Monday, July 4, 2022
Home ಲೋಕಾಭಿರಾಮ ಸಿ.ಬಿ.ಎಸ್.ಇ. 10ನೇ ತರಗತಿ ಪರೀಕ್ಷೆಯಲ್ಲಿ ಸಾಧನೆ

ಸಿ.ಬಿ.ಎಸ್.ಇ. 10ನೇ ತರಗತಿ ಪರೀಕ್ಷೆಯಲ್ಲಿ ಸಾಧನೆ

ಸಿ.ಬಿ.ಎಸ್.ಇ. 10ನೇ ತರಗತಿ ಪರೀಕ್ಷೆಯಲ್ಲಿ ಸಾಧನೆ

(ಸುದ್ದಿಕಿರಣ ವರದಿ)
ಮಣಿಪಾಲ: ಇಲ್ಲಿನ ಮಾಧವ ಕೃಪಾ ಶಾಲೆಯ ಅವಳಿ ವಿದ್ಯಾರ್ಥಿಗಳಾದ ತನ್ಮಯ್ ಹಾಗೂ ಚಿನ್ಮಯ್ ಸಿ.ಬಿ.ಎಸ.್ಇ 10ನೇ ತರಗತಿ ಪರೀಕ್ಷೆಯಲ್ಲಿ ಅನುಕ್ರಮವಾಗಿ ಶೇ. 95 ಹಾಗೂ ಶೇ. 91.2 ಅಂಕ ಗಳಿಸಿದ್ದಾರೆ.

ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯ 94, ಕನ್ನಡ 94, ಗಣಿತ 99, ವಿಜ್ಞಾನ 94 ಮತ್ತು ಸಮಾಜ ವಿಜ್ಞಾನದಲ್ಲಿ 94 ಅಂಕ ಸಹಿತ 500ರಲ್ಲಿ 475 ಅಂಕಗಳನ್ನು ತನ್ಮಯ್ ಗಳಿಸಿದ್ದರೆ, ಚಿನ್ಮಯ್ ಇಂಗ್ಲಿಷ್ ಭಾಷೆ ಮತ್ತು ಸಾಹಿತ್ಯ 94, ಕನ್ನಡ 94, ಗಣಿತ 94, ವಿಜ್ಞಾನ 79, ಸಮಾಜ ವಿಜ್ಞಾನ 95 ಸಹಿತ ಒಟ್ಟು 456 ಅಂಕ ಪಡೆದಿದ್ದಾನೆ.

ಚದುರಂಗದಾಟ (ಚೆಸ್)ದಲ್ಲಿ ಹಲವು ಬಹುಮಾನ ಪಡೆದಿರುವ ಇವರು ವಿಜಯ ಕರ್ನಾಟಕ ಉಡುಪಿ ವರದಿಗಾರ ಎಸ್. ಜಿ. ಕುರ್ಯ ಹಾಗೂ ಮಹೇಶ್ ಪ. ಪೂ. ಕಾಲೇಜು ಗಣಿತ ಉಪನ್ಯಾಸಕಿ ಗೀತಾ ಕುಮಾರಿ ದಂಪತಿ ಪುತ್ರರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!