Saturday, July 2, 2022
Home ಲೋಕಾಭಿರಾಮ ಪಿಯುಸಿ ಫಲಿತಾಂಶ: ದ.ಕ. ಪ್ರಥಮ

ಪಿಯುಸಿ ಫಲಿತಾಂಶ: ದ.ಕ. ಪ್ರಥಮ

ಬೆಂಗಳೂರು: ದ್ವಿತೀಯ ಪಿಯುಸಿ ಫಲಿತಾಂಶ ಮಂಗಳವಾರ ಪ್ರಕಟಗೊಂಡಿದ್ದು, 4 ಲಕ್ಷ 50 ಸಾವಿರದ 706 ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ ಡಿಸ್ಟಿಂಕ್ಷನ್ ನಲ್ಲಿ ಉತ್ತೀರ್ಣರಾಗಿದ್ದಾರೆ. 1,47,056 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಹಾಗೂ 68,729 ವಿದ್ಯಾರ್ಥಿಗಳು ಜಸ್ಟ್ ಪಾಸಾಗಿದ್ದಾರೆ.

ಫಲಿತಾಂಶದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ ಸ್ಥಾನ ಗಳಿಸಿದೆ. ದಕ್ಷಿಣ ಕನ್ನಡದ 445 ವಿದ್ಯಾಥರ್ಿಗಳು 600ಕ್ಕೆ 600 ಅಂಕ ಪಡೆದಿದ್ದಾರೆ.

ಬೆಂಗಳೂರು ದಕ್ಷಿಣ ಎರಡನೇ ಸ್ಥಾನ ಗಳಿಸಿದೆ. ಬೆಂಗಳೂರು ದಕ್ಷಿಣದ 302 ವಿದ್ಯಾರ್ಥಿಗಳಿಗೆ 600ಕ್ಕೆ 600 ಅಂಕ ಬಂದಿದೆ.

ಬೆಂಗಳೂರು ಉತ್ತರ 3ನೇ ಸ್ಥಾನ ಪಡೆದುಕೊಂಡಿದೆ. ಬೆಂಗಳೂರು ಉತ್ತರದ 261 ವಿದ್ಯಾರ್ಥಿಗಳಿಗೆ 600ಕ್ಕೆ 600 ಅಂಕ ಸಿಕ್ಕಿದೆ.

ಉಡುಪಿ ಜಿಲ್ಲೆಗೆ 4ನೇ ಸ್ಥಾನ ಲಭ್ಯವಾಗಿದ್ದು, ಜಿಲ್ಲೆಯ 149 ವಿದ್ಯಾರ್ಥಿಗಳಿಗೆ 600ಕ್ಕೆ 600 ಅಂಕ ಸಿಕ್ಕಿದೆ.
ಹಾಸನ ಜಿಲ್ಲೆ 5ನೇ ಸ್ಥಾನ ಗಳಿಸಿದೆ. ಅಲ್ಲಿನ 104 ವಿದ್ಯಾರ್ಥಿಗಳು 600ಕ್ಕೆ 600 ಅಂಕ ಪಡದಿದ್ದಾರೆ.

 

 

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!