ಕೈತೋಟ ಮಾಹಿತಿ ಶಿಬಿರ
(ಸುದ್ದಿಕಿರಣ ವರದಿ)
ಮಣಿಪಾಲ: ಇಲ್ಲಿನ ಭಾರತೀಯ ವಿಕಾಸ ಟ್ರಸ್ಟ್ ಆಶ್ರಯದಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ಕಚೇರಿ ಮಂಗಳೂರು ಸಹಯೋಗದೊಂದಿಗೆ ಕೈತೋಟ ಮತ್ತು ತಾರಸಿ ತೋಟದ ಉಚಿತ ಮಾಹಿತಿ ಶಿಬಿರ ಆ. 18ರಂದು ಭಾರತೀಯ ವಿಕಾಸ ಟ್ರಸ್ಟ್ ನಲ್ಲಿ ಆಯೋಜಿಸಲಾಗಿದೆ.
ಕಾರ್ಯಕ್ರಮ ಬೆಳಿಗ್ಗೆ 10ರಿಂದ ಪ್ರಾರಂಭವಾಗಲಿದ್ದು, ಕೃಷಿ ಸಂಶೋಧನಾ ಕೇಂದ್ರದ ವಿಜ್ಞಾನಿಗಳು ಕೈತೋಟ ಮತ್ತು ತಾರಸಿ ಕೃಷಿಯ ಪ್ರಾಮುಖ್ಯತೆ, ತರಕಾರಿ ಬೆಳೆಗಳು, ಮಣ್ಣಿನ ಫಲವತ್ತತೆ ಕಾಯ್ದುಕೊಳ್ಳುವ ವಿಧಾನ, ಸಾವಯವ ಗೊಬ್ಬರ ತಯಾರಿ ಇತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ನೀಡುವರು.
ಇದೇ ಸಂದರ್ಭದಲ್ಲಿ ಭಾರತೀಯ ವಿಕಾಸ ಟ್ರಸ್ಟ್ ಮತ್ತು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ನೀಡುವ ತರಕಾರಿ ಬೀಜಗಳ ವಿತರಣೆಗೆ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಪ್ರಾದೇಶಿಕ ವ್ಯವಸ್ಥಾಪಕ ಸೂರ್ಯನಾರಾಯಣ ರಾವ್ ಚಾಲನೆ ನೀಡುವರು. ಬ್ರಹ್ಮಾವರ ಕೃಷಿ ಕೇಂದ್ರ ಮುಖ್ಯಸ್ಥ ಡಾ. ಧನಂಜಯ ಮತ್ತು ಹಿರಿಯ ವಿಜ್ಞಾನಿ ಡಾ. ಚೈತನ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಶಿಬಿರದಲ್ಲಿ ಭಾಗವಹಿಲಿಚ್ಛಿಸುವವರು ಕಾರ್ಯಕ್ರಮ ದಿನದಂದು ಆಗಮಿಸುವಂತೆ ಸಂಸ್ಥೆ ಪ್ರಕಟಣೆ ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಭಾರತೀಯ ವಿಕಾಸ ಟ್ರಸ್ಟ್, `ಅನಂತ’, ಪೆರಂಪಳ್ಳಿ, ಮಣಿಪಾಲ- ಅಂಬಾಗಿಲು ರಸ್ತೆ, ಉಡುಪಿ- 576 102 (ದೂ.: 0820-2570263)ನ್ನು ಸಂಪರ್ಕಿಸಬಹುದು