ಉಡುಪಿ: ಇಲ್ಲಿನ ಅಷ್ಟಮಠಗಳಲ್ಲೊಂದಾದ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಸೋಮವಾರ ಅಂತಾರಾಷ್ಟ್ರೀಯ ಯೋಗ ದಿನ ಅಂಗವಾಗಿ ತಮ್ಮ ಮಠದಲ್ಲಿಯೇ ಪ್ರಾಣಾಯಾಮ ಸಹಿತ ವಿವಿಧ ಯೋಗಾಸನ ನಡೆಸಿದರು.
ಏಕಾದಶಿಯಾದ್ದರಿಂದ ನಿರ್ಜಲ ಉಪವಾಸವಿದ್ದ ಶ್ರೀಪಾದರು ವಿವಿಧ ಯೋಗಾಸನಗಳನ್ನು ನಡೆಸಿದರು.
ನಿರಂತರ ಯೋಗದಿಂದ ಸ್ವಸ್ಥ ಆರೋಗ್ಯ ಸಾಧ್ಯ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನೂ ಯೋಗದ ಪ್ರಾಮುಖ್ಯತೆಯನ್ನು ತಿಳಿಸಿದ್ದಾನೆ.
ಯೋಗಾಸನ, ಯೋಗಾಭ್ಯಾಸ ಕೇವಲ ಒಂದು ದಿನಕ್ಕೆ ಸೀಮಿತವಾಗದೇ ನಿರಂತರವಾಗಿರಬೇಕು ಎಂದು ಶ್ರೀಗಳು ಹೇಳಿದರು