Saturday, July 2, 2022
Home ಲೋಕಾಭಿರಾಮ ಎಸ್.ಡಿ.ಎಂ. ಆಯುರ್ವೇದ ಆಸ್ಪತ್ರೆಯಲ್ಲಿದೆ ಸೌಂದರ್ಯ ಚಿಕಿತ್ಸೆ

ಎಸ್.ಡಿ.ಎಂ. ಆಯುರ್ವೇದ ಆಸ್ಪತ್ರೆಯಲ್ಲಿದೆ ಸೌಂದರ್ಯ ಚಿಕಿತ್ಸೆ

ಉಡುಪಿ: ಇಲ್ಲಿನ ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆಯಲ್ಲಿ ಸೌಂದರ್ಯ ಚಿಕಿತ್ಸಾ ವಿಭಾಗ (Department of Aesthetic medicine) ಕಾರ್ಯನಿರ್ವಹಿಸುತ್ತಿದೆ.

ಭಾನುವಾರ ಹೊರತುಪಡಿಸಿ ಉಳಿದ ದಿನಗಳಲ್ಲಿ ಬೆಳಿಗ್ಗೆ 9ರಿಂದ ಮಧ್ಯಾಹ್ನ 12 ಮತ್ತು ಅಪರಾಹ್ನ 2ರಿಂದ ಸಂಜೆ 5ರ ವರೆಗೆ ಕಾರ್ಯನಿರ್ವಹಿಸಲಿದೆ.

ಮೊಡವೆ, ಬ್ಲ್ಯಾಕ್ ಹೆಡ್ಸ್, ವೈಟ್ ಹೆಡ್ಸ್, ಸೌಂದರ್ಯ ಪ್ರಸಾಧನಗಳಿಂದ ಉಂಟಾದ ಅಡ್ಡಪರಿಣಾಮ, ಒಡೆದ ಕಾಲುಗಳು, ವರ್ಣ ವಿಕಾರ, ತಲೆಹೊಟ್ಟು, ಹೇನು ಉಪದ್ರ ಇತ್ಯಾದಿ ದೇಹ ಸೌಂದರ್ಯ ಸಂಬಂಧಿತ ಸಮಸ್ಯೆ ಬಗ್ಗೆ ಆಯುರ್ವೇದ ಸಲಹೆ ಹಾಗೂ ಚಿಕಿತ್ಸೆ ಪಡೆಯಬಹುದು.

ತಜ್ಞ ವೈದ್ಯರಾದ ಡಾ. ಲಿಖಿತಾ ಡಿ. ಎನ್., ಡಾ. ಶುಭಾ ಆರ್. ಶೆಟ್ಟಿ, ಡಾ. ರಶ್ಮಿ ಪ್ರಸಾದ್ ಹಾಗೂ ಡಾ. ಮಮಿತಾ ನಿಶಿತ್ ಸೇವೆಗೆ ಲಭ್ಯರಿದ್ದು, ಅಗತ್ಯವುಳ್ಳವರು ಸದುಪಯೋಗಪಡಿಸಿಕೊಳ್ಳುವಂತೆ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಡಾ. ಮಮತಾ ಕೆ. ವಿ. ಹಾಗೂ ವೈದ್ಯಕೀಯ ಅಧೀಕ್ಷಕ ಡಾ. ನಾಗರಾಜ್ ಎಸ್. ತಿಳಿಸಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!