Wednesday, July 6, 2022
Home ಸಮಾಚಾರ ಜಿಲ್ಲಾ ಸುದ್ದಿ ಮೇವಿ ಮಿರಾಂದ ಅವರಿಗೆ ಪಿಎಚ್.ಡಿ

ಮೇವಿ ಮಿರಾಂದ ಅವರಿಗೆ ಪಿಎಚ್.ಡಿ

ಮೇವಿ ಮಿರಾಂದ ಅವರಿಗೆ ಪಿಎಚ್.ಡಿ

ಉಡುಪಿ: ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವಾಣಿಜ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಮೇವಿ ಮಿರಾಂದ ಅವರು ತಮಿಳುನಾಡಿನ ಭಾರತಿಯಾರ್ ವಿಶ್ವವಿದ್ಯಾನಿಲಯದಲ್ಲಿ ಸಲ್ಲಿಸಿರುವ ಸ್ಟ್ರೆಸ್ ಮ್ಯಾನೇಜ್ಮೆಂಟ್ ಎಮಂಗ್ ವುಮೆನ್ ಎಂಪ್ಲಾಯೀಸ್ ಆಫ್ ಪಬ್ಲಿಕ್ ಸೆಕ್ಟರ್ ಇನ್ಶೂರೆನ್ಸ್ ಕಂಪೆನೀಸ್: ಎ ಸ್ಟಡೀ ವಿಥ್ ರೆಫರೆನ್ಸ್ ಟು ಕೋಸ್ಟಲ್ ಕರ್ನಾಟಕ ಎಂಬ ಮಹಾಪ್ರಬಂಧಕ್ಕೆ ಪಿಎಚ್.ಡಿ ಪದವಿ ಪಡೆದಿದ್ದಾರೆ.

ಅವರು ಅಜ್ಜರಕಾಡು ಡಾ| ಜಿ. ಶಂಕರ್ ಮಹಿಳಾ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತ್ರ ವಿಭಾಗ ಪ್ರಾಧ್ಯಾಪಕ ಡಾ. ಉಮೇಶ್ ಮಯ್ಯ ಮಾರ್ಗದರ್ಶನದಲ್ಲಿ ಪ್ರಬಂಧ ಸಿದ್ಧಪಡಿಸಿದ್ದರು.

ಮಂಗಳೂರು ವಿಶ್ವವಿದ್ಯಾನಿಲಯದಿಂದ ಎಂ.ಕಾಂ. ಪದವಿ ಹಾಗೂ ಅಣ್ಣಾಮಲೈ ವಿಶ್ವವಿದ್ಯಾನಿಲಯದಿಂದ ಎಂ.ಫಿಲ್ ಪದವಿ ಪಡೆದಿರುವ ಮೇವಿ, ಭಟ್ಕಳ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕ ಸೇವೆ ಪ್ರಾರಂಭಿಸಿ ಪ್ರಸ್ತುತ ತೆಂಕನಿಡಿಯೂರು ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಅನೇಕ ವಿಚಾರಸಂಕಿರಣಗಳಲ್ಲಿ ಅವರು ಪ್ರಬಂಧ ಮಂಡಿಸಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!