Thursday, July 7, 2022
Home ಲೋಕಾಭಿರಾಮ ಆರಂಬ ವೈಜ್ಞಾನಿಕ ಕೃಷಿಗೆ ಉತ್ತೇಜಿಸಲು ಕ್ರಮ

ವೈಜ್ಞಾನಿಕ ಕೃಷಿಗೆ ಉತ್ತೇಜಿಸಲು ಕ್ರಮ

ಉಡುಪಿ: ಮುಂದಿನ ಇನ್ನು ಒಂದು ವರ್ಷದೊಳಗೆ ಜಿಲ್ಲೆಯಲ್ಲಿ 5 ಸಾವಿರ ಮಂದಿ ಕೃಷಿಕರನ್ನಾದರೂ ವೈಜ್ಞಾನಿಕ ರೀತಿಯ ಕೃಷಿಯಲ್ಲಿ ತೊಡಗಿಕೊಳ್ಳಲು ಉತ್ತೇಜನ ನೀಡುವ ಮೂಲಕ ಕೃಷಿಯೂ ಲಾಭದಾಯಕ ಎಂದು ತೋರಿಸಿಕೊಡಲು ಜಿಲ್ಲಾ ಕೃಷಿಕ ಸಂಘ ಕಾರ್ಯಪ್ರವೃತ್ತವಾಗಲಿದೆ ಎಂದು ಜಿಲ್ಲಾ ಕೃಷಿಕ ಸಂಘ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಹೇಳಿದರು.

ಉಡುಪಿ ಜಿಲ್ಲಾ ಕೃಷಿಕ ಸಂಘ ಆಶ್ರಯದಲ್ಲಿ ಫೆ. 7ರಂದು ನಗರದ ಕುಂಜಿಬೆಟ್ಟು ಶ್ರೀಶಾರದಾ ಮಂಟಪದಲ್ಲಿ ನಡೆಯಲಿರುವ ರೈತ ಸಮಾವೇಶ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆ, ಕೃಷಿ ಕ್ಷೇತ್ರದಲ್ಲಿ ಪ್ರಥಮ ಸ್ಥಾನ ಪಡೆಯುವಂತೆ ಪ್ರಯತ್ನಿಸುವ ಮೂಲಕ ಮಾಜಿ ಸಚಿವರೋರ್ವರು ತನ್ನ ತನ್ನ ಆಡಳಿತಾವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಕೃಷಿಕರೇ ಇಲ್ಲ ಎಂದಿದ್ದ ಮಾತನ್ನು ಸುಳ್ಳು ಮಾಡಬೇಕು ಎಂದವರು ಸವಾಲೆಸೆದರು.

ನಿವೃತ್ತ ಮುಖ್ಯೋಪಾಧ್ಯಾಯ ಮತ್ತು ಯಕ್ಷಗಾನ ಕಲಾರಂಗ ಕಾರ್ಯದರ್ಶಿ ಮುರಳಿ ಕಡೆಕಾರು ಹಾಗೂ ಕಟಪಾಡಿ ವಿಜಯಾ ಇಂಡಸ್ಟ್ರೀಸ್ ಮತ್ತು ವಿಜಯಾ ಸೋಲಾರ್ ಮಾಲಿಕ ಸತ್ಯೇಂದ್ರ ಪೈ ರೈತ ಸಮಾವೇಶದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.

ಸಂಘದ ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್ ಮಲ್ಲಂಪಳ್ಳಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಕುದಿ ಶ್ರೀನಿವಾಸ ಭಟ್ ಪ್ರಸ್ತಾವನೆಗೈದರು.

ಪದಾಧಿಕಾರಿಗಳಾದ ಹೆರ್ಗ ದಿನೇಶ್ ಶೆಟ್ಟಿ, ಪಾಂಡುರಂಗ ನಾಯಕ್ ಹಿರಿಯಡ್ಕ, ಜೋಸೆಫ್ ಕುಂದರ್ ಮಣಿಪುರ, ಸುಧರ್ಮ ಕುಂದರ್ ಕಲಾಯಿಬೈಲ್, ಜಯಲಕ್ಷ್ಮಿ ಪಿತ್ರೋಡಿ, ರಂಜಿತ್ ಶೆಟ್ಟಿ, ಸುಜಾತ ಶೆಟ್ಟಿ ಮಂದರ್ತಿ, ಭಾರತಿ ಶೆಟ್ಟಿ, ಶ್ರೀನಿವಾಸ ಪೂಜಾರಿ ಅಂಜಾರು, ಸುರೇಶ್ ನಾಯಕ್ ಅಲೆವೂರು. ಪೇತ್ರಿ ಅನ್ನಪೂರ್ಣ ನರ್ಸರಿಯ ಪ್ರಸಾದ್ ಭಟ್ ಮೊದಲಾದವರಿದ್ದರು.

ಜಿಲ್ಲಾ ಕೃಷಿಕ ಸಂಘ ಕಾರ್ಯದರ್ಶಿ ರವೀಂದ್ರ ಗುಜ್ಜರಬೆಟ್ಟು ನಿರೂಪಿಸಿ, ವಂದಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!