Monday, July 4, 2022
Home ಲೋಕಾಭಿರಾಮ ಎಸ್.ಎಸ್.ಎಲ್.ಸಿ ಪರೀಕ್ಷೆ: ಜಿಲ್ಲೆಯ 11 ಮಂದಿ ವಿದ್ಯಾರ್ಥಿಗಳಿಗೆ 625 ಅಂಕ

ಎಸ್.ಎಸ್.ಎಲ್.ಸಿ ಪರೀಕ್ಷೆ: ಜಿಲ್ಲೆಯ 11 ಮಂದಿ ವಿದ್ಯಾರ್ಥಿಗಳಿಗೆ 625 ಅಂಕ

ಎಸ್.ಎಸ್.ಎಲ್.ಸಿ ಪರೀಕ್ಷೆ ಫಲಿತಾಂಶ
ಜಿಲ್ಲೆಯ 11 ಮಂದಿ ವಿದ್ಯಾರ್ಥಿಗಳಿಗೆ 625 ಅಂಕ

(ಸುದ್ದಿಕಿರಣ ವರದಿ)
ಉಡುಪಿ: 2020- 21ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ಜಿಲ್ಲೆಯ 11 ಮಂದಿ ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದಿದ್ದಾರೆ.

ಸರಕಾರಿ ಪ. ಪೂ. ಕಾಲೇಜು ಒಳಕಾಡು- ಅಭೀಷೇಕ ಜಯಂತ ಹೊಳ್ಳ, ವಿ.ಕೆ.ಆರ್ ಆಚಾರ್ಯ ಕುಂದಾಪುರ- ಅನುಶ್ರೀ ಶೆಟ್ಟಿ, ಪ್ರಣೀತ ಮತ್ತು ಸೃಜನ್ ಆರ್. ಭಟ್, ಮದರ್ ತೆರೆಸಾ ಶಾಲೆ ಶಂಕರನಾರಾಯಣ- ಅನುಶ್ರೀ ಶೆಟ್ಟಿ, ಟಿ.ಎ. ಪೈ ಆಂಗ್ಲಮಾಧ್ಯಮ ಪ್ರೌಢಶಾಲೆ, ಕುಂಜಿಬೆಟ್ಟು- ನವನೀತ ಎಸ್ ರಾವ್, ಅನಂತೇಶ್ವರ ಶಾಲೆ ಉಡುಪಿ- ಪ್ರತೀಕ್ಷಾ ಪೈ, ಸರಕಾರಿ ಪ.ಪೂ ಬಾಲಕಿಯರ ಕಾಲೇಜು ಉಡುಪಿ- ಸಮತಾ ಎಚ್. ಎಸ್., ನಾರಾಯಣ ಗುರು ಶಾಲೆ ಮಲ್ಪೆ- ಸಾತ್ವಿಕ ಪಿ. ಭಟ್, ಸ್ಟೆಲ್ಲಾ ಮೇರಿಸ್ ಶಾಲೆ ಗಂಗೊಳ್ಳಿ- ಶ್ರೇಯಾ, ವಿವೇಕ ಶಾಲೆ ಕೋಟ- ಶ್ರೀನಿಧಿ ಟಾಪರ್ ಆಗಿ ಮೂಡಿಬಂದಿದ್ದಾರೆ.

ಡಿಡಿಪಿಐ ಅಭಿನಂದನೆ
ಉಡುಪಿ ಸರಕಾರಿ ಬಾಲಕಿಯರ ಪ.ಪೂ. ಕಾಲೇಜು ವಿದ್ಯಾರ್ಥಿನಿ ಸಮತಾ ಮನೆಗೆ ತೆರಳಿ ಡಿಡಿಪಿಐ ಎನ್. ಎಚ್. ನಾಗೂರ ಅಭಿನಂದಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!