ಸುದ್ದಿಕಿರಣ ವರದಿ
ಮಂಗಳವಾರ, ಜನವರಿ 11, 2022
ಬಣ್ಣ ಬಳಸದೆ ಚಿತ್ರ ರಚನೆ: ದಾಖಲೆ
ಮಣಿಪಾಲ: ಇಲ್ಲಿನ ಕಸ್ತೂರ್ಬಾ ಆಸ್ಪತ್ರೆಯ ಮಾನವ ಸಂಪನ್ಮೂಲ ವಿಭಾಗದ ಮುಖ್ಯ ಪ್ರಬಂಧಕ ಸುರೇಶ್ ಶೆಣೈ ಬಣ್ಣ ಬಳಸದೇ ಹಳೆಯ ಮ್ಯಾಗಝಿನ್ ಗಳ ಕಾಗದ ಬಳಸಿ ನಿರ್ಮಿಸಿದ ಚಿತ್ರಗಳಿಗಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ತನ್ನ ಸಾಧನೆ ದಾಖಲಿಸಿದ್ದಾರೆ.
ಬಣ್ಣ ಬಳಸದೆ ಹಳೆಯ ಮ್ಯಾಗಝಿನ್ ಕಾಗದ ಬಳಸಿ ತಯಾರಿಸುವ ವಿಶಿಷ್ಟ ಚಿತ್ರಗಾರಿಕೆ ( (Collage Art- Painting without Paint) ಕಲೆಯನ್ನು ಕರಗತ ಮಾಡಿಕೊಂಡಿರುವ ಶೆಣೈ ಸಾಧನೆಗೆ ಅವರ ಪತ್ನಿ, ಪುತ್ರ, ಹಿರಿಯ ಸಹೋದರ ಗಣೇಶ್ ಶೆಣೈ ಪ್ರೋತ್ಸಾಹ ನೀಡಿದ್ದಾರೆ.
ಬಣ್ಣ ಬಳಸದೆ ಹಳೆಯ ಮ್ಯಾಗಝಿನ್ ಕಾಗದಗಳ ಮೂಲಕ ಚಿತ್ರ ನಿರ್ಮಿಸುವ ಕಲೆಯನ್ನು ಅವರ ತಂದೆ, ಹಿರಿಯ ಕಲಾವಿದರಾಗಿದ್ದ ದಿ. ಕೆ. ಪಿ. ಶೆಣೈ ಅವರೊಂದಿಗೆ ಸುಮಾರು 40 ವರ್ಷದ ಹಿಂದೆ ಪ್ರಾರಂಭಿಸಿದ್ದರು.
ಈ ಚಿತ್ರಗಾರಿಕೆ ಮೂರು ಆಯಾಮಗಳುಳ್ಳ ಪ್ರಭಾವಳಿಯಂತೆ ಗೋಚರಿಸುವ ಕಲೆಯಾಗಿದ್ದು, ಅದನ್ನು ಯಾರೂ ಕಾಪಿ ಮಾಡಲು ಸಾಧ್ಯವಿಲ್ಲ ಮತ್ತು ಅದರ ಮರು ನಿರ್ಮಾಣವೂ ಅಸಾಧ್ಯ