Thursday, December 2, 2021
Home ಸಮಾಚಾರ ರಾಷ್ಟ್ರೀಯ ವಾರ್ತೆ ಆಸ್ಟ್ರೋ ಮೋಹನ್ ಗೆ ಅಮೆರಿಕಾ ಫೊಟೋಗ್ರಾಫಿಕ್ ಸೊಸೈಟಿ ಅಸೋಸಿಯೇಟ್ ಗೌರವ

ಆಸ್ಟ್ರೋ ಮೋಹನ್ ಗೆ ಅಮೆರಿಕಾ ಫೊಟೋಗ್ರಾಫಿಕ್ ಸೊಸೈಟಿ ಅಸೋಸಿಯೇಟ್ ಗೌರವ

ಆಸ್ಟ್ರೋ ಮೋಹನ್ ಗೆ ಅಮೆರಿಕಾ ಫೊಟೋಗ್ರಾಫಿಕ್ ಸೊಸೈಟಿ ಅಸೋಸಿಯೇಟ್ ಗೌರವ

ಉಡುಪಿ, ನ.7 (ಸುದ್ದಿಕಿರಣ ವರದಿ): ಛಾಯಾಚಿತ್ರ ಗ್ರಹಣ ಕಲಾ ಶಿಕ್ಷಣದ ಅಭಿವೃದ್ಧಿ ಹಾಗೂ ಸಂಘಟನೆಗಾಗಿನ ಕೊಡುಗೆಯನ್ನು ಗುರುತಿಸಿ ಅಮೆರಿಕಾದ ಫೊಟೋಗ್ರಾಫಿಕ್ ಸೊಸೈಟಿ ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ಅವರಿಗೆ ಅಸೋಸಿಯೇಟ್ ಶಿಪ್ ಪದವಿ ನೀಡಿ ಗೌರವಿಸಿದೆ.

ಕರ್ನಾಟದ ಪತ್ರಿಕಾ ಛಾಯಾಗ್ರಾಹಕರಿಗೆ ಈ ಗೌರವ ಲಭಿಸುತ್ತಿರುವುದು ಛಾಯಾಚಿತ್ರ ಗ್ರಹಣ ಕ್ಷೇತ್ರದಲ್ಲಿ ವಿಶಿಷ್ಟ ಎನಿಸಿದೆ. ಸಾಮಾನ್ಯವಾಗಿ ಛಾಯಾಚಿತ್ರ ಗ್ರಾಹಕ ಕಲಾವಿದರ ಕಲಾಕೃತಿ, ನೈಪುಣ್ಯತೆ ಪರಿಗಣಿಸಿ ಇಂಥ ಸ್ಥಾನಮಾನ ನೀಡಲಾಗುತ್ತದೆ. ಆದರೆ, ಸೃಜನಶೀಲ ಛಾಯಾಚಿತ್ರದೊಂದಿಗೆ ಉದಯೋನ್ಮುಖ ಹಾಗೂ ಆಸಕ್ತರಿಗೆ ಛಾಯಾಚಿತ್ರ ಶಿಕ್ಷಣ ನೀಡುವಿಕೆಯನ್ನು ಪರಿಗಣಿಸಿ ಅಸೋಸಿಯೇಟ್ ಶಿಪ್ ನೀಡಿ ಗೌರವಿಸಿರುವುದು ವಿಶೇಷ.

ಅಮೆರಿಕಾದ ಫೋಟೋಗ್ರಾಫಿ ಸೊಸೈಟಿ ಈ ಸಾಲಿನ ನವೆಂಬರ್ ಮ್ಯಾಗಜಿನ್ ನಲ್ಲಿ ಈ ಕುರಿತು ಅಧಿಕೃತವಾಗಿ ಪ್ರಕಟಿಸಿದೆ.

ಸುದೀರ್ಘ ಅನುಭ
ಛಾಯಾಚಿತ್ರ ಗ್ರಹಣ ಕ್ಷೇತ್ರದಲ್ಲಿ ಸುಮಾರು 27 ವರ್ಷಗಳ ಅನುಭವ ಹೊಂದಿರುವ ಆಸ್ಟ್ರೋ, ಕಳೆದ 25 ವರ್ಷದಿಂದ ಉದಯವಾಣಿ ಪತ್ರಿಕಾ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪ್ರಶಸ್ತಿಗಳ ಸರದಾರ
ಇದುವರೆಗೆ ಛಾಯಾಚಿತ್ರ ಕ್ಷೇತ್ರದಲ್ಲಿ 188 ಅಂತಾರಾಷ್ಟ್ರೀಯ ಪುರಸ್ಕಾರ, 500ಕ್ಕೂ ಅಧಿಕ ರಾಷ್ಟ್ರೀಯ ಪುರಸ್ಕಾರ ಪಡೆದಿದ್ದಾರೆ.

ಛಾಯಾಚಿತ್ರ ಪತ್ರಿಕೋದ್ಯಮ , ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಕುರಿತು ಹಾಗೂ ಜಿಲ್ಲೆಯ ಕುರಿತು ಆರು ಚಿತ್ರಸಂಪುಟಗಳನ್ನು ಹೊರತಂದಿದ್ದಾರೆ.

ಶ್ರವಣಬೆಳಗೊಳದ ಗೊಮ್ಮಟಮೂರ್ತಿಯ ಅಪೂರ್ವ ಫೊಟೋ ತೆಗೆದಿದ್ದಾರೆ.

ತರಬೇತುದಾರ
ಸಾಮಾನ್ಯರೂ ಸುಲಭವಾಗಿ ಅರ್ಥ ಮಾಡಿಕೊಳ್ಳುವಂತೆ ಛಾಯಾಚಿತ್ರ ಶಿಕ್ಷಣವನ್ನು ಸುಲಲಿತವಾಗಿ ಬೋಧಿಸುವ ಶೈಲಿಯನ್ನು ಗುರುತಿಸಿ ಕೆನಾನ್ ಸಂಸ್ಥೆ, ಆಸ್ಟ್ರೋ ಅವರನ್ನು ತರಬೇತುದಾರರನ್ನಾಗಿ ಸ್ವೀಕರಿಸಿದೆ.

ದಾವಣಗೆರೆ ವಿ.ವಿ. ಪತ್ರಿಕೋದ್ಯಮ ವಿಭಾಗದ ತಾಂತ್ರಿಕ ಸಲಹೆಗಾರರಾಗಿದ್ದಾರೆ.

ಕುವೈಟ್, ಬಹರೈನ್ ಮತ್ತು ಸಿಂಗಾಪುರಗಳಲ್ಲಿಯೂ ಫೋಟೋಗ್ರಫಿ ಶಿಕ್ಷಣ ನೀಡಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!