Monday, July 4, 2022
Home ಲೋಕಾಭಿರಾಮ ತುರ್ತು ಆ್ಯಂಬುಲೆನ್ಸ್ ಸೇವೆಗೆ ಚಾಲನೆ

ತುರ್ತು ಆ್ಯಂಬುಲೆನ್ಸ್ ಸೇವೆಗೆ ಚಾಲನೆ

ಉಡುಪಿ: ಕೋವಿಡ್ ಸಂಕಷ್ಟ ದಿನಗಳಲ್ಲಿ ಜನಸಾಮಾನ್ಯರಿಗೆ ಅನುಕೂಲತೆ ಕಲ್ಪಿಸುವ ನಿಟ್ಟಿನಲ್ಲಿ ಬಿಜೆಪಿ ನಗರ ನೇತೃತ್ವದಲ್ಲಿ ಗುರುವಾರ ಆರಂಭಿಸಲಾದ ಉಚಿತ ಆ್ಯಂಬುಲೆನ್ಸ್ ಸೇವೆ ಮತ್ತು ಸಂಚಾರಿ ಕೋವಿಡ್ ನಿಯಂತ್ರಣ ಘಟಕಕ್ಕೆ ಶಾಸಕ ರಘುಪತಿ ಭಟ್ ಜಿಲ್ಲಾ ಬಿಜೆಪಿ ಕಚೇರಿ ಆವರಣದಲ್ಲಿ ಚಾಲನೆ ನೀಡಿದರು.

ಕಳೆದ ಬಾರಿಯೂ ಕೊರೊನಾ ದಿನಗಳಲ್ಲಿ ಬಿಜೆಪಿ ಆಹಾರ ನೀಡಿಕೆ, ಬಸ್ ಸೌಕರ್ಯ ಇತ್ಯಾದಿ ಅನೇಕ ಜನಪರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಬಾರಿಯೂ ಜನತೆಗೆ ಅಗತ್ಯ ಸೇವೆ ನೀಡುವಲ್ಲಿ ಹಾಗೂ ಕೋವಿಡ್ ಕುರಿತ ಸಂಪೂರ್ಣ ಮಾಹಿತಿ ನೀಡುವಲ್ಲಿ ಮಾಹಿತಿಯುಕ್ತ ಆ್ಯಂಬುಲೆನ್ಸ್ ಸೇವೆ ಆರಂಭಿಸಲಾಗಿದೆ.

ಕೋವಿಡ್ ನಿಯಂತ್ರಣದಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತ ಎಲ್ಲ ಅಗತ್ಯ ಕ್ರಮ ಕೈಗೊಳ್ಳುತ್ತಿದೆಯಾದರೂ ಜನತೆ ಸ್ವಯಂ ರಕ್ಷಣೆ ಮಾಡಿಕೊಂಡು ಮಹಾಮಾರಿಯ ವಿರುದ್ಧ ಗೆಲುವು ಸಾಧಿಸಬೇಕು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್, ಪಕ್ಷ ಪ್ರಮುಖರಾದ ಉದಯ ಕುಮಾರ್ ಶೆಟ್ಟಿ, ಮಹೇಶ ಠಾಕೂರ್, ಮಂಜುನಾಥ ಮಣಿಪಾಲ, ವಿಜಯ ಕೊಡವೂರು, ಸುರೇಶ ಶೇರಿಗಾರ್, ಪ್ರಶಾಂತ ಸನಿಲ್, ಯೋಗೀಶ ಸಾಲಿಯಾನ್ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!