ಉಡುಪಿ: ಸ್ಟೆಥೋಸ್ಕೋಪ್ ಹಿಡಿದು ಆಸ್ಪತ್ರೆಗಾಗಮಿಸುವ ಕೈಗಳು, ಹಟ್ಟಿ (ಗೋಶಾಲೆ)ಗೆ ಹೋಗಿ ದನಗಳ ಮೈದಡವಿ ಅವುಗಳಿಗೆ ಮೇವು ನೀಡಬಲ್ಲವು ಎಂಬುದಕ್ಕೆ ಉದಾಹರಣೆ ಗಾಂಧಿ ಆಸ್ಪತ್ರೆ ಆಡಳಿತ ನಿರ್ದೇಶಕ ಡಾ. ಹರಿಶ್ಚಂದ್ರ.
ಹೆಬ್ರಿ ಸಮೀಪದ ತಮ್ಮ ಸ್ವಂತ ಜಾಗದಲ್ಲಿ ಕೃಷಿಯೊಂದಿಗೆ ದನಗಳನ್ನೂ ಸಾಕುತ್ತಿರುವ ಆ ಮೂಲಕ ಗೋಪ್ರೇಮ ಮೈಗೂಡಿಸಿಕೊಂಡಿರುವ ಡಾ. ಹರಿಶ್ಚಂದ್ರ ಮತ್ತವರ ಪತ್ನಿ ಲಕ್ಷ್ಮಿ ಅವರು ದೀಪಾವಳಿ ಗೋಪೂಜೆ ಸಂದರ್ಭ ದನಗಳಿಗೆ ಗೋಗ್ರಾಸ ನೀಡಿದರು.
ನಗರ ಜೀವನ ಮರೆತು ಅಪ್ಪಟ ಹಳ್ಳಿಗನಂತೆ ಪಂಚೆ ಎತ್ತಿಕಟ್ಟಿ ಗೋಗ್ರಾಸ ನೀಡಿದ ಡಾ. ಹರಿಶ್ಚಂದ್ರ ಕಪಟವಿಲ್ಲದ, ಅಪ್ಪಟ ಗೋಪ್ರೀತಿ ಮೆರೆದರು. ತಂದೆ, ತಾಯಿಯ ಗೋಪ್ರೇಮಕ್ಕೆ ಮಗಳು ಪಂಚಮಿಯೂ ದನಿಯಾದಳು.
ವೈದ್ಯರೋರ್ವರು ದನ ಸಾಕಣೆ ಮಾಡುತ್ತಿರುವುದು ಸಂತಸದಾಯಕ ಮತ್ತು ಇತರರಿಗೆ ಪ್ರೇರಣೆಯೂ ಹೌದು.