Monday, July 4, 2022
Home ಲೋಕಾಭಿರಾಮ ಪಿಎಚ್ ಡಿ ಪದವಿ

ಪಿಎಚ್ ಡಿ ಪದವಿ

ಮಣಿಪಾಲ: ಇಲ್ಲಿನ ಪ್ರೈಮಸಿ ಸಂಸ್ಥೆಯ ಸಾಫ್ಟ್ ವೇರ್ ವಿಭಾಗದ ಹಿರಿಯ ವ್ಯವಸ್ಥಾಪಕರಾಗಿದ್ದ ಉಡುಪಿ ಶಿವಪ್ರಸಾದ ಕೆ. ಮಂಡಿಸಿದ `ಎಂಪ್ಲಾಯೀಸ್ ಪರ್ಸೆಪ್ಷನ್ ಟುವರ್ಡ್ಸ್ ಇ- ಬ್ಯಾಂಕಿಂಗ್ ಇನ್ ಕೋ- ಆಪರೇಟಿವ್ ಬಾಂಕ್ಸ್: ಎ ಸ್ಟಡಿ ವಿದ್ ರೆಫರೆನ್ಸ್ ಟು ಕೋಸ್ಟಲ್ ಕರ್ನಾಟಕ ಸಂಶೋಧನಾ ಪ್ರಬಂಧಕ್ಕೆ ಕೊಯಂಬತ್ತೂರಿನ ಭಾರತೀಯ ವಿಶ್ವವಿದ್ಯಾನಿಲಯ ಪಿಎಚ್ ಡಿ ಪದವಿ ನೀಡಿದೆ.
ಅವರು ಅಜ್ಜರಕಾಡು ಡಾ| ಜಿ. ಶಂಕರ್ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಾಣಿಜ್ಯ ಹಾಗೂ ಮ್ಯಾನೇಜ್ ಮೆಂಟ್ ವಿಭಾಗದ ಕೋ ಆರ್ಡಿನೇಟರ್ ಡಾ| ಉಮೇಶ್ ಮಯ್ಯ ಮಾರ್ಗದರ್ಶನದಲ್ಲಿ ಪ್ರಬಂಧ ರಚಿಸಿದ್ದರು.
ಶಿವಪ್ರಸಾದ ಅವರು ಕಾರ್ಕಳದ ದಿ. ಕೊಗ್ಗ ಶೆಟ್ಟಿಗಾರ ಹಾಗೂ ದಿ. ಸುಂದರಿ ದಂಪತಿ ಪುತ್ರ. ಕಾರ್ಕಳ ಭುವನೇಂದ್ರ ಕಾಲೇಜಿನಲ್ಲಿ ಪದವಿ ಪೂರೈಸಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!