Saturday, July 2, 2022
Home ಲೋಕಾಭಿರಾಮ ಸ್ವಯಂಪ್ರೇರಿತ ರಕ್ತದಾನಕ್ಕೆ ಕರೆ

ಸ್ವಯಂಪ್ರೇರಿತ ರಕ್ತದಾನಕ್ಕೆ ಕರೆ

ಉಡುಪಿ: ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ರಕ್ತದ ಕೊರತೆ ಸಂಭವಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸ್ವಯಂಪ್ರೇರಿತರಾಗಿ ಯುವಜನತೆ ರಕ್ತದಾನದಲ್ಲಿ ಪಾಲ್ಗೊಳ್ಳುವಂತೆ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ ವಿನಂತಿಸಿದ್ದಾರೆ.

ಮೇ 1ರಿಂದ 18 ವರ್ಷ ಪೂರೈಸಿದ ಎಲ್ಲರಿಗೂ ಕೋವಿಡ್ ಲಸಿಕೆ ನೀಡಲು ಸರ್ಕಾರ ನಿರ್ಧರಿಸಿದ್ದು, ಸರ್ಕಾರದ ಮಾರ್ಗಸೂಚಿಯಂತೆ ಲಸಿಕೆ ಪಡೆದ 28 ದಿನಗಳ ವರೆಗೆ ರಕ್ತ ನೀಡುವಂತಿಲ್ಲ. ಆದ್ದರಿಂದ 2 ಡೋಸ್ ನಿಂದ ಸುಮಾರು 2- 3 ತಿಂಗಳ ಕಾಲ ರಕ್ತದಾನ ಮಾಡಲು ಸಾಧ್ಯವಾಗುವುದಿಲ್ಲ. ಈ ಸಮಯದಲ್ಲಿ ಆಸ್ಪತ್ರೆಗೆ ಅವಶ್ಯವಿರುವಷ್ಟು ರಕ್ತದ ಸಂಗ್ರಹ ಆಗದೆ ಇರುವುದರಿಂದ ಕೆಲವೊಂದು ಕಾಯಿಲೆಗಳು ಮತ್ತು ಅಪಘಾತ ಸಂದರ್ಭದಲ್ಲಿ ತುರ್ತು ಶಸ್ತ್ರಚಿಕಿತ್ಸೆ ಮುಂದೂಡುವ ಅನಿವಾರ್ಯತೆ ತಲೆದೋರಲಿದೆ. ರಕ್ತದಾನಿಗಳಲ್ಲಿ ಹೆಚ್ಚಿನವರು 18ರಿಂದ 40 ವರ್ಷದ ವಯೋಮಾನದವರಾಗಿರುವುದರಿಂದ ಲಸಿಕೆ ಪಡೆಯುವುದಕ್ಕೂ ಒಂದೆರಡು ದಿನ ಮುನ್ನವೇ ಸಮೀಪದ ಮಣಿಪಾಲ ಸಂಸ್ಥೆಯ ಆಸ್ಪತ್ರೆಗಳಲ್ಲಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿ ಸಂಭವನೀಯ ರಕ್ತದ ಕೊರತೆ ನೀಗಿಸಿ, ಪ್ರಾಣ ರಕ್ಷಣೆಯಲ್ಲಿ ಸಹಕರಿಸಬೇಕಾಗಿ ಡಾ. ಅವಿನಾಶ ಶೆಟ್ಟಿ ವಿನಂತಿಸಿದ್ದಾರೆ.

10ಕ್ಕಿಂತ ಹೆಚ್ಚು ಮಂದಿ ದಾನಿಗಳಿದ್ದಲ್ಲಿ ವಾಹನ ವ್ಯವಸ್ಥೆ ಮಾಡುವುದಾಗಿಯೂ ತಿಳಿಸಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!