Thursday, December 2, 2021
Home ಲೋಕಾಭಿರಾಮ ಉದ್ಯೋಗ ಮಹಿಳೆಯರು ಸ್ವಾವಲಂಬಿಗಳಾಗಿ ಬಾಳಬೇಕು

ಮಹಿಳೆಯರು ಸ್ವಾವಲಂಬಿಗಳಾಗಿ ಬಾಳಬೇಕು

ಮಹಿಳೆಯರು ಸ್ವಾವಲಂಬಿಗಳಾಗಿ ಬಾಳಬೇಕು

ಕಾರ್ಕಳ, ನ. 19 (ಸುದ್ದಿಕಿರಣ ವರದಿ): ಮಹಿಳೆಯರು ಸ್ವಾವಲಂಬಿಗಳಾಗಿ ಬಾಳಬೇಕು. ಆಗ ಮಾತ್ರ ಮಹಿಳೆಯರಿಗೆ ಸಮಾನತೆ, ಗೌರವ, ಸಮ್ಮಾನ ಸಿಗಲು ಸಾಧ್ಯ ಎಂದು ವೆಂಕಟರಮಣ ಮಹಿಳಾ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ, ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆ ಅಧ್ಯಕ್ಷೆ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷತ್ತು ಕಾರ್ಕಳ ಘಟಕ ಅಧ್ಯಕ್ಷೆ ಮಿತ್ರಪ್ರಭಾ ಹೆಗ್ಡೆ ಹೇಳಿದರು.

ಶ್ರೀನಿವಾಸ ಸೇವಾ ಟ್ರಸ್ಟ್ ಹಾಗೂ ಸುಮೇಧ ಫ್ಯಾಶನ್ ಇನ್ ಸ್ಟಿಟ್ಯೂಟ್ ಆ್ಯಂಡ್ ಫ್ಯಾಬ್ರಿಕ್ ಅಸೋಸಿಯೇಶನ್ ಆಶ್ರಯದಲ್ಲಿ ನಡೆದ 3 ದಿನಗಳವಧಿಯ ಫ್ಯಾಬ್ರಿಕ್ ಪೈಂಟಿಂಗ್ ಹಾಗೂ ಕ್ಲೇ ಜ್ಯುವೆಲ್ಲರಿ ತಯಾರಿ ಉಚಿತ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಮಹಿಳೆಯರು ತಮ್ಮ ಪದವಿ ಶಿಕ್ಷಣ ಮುಗಿಸಿದ ನಂತರ ಸರ್ಕಾರಿ ಕೆಲಸಕ್ಕಾಗಿ ಕಾದು ಕುಳಿತುಕೊಳ್ಳುವ ಬದಲು ಇಂದಿನ ದಿನಗಳಲ್ಲಿ ಅತ್ಯಂತ ಹೆಚ್ಚು ಬೇಡಿಕೆ ಇರುವ ಫ್ಯಾಶನ್ ಡಿಸೈನಿಂಗ್ ನಂಥ ಕೋರ್ಸುಗಳನ್ನು ಕಲಿತು ಆದಾಯ ಗಳಿಸುವ ಮೂಲಕ ತಾನು ಅಬಲೆಯಲ್ಲ, ನಾನೂ ಪುರುಷರಂತೆ ಅತ್ಯುತ್ತಮ ಸ್ವನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಮತ್ತು ಧೈರ್ಯ ಹೊಂದಬಹುದು. ಮಹಿಳೆಯರು ಸ್ವಇಚ್ಛೆಯಿಂದ ಸ್ವಉದ್ಯೋಗ ಮಾಡುವ ಮೂಲಕ ತಮ್ಮ ಕುಟುಂಬದ ಆಧಾರ ಸ್ತಂಭಗಳಾಗಬಹುದು ಎಂದರು.

ಸಂಪನ್ಮೂಲವ್ಯಕ್ತಿಯಾಗಿ ಪುಷ್ಪಾಂಜಲಿ ರಾವ್ ಭಾಗವಹಿಸಿದ್ದರು.

ಸುಮೇಧ ಫ್ಯಾಶನ್ ಇನ್ ಸ್ಟಿಟ್ಯೂಟ್ ಪ್ರಾಂಶುಪಾಲೆ ಸಾಧನಾ ಜಿ. ಆಶ್ರಿತ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಶಿಬಿರದಲ್ಲಿ ಬ್ಲೌಸ್ ಎಂಬ್ರಾಯ್ಡರಿ ಪೈಂಟಿಂಗ್, ಟೈ ಆ್ಯಂಡ್ ಡ್ರೈ, ಪ್ಯಾಚ್ ವರ್ಕ್, ಕಚ್ ವರ್ಕ್, ಜುವೆಲ್ಲರಿ ಮೇಕಿಂಗ್ ಮುಂತಾದ ವಿಷಯದಲ್ಲಿ ತರಬೇತಿ ನೀಡಲಾಯಿತು.

ಜಯಂತಿ ಸ್ವಾಗತಿಸಿ, ಚಂದನ ಹೇರೂರು ವಂದಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!