Monday, July 4, 2022
Home ಲೋಕಾಭಿರಾಮ ಕಾಲೇಜು ವಾರ್ಷಿಕ ಸಂಚಿಕೆಗೆ ಪ್ರಥಮ ಪ್ರಶಸ್ತಿ

ಕಾಲೇಜು ವಾರ್ಷಿಕ ಸಂಚಿಕೆಗೆ ಪ್ರಥಮ ಪ್ರಶಸ್ತಿ

ಕಾಲೇಜು ವಾರ್ಷಿಕ ಸಂಚಿಕೆಗೆ ಪ್ರಥಮ ಪ್ರಶಸ್ತಿ

(ಸುದ್ದಿಕಿರಣ ವರದಿ)
ಉಡುಪಿ: ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ 2019- 20ನೇ ಸಾಲಿನ ಕಾಲೇಜು ವಾರ್ಷಿಕ ಸಂಚಿಕೆ ಹಿರಿಯ ಸಿರಿ ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜಿತ ಕಾಲೇಜುಗಳ ವಾರ್ಷಿಕ ಸಂಚಿಕೆ ಸ್ಪರ್ಧೆಯ ವರ್ಗ 2ರಲ್ಲಿ ಅತ್ಯುತ್ತಮ ಕಾಲೇಜು ವಾರ್ಷಿಕ ಸಂಚಿಕೆ ಪ್ರಥಮ ಬಹುಮಾನ ಪಡೆದಿದೆ.

ವಿಶ್ವವಿದ್ಯಾನಿಲಯದಲ್ಲಿ ನಡೆದ ಸರಳ ಸಮಾರಂಭದಲ್ಲಿ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ. ಎಸ್. ಯಡಪಡಿತ್ತಾಯ ಪ್ರಶಸ್ತಿ ಪ್ರದಾನ ಮಾಡಿದರು. ಕಾಲೇಜಿನ ಪ್ರಾಂಶುಪಾಲೆ ಮತ್ತು ಸಂಚಿಕೆಯ ಪ್ರಧಾನ ಸಂಪಾದಕಿ ಡಾ| ನಿಕೇತನ, ಸಂಪಾದಕಿ ಸುಜಯಾ ಕೆ. ಎಸ್. ಮತ್ತು ಸಹಾಯಕ ಪ್ರಾಧ್ಯಾಪಕ ಶರತ್ ಕುಮಾರ್ ಪ್ರಶಸ್ತಿ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ವಿ.ವಿ ಕುಲಸಚಿವ ಡಾ| ಕಿಶೋರ್ ಕುಮಾರ್, ಪರೀಕ್ಷಾಂಗ ಕುಲಸಚಿವ ಡಾ| ಪಿ. ಎಲ್ ಧರ್ಮ ಹಾಗೂ ಶೈಕ್ಷಣಿಕ ಮಂಡಳಿ ಸದಸ್ಯರು, ವಿವಿಧ ವಿಭಾಗಗಳ ಡೀನ್ ಗಳು ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!