ಕರಾಟೆ ಬ್ಲ್ಯಾಕ್ ಬೆಲ್ಟ್ ನಲ್ಲಿ ಆರನೇ ಪದವಿ
(ಸುದ್ದಿಕಿರಣ ವರದಿ)
ಉಡುಪಿ: ಇಲ್ಲಿನ ಬುಡೋಕಾನ್ ಕರಾಟೆ ಆ್ಯಂಡ್ ಸ್ಪೋರ್ಟ್ಸ್ ಅಸೋಸಿಯೇಶನ್ ಅಧ್ಯಕ್ಷ ಹಾಗೂ ಕರಾಟೆ ಮುಖ್ಯ ಶಿಕ್ಷಕ ಮತ್ತು ಮುಖ್ಯ ಪರೀಕ್ಷಕ ವಾಮನ ಪಾಲನ್ ಅಂಬಲಪಾಡಿ ಕರಾಟೆ ಕ್ರೀಡೆಯ ಪ್ರಮುಖ ಘಟ್ಟವಾಗಿರುವ ಬ್ಲ್ಯಾಕ್ ಬೆಲ್ಟ್ ಆರನೇ ಪದವಿ ಪಡೆಯುವುದರೊಂದಿಗೆ ಶಿಹಾನ್ ಶ್ರೇಣಿಯಿಂದ ರೆಂಷಿ ಶ್ರೇಣಿಗೆ ಪದೋನ್ನತಿ ಹೊಂದಿದ್ದಾರೆ.
ಅವರು ಕರಾಟೆ ಬ್ಲ್ಯಾಕ್ ಬೆಲ್ಟ್ ಆರನೇ ಪದವಿ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರೈಸಿ, ಕರಾಟೆ ಬುಡೋಕಾನ್ ಇಂಟರ್ ನ್ಯಾಷನಲ್ ಆಸ್ಟ್ರೇಲಿಯಾ ಇದರ ಏಷ್ಯಾ ಮುಖ್ಯ ಶಿಕ್ಷಕ ಹಂಷಿ ಬಿ. ಪರಮೇಶ್ ಅವರಿಂದ ಬ್ಲ್ಯಾಕ್ ಬೆಲ್ಟ್ ಪಟ್ಟಿ ಆರನೇ ಪದವಿಯ ಬೆಲ್ಟ್ ಹಾಗೂ ಪ್ರಮಾಣಪತ್ರವನ್ನು ಹೈದರಾಬಾದ್ ಕೆಬಿಐ ಏಷ್ಯಾ ಮುಖ್ಯ ಕಚೇರಿಯಲ್ಲಿ ಪಡೆದರು