ಉಡುಪಿ: ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ ಪ್ರಸೂತಿ ತಂತ್ರ ಮತ್ತು ಸ್ತ್ರೀರೋಗ ಸ್ನಾತಕೋತ್ತರ ವಿಭಾಗ ಸಹಪ್ರಾಧ್ಯಾಪಕಿ ಡಾ. ವಿದ್ಯಾ ಬಲ್ಲಾಳ್ ಕೆ. ಮಂಡಿಸಿದ ಆನ್ ಎಕ್ಸ್ಪೆರಿಮೆಂಟ್ ಆ್ಯಂಡ್ ಕ್ಲಿನಿಕಲ್ ಇವ್ಯಾಲ್ಯುವೇಷನ್ ಆಫ್ ದಿ ಯುಟಿಲಿಟಿ ಆಫ್ ಚರಕೋಕ್ತ ಪ್ರಜಾಸ್ಥಾಪನಾ ಗನ ಔಷಧೀಸ್ ಆ್ಯಂಡ್ ಗರ್ಭಪಾಲ ರಸ ವಿದ್ ಸ್ಪೆಷಲ್ ರೆಫೆರೆನ್ಸ್ ಟು ಇಟ್ಸ್ ಆ್ಯಂಟಿ ಎಬಾರ್ಟಿಪಿಷೆಂಟ್ ಆ್ಯಕ್ಟಿವಿಟಿ ಎಂಬ ಮಹಾಸಂಶೋಧನಾ ಪ್ರಬಂಧಕ್ಕೆ ಬೆಂಗಳೂರಿನ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಡಾಕ್ಟರೇಟ್ ನೀಡಿ ಗೌರವಿಸಿದೆ.
ಅವರು ಕಾಲೇಜಿನ ಪ್ರಭಾರ ಪ್ರಾಚಾರ್ಯೆ ಡಾ. ಮಮತಾ ಕೆ. ವಿ. ಮಾರ್ಗದರ್ಶನದಲ್ಲಿ ಪಿ.ಎಚ್.ಡಿ ಅಧ್ಯಯನ ಮತ್ತು ಮಹಾಪ್ರಬಂಧ ಸಿದ್ಧಪಡಿಸಿದ್ದರು.
ಡಾ. ವಿದ್ಯಾ ಬಲ್ಲಾಳ್ ಅವರು ಕೇರಳದ ಸರ್ಕಾರಿ ಆಯುರ್ವೇದ ಕಾಲೇಜಿನಲ್ಲಿ ಆಯುರ್ವೇದ ಪದವಿ ಪಡೆದು, ಉಡುಪಿ ಎಸ್.ಡಿ.ಎಂ ಆಯುರ್ವೇದ ಮಹಾವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಅವರು ಡಾ. ಕೆ. ಎಸ್. ಬಲ್ಲಾಳ್ ಪತ್ನಿ ಹಾಗೂ ದಿ| ಸುಬ್ರಹ್ಮಣ್ಯ ಆಚಾರ್ಯ ಮತ್ತು ದಿ| ರಾಜಲಕ್ಷ್ಮಿ ದಂಪತಿ ಪುತ್ರಿ