Thursday, December 2, 2021
Home ಲೋಕಾಭಿರಾಮ ಆಚಾರ್ಯಾಸ್ ಏಸ್: ಬ್ಯಾಂಕಿಂಗ್ ಪರೀಕ್ಷೆ ತರಬೇತಿ

ಆಚಾರ್ಯಾಸ್ ಏಸ್: ಬ್ಯಾಂಕಿಂಗ್ ಪರೀಕ್ಷೆ ತರಬೇತಿ

ಆಚಾರ್ಯಾಸ್ ಏಸ್: ಬ್ಯಾಂಕಿಂಗ್ ಪರೀಕ್ಷೆ ತರಬೇತಿ

ಉಡುಪಿ, ನ. 16 (ಸುದ್ದಿಕಿರಣ ವರದಿ): 9 ಮತ್ತು 10 ಹಾಗೂ ಪಿಯುಸಿ, ಸಿಇಟಿ, ಜೆಇಇ, ನೀಟ್, ಕಾಮರ್ಸ್ ಹಾಗೂ ಬ್ಯಾಂಕಿಂಗ್ ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿ ಆಯೋಜಿಸುತ್ತಿರುವ ಇಲ್ಲಿನ ಏಸ್ ವತಿಯಿಂದ ನ. 27ರಿಂದ ಬ್ಯಾಂಕಿಂಗ್ ಪರೀಕ್ಷೆ ತರಬೇತಿ ಆಯೋಜಿಸಲಾಗಿದೆ.

ನ. 27ರಿಂದ ಪ್ರತೀ ಶನಿವಾರ ಅಪರಾಹ್ನ 4ರಿಂದ ಸಂಜೆ 6 ಮತ್ತು ಭಾನುವಾರದಂದು ಬೆಳಿಗ್ಗೆ 9ರಿಂದ ಸಂಜೆ 4ರ ವರೆಗೆ ತರಬೇತಿ ನಡೆಯಲಿದೆ.

ಕಳೆದ 7 ವರ್ಷದಿಂದ ಪರಿಣಾಮಕಾರಿ ತರಬೇತಿ ಮೂಲಕ ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳ ವೃತ್ತಿಪರ ಶಿಕ್ಷಣ ಮತ್ತು ಉದ್ಯೋಗಕ್ಕೆ ಅವಕಾಶ ಕಲ್ಪಿಸಿರುವ ಏಸ್ ಸಂಸ್ಥೆ, ಈ ಭಾರೀ ಇನ್ನಷ್ಟು ಸೌಲಭ್ಯ ಮತ್ತು ಸಂಪನ್ಮೂಲಗಳೊಂದಿಗೆ ತರಬೇತಿ ಆಯೋಜಿಸುತ್ತಿದೆ.

ಬ್ಯಾಂಕಿಂಗ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯಲ್ಲಿ ಆಳವಾದ ಅಧ್ಯಯನ ನಡೆಸಿರುವ ನುರಿತ ಉಪನ್ಯಾಸಕರಿಂದ ತರಬೇತಿ ನೀಡಲಾಗುವುದು. ಉಪನ್ಯಾಸದ ಜೊತೆಗೆ ಪ್ರಮುಖ ಅಧ್ಯಾಯಗಳ ಕುರಿತಾಗಿ ತೀರಾ ಪರಿಷ್ಕೃತ ಪ್ರಶ್ನೆಪತ್ರಿಕೆಗಳೊಂದಿಗೆ ನಿರಂತರ ಮಾದರಿ ಪರೀಕ್ಷೆಗಳನ್ನೂ ಆಯೋಜಿಸಲಾಗುವುದು.

ತರಬೇತಿ ಸಂದರ್ಭ ರೈಲ್ವೇ, ಇನ್ಸೂರೆನ್ಸ್, ಐಟಿ ಹಾಗೂ ವಿವಿಧ ಮಾದರಿಯ ವಿನೂತನ ಪರೀಕ್ಷೆಗಳಿಗೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಲಾಗುವುದು.

ಬ್ಯಾಂಕಿಂಗ್ ಪ್ರಿಲಿಮ್ಸ್ ಹಾಗೂ ಮೈನ್ಸ್ ಮಾದರಿಯಲ್ಲಿ ಜರಗಲಿದ್ದು ಮ್ಯಾಥ್ಸ್, ರೀಸನಿಂಗ್, ಇಂಗ್ಲಿಷ್, ಜಿಕೆ, ಕರೆಂಟ್ ಅಫೇರ್ಸ್, ಕಂಪ್ಯೂಟರ್ ನಾಲೇಜ್, ವಿವಿಧ ಬ್ಯಾಂಕಿಂಗ್ ಕ್ಷೇತ್ರಗಳಿಗೆ ಸಂಬಂಧಿಸಿದ ಆಡಳಿತ, ಆರ್ಥಿಕ ಕ್ಷೇತ್ರಗಳ ವಿಚಾರಗಳ ಬಗ್ಗೆ ಪ್ರಶ್ನೆ ಹೊಂದಿರುತ್ತದೆ. ಅಲ್ಲದೆ ಕನಿಷ್ಟ ಅವಧಿಯಲ್ಲಿ ಗರಿಷ್ಟ ಪ್ರಶ್ನೆಗಳನ್ನು ಅತ್ಯಂತ ವೇಗ ಮತ್ತು ನಿಖರತೆಯಿಂದ ಉತ್ತರಿಸುವ ಕೌಶಲವನ್ನು ಪರೀಕ್ಷಾರ್ಥಿಗಳು ಹೊಂದಿರಬೇಕೆನ್ನುವ ನಿಟ್ಟಿನಲ್ಲಿ ವೇಗ- ನಿಖರತೆಯ ಪರಿಣತಿಗಾಗಿ ತಜ್ಞ ಸಂಪನ್ಮೂಲವ್ಯಕ್ತಿಗಳಿಂದ ತರಬೇತಿ ಹಮ್ಮಿಕೊಳ್ಳಲಾಗಿದೆ.

ತರಬೇತಿಯ ಅಂತ್ಯದಲ್ಲಿ ಮಾದರಿ ಆನ್ಲೈನ್ ಪರೀಕ್ಷೆಗಳನ್ನು ಆಯೋಜಿಸಲಾಗುತ್ತಿದೆ. ಬ್ಯಾಂಕಿಂಗ್ ಹಾಗೂ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದ ಪ್ರಸಿದ್ಧ ಪ್ರಕಾಶಕರ ಕೃತಿಗಳು ಗ್ರಂಥಾಲಯದಲ್ಲಿ ಉಚಿತವಾಗಿ ಲಭ್ಯವಿದೆ.

ಆಸಕ್ತ ವಿದ್ಯಾರ್ಥಿಗಳು ಉಡುಪಿ ತೆಂಕಪೇಟೆ ಶ್ರೀ ಲಕ್ಷ್ಮೀವೆಂಕಟೇಶ ದೇವಾಲಯದ ಸಮೀಪದ ರಾಧೇಶ್ಯಾಮ ಕಟ್ಟಡದ ಏಸ್ ಕಚೇರಿ (0820-4299111)ಯನ್ನು ಸಂಪರ್ಕಿಸುವಂತೆ ಸಂಸ್ಥೆಯ ನಿರ್ದೇಶಕ
ಅಕ್ಷೋಭ್ಯ ಆಚಾರ್ಯ (9901420714) ಪ್ರಕಟಣೆ ತಿಳಿಸಿದೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!