Monday, July 4, 2022
Home ಲೋಕಾಭಿರಾಮ ಜೀವನವೇ ಸೃಜನಶೀಲತೆಗೆ ಪ್ರೇರಣೆ

ಜೀವನವೇ ಸೃಜನಶೀಲತೆಗೆ ಪ್ರೇರಣೆ

ಮಣಿಪಾಲ: ಸೃಜನಶೀಲತೆಗೆ ಮೂಲ ಪ್ರೇರಣೆ ಜೀವನ. ಒಬ್ಬ ಕಲಾವಿದ ತನ್ನನ್ನು ಸುತ್ತಮುತ್ತಲಿನ ಪರಿಸರದಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ ಮತ್ತು ಪ್ರತ್ಯೇಕಿಸಲೂಬಾರದು ಎಂದು ಖ್ಯಾತ ಬರಹಗಾರ ಜಯಂತ ಕಾಯ್ಕಿಣಿ ಅಭಿಪ್ರಾಯ ವ್ಯಕ್ತಪಡಿಸಿದರು.

ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ಆಶ್ರಯದ ಮಣಿಪಾಲ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ ಮಾಹೆ ಆಯೋಜಿಸಿರುವ ಎರಡು ದಿನಗಳ ವಿದ್ಯಾರ್ಥಿಗಳ ಅಂತಾರಾಷ್ಟ್ರೀಯ ಉತ್ಸವ ತತ್ವಾಂಕುರ ಉದ್ಘಾಟಿಸಿ ಮಾತನಾಡಿದರು.

ಸೃಜನಶೀಲತೆ ಬಗ್ಗೆ ಮಾತನಾಡುವುದೆಂದರೆ ಮೌನದ ಬಗ್ಗೆ ಮಾತನಾಡಿದಂತೆ. ಮೌನದ ಬಗ್ಗೆ ಮಾತನಾಡಲು ಪ್ರಾರಂಭಿಸಿದ ಕ್ಷಣವೇ ಮೌನ ಇಲ್ಲವಾಗುತ್ತದೆ ಎಂದರು.

ಲೇಖಕ ಯಶವಂತ ಚಿತ್ತಾಲ ಅವರನ್ನು ಉಲ್ಲೇಖಿಸಿ ಬರವಣಿಗೆ ಮತ್ತು ಸೃಜನಶೀಲತೆ ಕೆಲಸ, ಪ್ರಪಂಚದ ಬಗ್ಗೆ ಯೋಚಿಸುವಂತೆ ಮತ್ತು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸುವಂತೆ ಎಂದರು.

ಮಾಹೆ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಆರೋಗ್ಯ, ತಾಂತ್ರಿಕ ಮತ್ತು ಮಾನವಿಕ ಶಾಸ್ತ್ರಗಳಿಗೆ ಮಾಹೆ ಸಮಾನ ಆದ್ಯತೆ ನೀಡುತ್ತದೆ. ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿ ಆರ್ಟ್ಸ್ ಅಂಡ್ ಸೈನ್ಸಸ್ ತನ್ನ ಸೃಜನಶೀಲ ಚಟುವಟಿಕೆಗಳೊಂದಿಗೆ ಈ ಉದ್ದೇಶ ಪೂರೈಸುತ್ತಿದೆ ಎಂದರು.

ಜಿಸಿಪಿಎಎಸ್ ನಿರ್ದೇಶಕ ಪ್ರೊ. ವರದೇಶ್ ಹಿರೇಗಂಗೆ, ತತ್ವಾಂಕುರ ಇಂದಿನ ದುಗುಡದ ಸಂದರ್ಭಕ್ಕೆ ಪ್ರತಿಕ್ರಿಯಿಸುವ ಮತ್ತು ಈ ಸಮಯವನ್ನು ಬದಲಾಯಿಸುವ ಅಥವಾ ಮೀರುವ ವಿದ್ಯಾರ್ಥಿಗಳ ಪ್ರಯತ್ನ ಎಂದರು.

ಶ್ರಾವ್ಯ ಬಾಸ್ರಿ ಅವರು ಕಾಯ್ಕಿಣಿ ಅವರ ಒಂದು ಸುಂದರ ಸಂಯೋಜನೆ ಪ್ರಸ್ತುತಪಡಿಸಿದರು, ವಿಜೇತ್ ಕೃಷ್ಣ ಬಾಳಿಲ ವಂದಿಸಿದರು. ಲಾವಣ್ಯ ಎನ್. ಕೆ. ಸ್ವಾಗತಿಸಿ, ನಿರೂಪಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!