Tuesday, May 17, 2022
Home ಸಮಾಚಾರ ರಾಜ್ಯ ವಾರ್ತೆ ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನ ಪ್ರತಿಷ್ಠಾನಕ್ಕೆ ರಾಜ್ಯಪಾಲರಿಂದ ಪ್ರಶಂಸೆ

ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನ ಪ್ರತಿಷ್ಠಾನಕ್ಕೆ ರಾಜ್ಯಪಾಲರಿಂದ ಪ್ರಶಂಸೆ

ಸುದ್ದಿಕಿರಣ ವರದಿ
ಶನಿವಾರ, ಏಪ್ರಿಲ್ 30

ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನ ಪ್ರತಿಷ್ಠಾನಕ್ಕೆ ರಾಜ್ಯಪಾಲರಿಂದ ಪ್ರಶಂಸೆ
ಬೆಂಗಳೂರು: ಗ್ಲೋಬಲ್ ಇಂಡಿಯಾ ಬಿಸಿನೆಸ್ ಫೋರಮ್ ಈಚೆಗೆ ಆಯೋಜಿಸಿದ್ದ ವೃತ್ತಿಪರ ಶ್ರೇಷ್ಠತೆಗಾಗಿ ರಾಷ್ಟ್ರೀಯ ಪ್ರಶಸ್ತಿ ವಿತರಣೆ ಮತ್ತು ಗ್ಲೋಬಲ್ ಸೆಮಿನಾರ್ ಕಾರ್ಯಕ್ರಮದಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯಲ್ಲಿ ವಿನೂತನ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಉಡುಪಿ ಜಿಲ್ಲೆ ಕುಂದಾಪುರ ಬಳಿಯ ಮೂಡಲುಗಿಳಿಯಾರಿನಲ್ಲಿರುವ ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನ ಪ್ರತಿಷ್ಠಾನ ಕೇಂದ್ರಕ್ಕೆ ಗ್ಲೋಬಲ್ ಇಂಡಿಯಾ ಬಿಸಿನೆಸ್ ಫೋರಮ್ ನಿಂದ ರಾಷ್ಟ್ರೀಯ ಪ್ರಶಸ್ತಿ ಲಭಿಸಿದ್ದು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ವಿವೇಕ್ ಉಡುಪ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ, ಅಭಿನಂದಿಸಿದರು.

ಭಾರತ, ಯೋಗ ಹಾಗೂ ಪ್ರಕೃತಿ ಚಿಕಿತ್ಸೆಯಲ್ಲಿ ವಿಶ್ವಕ್ಕೇ ಮಾದರಿಯಾಗಿದೆ. ಜನಸಾಮಾನ್ಯರು ತಮ್ಮ ದೈನಂದಿನ ಜೀವನಲ್ಲಿ ಸಹಜವಾದ ಯೋಗ ಹಾಗೂ ಪಕೃತಿ ಚಿಕಿತ್ಸೆ ಅರಿತು ಅನುಸರಿಸಬೇಕು. ಅದರಿಂದ ನಮ್ಮ ಸುತ್ತ ಆರೋಗ್ಯದ ವಾತಾವಾರಣ ನಿಮರ್ಾಣ ಮಾಡಲು ಸಾಧ್ಯ ಎಂದು ರಾಜ್ಯಪಾಲರು ತಿಳಿಸಿದರು.

ಕಾರ್ಯಕ್ರಮದಲ್ಲಿ ಯುನೈಟೆಡ್ ರಿಪಬ್ಲಿಕ್ ಆಫ್ ಅಮೆರಿಕಾ ಹೈ ಕಮಿಷನ್ ಅನಿಸಾ ಕಪುಫಿ ಎಂಬೆಗಾ, ತಾಂಝಾನಿಯಾ ಹೈ ಕಮಿಷನರ್ ರೋಜರ್ ಗೋಪಾಲ್, ಟ್ರಿನಿಡಾಡ್ ಮತ್ತು ಟೊಬಾಗೋ ಹೈ ಕಮಿಷನರ್ ಮುಸ್ತಫಾ ಡಿಯೋರಿ, ನೈಜರ್ ರಾಯಭಾರ ಕಚೇರಿಯ ನಿಲೇಶ್ ಕುಮಾರ್, ಫಿಜಿಯ ಹೈ ಕಮಿಷನ್ ಸಲಹೆಗಾರ, ಭಾರತದಲ್ಲಿನ ಬೆಲಾರಸ್ ರಾಯಭಾರ ಕಚೇರಿಯ ಹಿರಿಯ ಸಲಹೆಗಾರ ವಿಟಾಲಿ ಮಿರುಟ್ಕೊ, ಜಾಗತಿಕ ಅಧ್ಯಕ್ಷ ಜಿತೇಂದ್ರ ಜೋಶಿ ಮೊದಲಾದವರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!