿ 9731601149 ಅಥವಾ 08258- 230583ಗೆ ಕರೆ ಮಾಡಬಹುದು ಎಂದು ಆಸ್ಪತ್ರೆ ಪ್ರಕಟಣೆ ತಿಳಿಸಿದೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!