Monday, July 4, 2022
Home ಲೋಕಾಭಿರಾಮ ಆರಂಬ ಕೃಷಿ ಸಂಸ್ಕೃತಿಯ ರಕ್ಷಣೆಗೆ ಕರೆ

ಕೃಷಿ ಸಂಸ್ಕೃತಿಯ ರಕ್ಷಣೆಗೆ ಕರೆ

ಬ್ರಹ್ಮಾವರ: ನಮ್ಮದು ಕೃಷಿ ಮತ್ತು ಋಷಿ ಸಂಸ್ಕೃತಿ. ನಮ್ಮ ಜನತೆ ಎಲ್ಲಾ ವಿಚಾರಗಳಲ್ಲೂ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಈ ಭೂಮಿ ನಮ್ಮನ್ನು ಹೊತ್ತ ತಾಯಿ. ಅದನ್ನು ಹಸನು ಮಾಡುವ ಕೃಷಿ ಕಾರ್ಯ ಭೂಮಿಗೆ ಜೀವ ನೀಡುವ ಕೆಲಸ. ಈ ನಿಟ್ಟಿನಲ್ಲಿ ಕೃಷಿ ಸಂಸ್ಕೃತಿ ರಕ್ಷಣೆ ನಮ್ಮೆಲ್ಲರ ಹೊಣೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.

ನೀಲಾವರ ಕಳುವಿನಬೆಟ್ಟು ಬಳಿ ಶುಕ್ರವಾರ ಭೂಮಿಗೆ ಹಾಲೆರೆಯುವ ಮೂಲಕ ಕೇದಾರೋತ್ಥಾನ ಟ್ರಸ್ಟ್ ಆಶ್ರಯದ ಹಡಿಲು ಭೂಮಿ ಕೃಷಿ ನಾಟಿ ಕಾರ್ಯಕ್ಕೆ ಚಾಲನೆ ನೀಡಿದರು.

ವಿಪರೀತವಾದ ಪಾಶ್ಚಾತ್ಯೀಕರಣ, ಕೃಷಿಯಿಂದ ಲಾಭ ಕಡಿಮೆ ಎನ್ನುವ ಮನಃಸ್ಥಿತಿಯಿಂದ ಕೃಷಿ ಭೂಮಿ ಹಡಿಲು ಬೀಳುತ್ತಿವೆ. ನಾವು ಮಣ್ಣಿನ ಸಂಸ್ಕೃತಿಯವರು. ಮಣ್ಣಿನಲ್ಲಿ ಬೆರೆಯಬೇಕು. ಅಂದರೆ ಕೃಷಿ ಮಾಡಬೇಕು. ಅದರಿಂದ ಸದೃಢ ಆರೋಗ್ಯ ನಮ್ಮದಾಗುತ್ತದೆ. ತಾಯಿಯಂತೆ ಪೂಜಿಸುವ ಭೂಮಿಯನ್ನು ಬರಿದಾಗಲು ಬಿಡಬಾರದು. ಈ ನಿಟ್ಟಿನಲ್ಲಿ ಉಡುಪಿಯಲ್ಲಿ ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ನಡೆಯುತ್ತಿರುವ ಕೃಷಿ ಕಾರ್ಯ ಜಗತ್ತೇ ಮೆಚ್ಚುವಂಥದ್ದು. ಅದಕ್ಕೆ ಎಲ್ಲರೂ ಸ್ಪಂದನೆ ನೀಡಬೇಕು ಎಂದರು.

ಬೈಂದೂರು ಶಾಸಕ ಬಿ. ಎಂ. ಸುಕುಮಾರ್ ಶೆಟ್ಟಿ, ನೀಲಾವರ ಮಹಿಷಮರ್ದಿನಿ ದೇವಳ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎನ್. ರಘುರಾಮ ಮಧ್ಯಸ್ಥ, ಉದ್ಯಮಿ ವಿಶ್ವನಾಥ ಸನಿಲ್ ಅಭ್ಯಾಗತರಾಗಿದ್ದರು.
ನೀಲಾವರ ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಂದ್ರ ಕುಮಾರ್, ಬಿಜೆಪಿ ರಾಜ್ಯ ಎಸ್. ಟಿ ಮೋರ್ಚಾ ಕಾರ್ಯದರ್ಶಿ ಉಮೇಶ್ ನಾಯ್ಕ್, ನೀಲಾವರ ಗ್ರಾಮ ಪಂಚಾಯತ್ ಸದಸ್ಯ ರಮೇಶ್ ಪೂಜಾರಿ, ಉಡುಪಿ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಪಕ್ಷ ಪ್ರಮುಖರಾದ ಧನಂಜಯ ಅಮೀನ್, ನೀಲಾವರ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಅಡಿಗ, ಕೇದಾರೋತ್ಥಾನ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಮುರಳಿ ಕಡೆಕಾರ್, ಕೋಶಾಧಿಕಾರಿ ರಾಘವೇಂದ್ರ ಕಿಣಿ, ಸದಸ್ಯರಾದ ಬಿರ್ತಿ ರಾಜೇಶ್ ಶೆಟ್ಟಿ ಮತ್ತು ಪ್ರತಾಪ್ ಹೆಗ್ಡೆ ಮಾರಾಳಿ, ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗ ಮತ್ತು ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಬ್ರಹ್ಮಾವರದ ಹಿರಿಯ ಕ್ಷೇತ್ರ ಅಧಿಕಾರಿ ಶಂಕರ್ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!