Saturday, August 13, 2022
Home ಲೋಕಾಭಿರಾಮ ಆರೋಗ್ಯ ಮಕ್ಕಳಿಗೂ ಲಸಿಕೆ ನೀಡಲು ನಿರ್ಧಾರ

ಮಕ್ಕಳಿಗೂ ಲಸಿಕೆ ನೀಡಲು ನಿರ್ಧಾರ

ನವದೆಹಲಿ- ಮಕ್ಕಳಿಗೆ ಕೊರೊನಾ ವ್ಯಾಕ್ಸಿನ್ ನೀಡಲು ಕೇಂದ್ರ ಸರ್ಕಾರ ತೀರ್ಮಾನ ಮಾಡಿದೆ.

ಈ ಬಗ್ಗೆ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, 15 ರಿಂದ 18 ವರ್ಷ ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡಲಾಗುವುದು ಎಂದು ನರೇಂದ್ರ ಮೋದಿ ಘೋಷಣೆ ಮಾಡಿದರು.

ಇನ್ನು 60 ವರ್ಷ ಮೇಲ್ಪಟ್ಟರಿಗೆ ಹಾಗೂ ಖಾಯಿಲೆ ಪೀಡಿತ ರೋಗಿಗಳಿಗೆ ಬೂಸ್ಟರ್ ಡೋಸ್ ನೀಡಲಾಗುವುದು ಎಂದು ಮೋದಿ ತಿಳಿಸಿದರು.

ಆರೋಗ್ಯ ಕಾರ್ಯಕರ್ತರು ಹಾಗೂ ಫ್ರಂಟ್ ಲೈನ್ ನಲ್ಲಿ ಇರುವರಿಗೆ ಕೂಡ ಬೂಸ್ಟರ್ ಡೋಸ್ ನೀಡಲಾಗುತ್ತದೆ ಎಂದು ಅವರು ಹೇಳಿದರು.

ಜನವರಿ 10 ರಿಂದ ಬೂಸ್ಟರ್ ಡೋಸ್ ನೀಡಲಾಗುವುದು ಎಂದು ನರೇಂದ್ರ ಮೋದಿ ತಿಳಿಸಿದರು.

ವಿಶ್ವದಲ್ಲೆ ಡಿಎನ್ಎ ಆಧಾರಿತ ವ್ಯಾಕ್ಸಿನ್ ತಯಾರಿಸಲಾಗಿದೆ. ಮೂಗಿನ ಮೂಲಕ ವ್ಯಾಕ್ಸಿನ್ ಹಾಕುವ ವ್ಯವಸ್ಥೆ ತರಲಾಗುವುದು ಎಂದು ನರೇಂದ್ರ ಮೋದಿ‌ ವಿವರಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!