Monday, July 4, 2022
Home ಲೋಕಾಭಿರಾಮ ಆರಂಬ ಹಡಿಲು ಭೂಮಿ ಕೃಷಿಗೆ ಚಾಲನೆ

ಹಡಿಲು ಭೂಮಿ ಕೃಷಿಗೆ ಚಾಲನೆ

ಉಡುಪಿ: ಸ್ಥಳೀಯ ಶಾಸಕ ಕೆ. ರಘುಪತಿ ಭಟ್ ನೇತೃತ್ವದಲ್ಲಿ ಕೇದಾರೋತ್ಥಾನ ಟ್ರಸ್ಟ್ ಆಶ್ರಯದಲ್ಲಿ ಸಾವಯುವ ಕೃಷಿ ಉತ್ಪನ್ನ ಬೆಳೆಸುವ ನಿಟ್ಟಿನಲ್ಲಿ ಅಂಬಲಪಾಡಿ ಗ್ರಾಮ ಪಂಚಾಯತ್ ಮತ್ತು ಗ್ರಾಮೋತ್ಥಾನ ಸಮಿತಿ ಅಂಬಲಪಾಡಿ ಸಹಯೋಗದೊಂದಿಗೆ ಅಂಬಲಪಾಡಿ ವಾರ್ಡಿನ ಸುಮಾರು 25 ಎಕ್ರೆ ಹಡಿಲು ಭೂಮಿಯಲ್ಲಿ ಕೃಷಿ ಚಟುವಟಿಕೆಗೆ ಕೇದಾರೋತ್ಥಾನ ಟ್ರಸ್ಟ್ ಕೋಶಾಧಿಕಾರಿ, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ. ರಾಘವೇಂದ್ರ ಕಿಣಿ ಬುಧವಾರ ಅಂಬಲಪಾಡಿ ಬಂಕೇರ್ಕಟ್ಟ ಅಂಗನವಾಡಿ ಕೇಂದ್ರ ಬಳಿ ಸುರೇಶ್ ಶೆಟ್ಟಿ ಗದ್ದೆಗೆ ಹಾಲೆರೆಯುವ ಮೂಲಕ ಚಾಲನೆ ನೀಡಿದರು.

ಅಂಬಲಪಾಡಿ ಬಂಕೇರ್ಕಟ್ಟ ಪ್ರದೇಶದಲ್ಲಿ ಸುಮಾರು 10 ಎಕ್ರೆ ಹಡಿಲು ಗದ್ದೆಯಲ್ಲಿ ಟ್ರಾಕ್ಟರ್ ಮೂಲಕ ಉಳುಮೆ ಆರಂಭಿಸಲಾಯಿತು.

ಈ ಸಂದರ್ಭದಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ಸದಸ್ಯ ಪ್ರವೀಣ್ ಕುಮಾರ್ ಶೆಟ್ಟಿ ಕಪ್ಪೆಟ್ಟು, ಅಂಬಲಪಾಡಿ ಗ್ರಾ. ಪಂ. ಅಧ್ಯಕ್ಷೆ ರೋಹಿಣಿ ಎಸ್. ಪೂಜಾರಿ ಕಪ್ಪೆಟ್ಟು, ಗ್ರಾ. ಪಂ. ಉಪಾಧ್ಯಕ್ಷ ಗ್ರಾಮೋತ್ಥಾನ ಸಮಿತಿ ಗೌರವ ಸಲಹೆಗಾರ ಸೋಮನಾಥ ಬಿ. ಕೆ., ಗ್ರಾ. ಪಂ. ಪಿ.ಡಿ.ಒ. ವಸಂತಿ, ಗ್ರಾಮೋತ್ಥಾನ ಸಮಿತಿ ಗೌರವ ಸಂಚಾಲಕ ಯೋಗೀಶ್ ಶೆಟ್ಟಿ, ಪ್ರಧಾನ ಸಂಚಾಲಕ ಶಿವಕುಮಾರ್ ಅಂಬಲಪಾಡಿ, ಗೌರವ ಸಲಹೆಗಾರರಾದ ರಾಜೇಂದ್ರ ಪಂದುಬೆಟ್ಟು ಮತ್ತು ಕೇಳು ನಾರಾಯಣ, ಸಹ ಸಂಚಾಲಕರಾದ ರಾಜೇಶ್ ಸುವರ್ಣ, ಮಹೇಂದ್ರ ಕೋಟ್ಯಾನ್, ಸುನಿಲ್ ಕುಮಾರ್, ಹರೀಶ್ ಆಚಾರ್ಯ ಮತ್ತು ದಯಾಶಿನಿ ಪಂದುಬೆಟ್ಟು, ಬಿಲ್ಲವ ಸೇವಾ ಸಂಘ ಶ್ರೀ ವಿಠೋಬ ಭಜನಾ ಮಂದಿರದ ಭಜನಾ ಸಂಚಾಲಕ ಕೆ. ಮಂಜಪ್ಪ ಸುವರ್ಣ, ಶ್ರೀ ಉಮಾಮಹೇಶ್ವರ ಭಜನಾ ಮಂದಿರ ಕಾರ್ಯದರ್ಶಿ ಭರತ್ ರಾಜ್ ಕೆ. ಎನ್., ಹಡಿಲು ಗದ್ದೆಗಳ ಮಾಲೀಕ ಹಾಗೂ ಕೃಷಿಕ ಸುರೇಶ್ ಶೆಟ್ಟಿ, ಶರತ್ ಶೆಟ್ಟಿ, ನಾರಾಯಣ ಪೂಜಾರಿ, ಓಬು ಪೂಜಾರಿ, ಸುಧಾಕರ ಪೂಜಾರಿ, ಡೇನಿಸ್ ಕ್ವಾಡ್ರಸ್, ಕೀರ್ತನ್ ಶೆಟ್ಟಿ, ಗಣೀಶ್ ಶೆಟ್ಟಿ, ಸುನೀತಾ ಶೆಟ್ಟಿ, ವಿಠಲ ಹಾಗೂ ಸ್ಥಳೀಯರಾದ ರಾಧಾಕೃಷ್ಣ, ಕೇಶವ ಶ್ರೀಯಾನ್, ವಿನೋದ ಪೂಜಾರಿ, ನಾಗರಾಜ್ ಕರ್ಕೇರ, ಗಣೀಶ್ ಪೂಜಾರಿ, ಕೀರ್ತನಾ, ರಂಜಿತಾ, ನಂದಕುಮಾರ್ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!