Sunday, July 3, 2022
Home ಲೋಕಾಭಿರಾಮ ಬಾಲಕಾರ್ಮಿಕತೆ ನಿಲ್ಲಿಸಿ ಶಿಕ್ಷಣ ಒದಗಿಸಲು ಆಗ್ರಹ

ಬಾಲಕಾರ್ಮಿಕತೆ ನಿಲ್ಲಿಸಿ ಶಿಕ್ಷಣ ಒದಗಿಸಲು ಆಗ್ರಹ

ಉಡುಪಿ: ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿ ಆಯೋಜಿಸಿರುವ ಬಾಲಕಾರ್ಮಿಕತೆ ನಿಲ್ಲಿಸಿ, ಶಿಕ್ಷಣ ಒದಗಿಸಿ ಅಭಿಯಾನದ ಭಾಗವಾಗಿ ಕ್ಯಾಂಪಸ್ ಫ್ರಂಟ್ ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಕಾರ್ಮಿಕ ಇನ್ಸ್ಪೆಕ್ಟರ್, ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿ, ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ನೀಡಲಾಯಿತು.

ಗ್ರಾಮದಲ್ಲಿರುವ ಪ್ರತಿಯೊಂದು ವಿದ್ಯಾರ್ಥಿಯೂ ಶಿಕ್ಷಣದಿಂದ ವಂಚಿತವಾಗಬಾರದು.

ಬಾಲಕಾರ್ಮಿಕತೆಗೊಳಗಾದ ಮಕ್ಕಳಿದ್ದರೆ ಅವರಿಗೆ ಶಿಕ್ಷಣ ಒದಗಿಸುವ ಯೋಜನೆಯನ್ನು ಸರಕಾರ ರೂಪಿಸಬೇಕು. ಕಾರ್ಯಾಂಗ ವ್ಯವಸ್ಥೆಯನ್ನು ಸರಿಯಾಗಿ ಸದುಪಯೋಗಪಡಿಸಿ ತಳಮಟ್ಟದಲ್ಲಿ ಅಂದರೆ ಗ್ರಾಮ ಪಂಚಾಯತ್, ಪಟ್ಟಣ ಪಂಚಾಯತ್, ಪುರಸಭೆ, ನಗರಸಭೆ ಮತ್ತು ಮಹಾನಗರಪಾಲಿಕೆ ಅಡಿಯಲ್ಲಿ ಬಾಲ ಕಾರ್ಮಿಕತೆ ತಡೆಗಟ್ಟುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮದ ಬಗ್ಗೆ ಸರಕಾರ ಚಿಂತಿಸಬೇಕಾಗಿದೆ ಎಂದು ಆಗ್ರಹಿಸಿ, ಮನವಿ ನೀಡಲಾಯಿತು.

ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ಉಡುಪಿ ಜಿಲ್ಲಾಧ್ಯಕ್ಷ ಅಸೀಲ್ ಅಕ್ರಮ್, ಜಿಲ್ಲಾ ಕಾರ್ಯದರ್ಶಿ ಮಸೂದ್ ಮನ್ನಾ, ಯೂನಿಟ್ ನಾಯಕರಾದ ನೌಫಾಲ್, ತಾಬಿಷ್ ಮತ್ತು ಸದಸ್ಯರಾದ ಅದ್ನಾನ್, ನಿಹಾದ್ ಮತ್ತು ಅಮಾನ್ ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!