Monday, July 4, 2022
Home ಲೋಕಾಭಿರಾಮ ಸಿಎ ದೇಶದ ಪ್ರಗತಿ ಪಥದ ಜೊತೆಗಾರ ಮತ್ತು ಆರ್ಥಿಕ ಜಗತ್ತಿನ ಹಿತಚಿಂತಕ

ಸಿಎ ದೇಶದ ಪ್ರಗತಿ ಪಥದ ಜೊತೆಗಾರ ಮತ್ತು ಆರ್ಥಿಕ ಜಗತ್ತಿನ ಹಿತಚಿಂತಕ

ಜುಲೈ 1ರಂದು ಲೆಕ್ಕಪರಿಶೋಧಕರ ದಿನಾಚರಣೆ. ಈ ಹಿನ್ನೆಲೆಯಲ್ಲಿ ಉಡುಪಿಯ ಹಿರಿಯ ಸಿಎ ಹಾಗೂ ಭಾರತೀಯ ಲೆಕ್ಕಪರಿಶೋಧಕರ ಸಂಸ್ಥೆ ಉಡುಪಿ ಶಾಖೆ ಸಿಕಾಸ ಅಧ್ಯಕ್ಷ ಸಿಎ ನರಸಿಂಹ ನಾಯಕ್ ಅವರು ಲೆಕ್ಕಪರಿಶೋಧಕರ ಅಗತ್ಯತೆ, ಸಿಎ ಶಿಕ್ಷಣ ಕ್ರಮ ಇತ್ಯಾದಿಗಳ ಬಗ್ಗೆ ಸವಿವರವಾಗಿ ತಿಳಿಸಿದ್ದಾರೆ.

ಮತ್ತೆ ಜು. 1 ಬಂದಿದೆ. ಸಿ.ಎ ಡೇ (ಲೆಕ್ಕಪರಿಶೋಧಕರ ದಿನಾಚರಣೆ)ಯನ್ನು ಆಚರಿಸಲಾಗುತ್ತಿದೆ. ಚಾರ್ಟರ್ಡ್ ಅಕೌಂಟೆಂಟ್ (ಸಿ.ಎ)ಗಳು ಸದಸ್ಯರಾಗಿರುವ ಅಖಿಲ ಭಾರತ ಮಟ್ಟದ ಸಂಸ್ಥೆ ದಿ ಇನ್ ನ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ 1949ರ ಜು. 1ರಂದು ಭಾರತ ಸರ್ಕಾರದ ಸಂಸತ್ತಿನಿಂದ ಮಂಡನೆಯಾಗಿ ಜಾರಿಗೊಳಿಸಲ್ಪಟ್ಟ ಚಾರ್ಟರ್ಡ್ ಅಕೌಂಟೆಂಟ್ ಕಾಯ್ದೆ ಮೂಲಕ ಜನ್ಮತಾಳಿತು. ಕೋವಿಡ್ 19 ಹಾಗೂ ಆರ್ಥಿಕ ಬಿಕ್ಕಟ್ಟಿನ ಈ ಸಂದರ್ಭದಲ್ಲಿಯೂ ಏಪ್ರಿಲ್ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆೆ 1.41 ಲಕ್ಷ ಕೋಟಿ ಸಂಗ್ರಹವಾಗಿ ಹೆಚ್ಚಿನ ದಾಖಲೆಯಾಗಿದೆ. ಸಿ.ಎ.ಗಳು ನೇರವಾಗಿ ಅಥವಾ ಪರೋಕ್ಷವಾಗಿ ಸರಕು ಮತ್ತು ಸೇವಾ ತೆರಿಗೆ ಹಾಗೂ ಆದಾಯ ತೆರಿಗೆ ಸಂಗ್ರಹದಲ್ಲಿ ಸಹಾಯ ಮಾಡುತ್ತಾರೆ. ಇಂಥ ಪರಿಸ್ಥಿತಿಯಲ್ಲಿ ದೇಶದ ಪ್ರಗತಿ ಪಥದ ಜೊತೆಗಾರರಾದ ಸಿ.ಎ.ಗಳ ಪಾತ್ರ ಅತ್ಯಂತ ಪ್ರಮುಖವಾದದ್ದು. ಲಕ್ಷಗಟ್ಟಲೆ ಕಂಪೆನಿಗಳಿರುವ, ಕೋಟಿಗಟ್ಟಲೆ ಉದ್ದಿಮೆಗಳಿರುವ ಭಾರತದಲ್ಲಿ ಇನ್ನೂ ಹಲವಾರು ಲಕ್ಷ ಸಿ.ಎ.ಗಳು ಬೇಕು. ಪ್ರತಿಭಾವಂತ, ಸಾಮಾಜಿಕ ಕಳಕಳಿಯುಳ್ಳ ಪ್ರಯತ್ನಶೀಲ ವಿದ್ಯಾರ್ಥಿಗಳಿಗೆ ಸಿ.ಎ ಪದವಿ ನಿಜಕ್ಕೂ ಆಕರ್ಷಕ. ನೂತನ ಸಿ.ಎ ಶಿಕ್ಷಣ ಕ್ರಮದ ಬಗ್ಗೆ ಒಂದು ಕಿರುಪರಿಚಯ.

ಸಿ.ಎ ಶಿಕ್ಷಣದ ಕ್ರಮ
ಎರಡು ವಿಧಗಳಲ್ಲಿ ಸಿ.ಎ. ಶಿಕ್ಷಣ ಪ್ರಾರಂಭಿಸಬಹುದು.
ಪಿ.ಯು.ಸಿ. ನಂತರ ಪ್ರಾರಂಭಿಸುವವರು
1. ಫೌಂಡೇಶನ್ ಕೋರ್ಸ್ ಗೆ ಸೇರಿ ಆ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು.

2. ಆ ನಂತರ ಇಂಟರ್ ಮೀಡಿಯೇಟ್ ಕೋರ್ಸ್ ಗೆ ಸೇರಿ ಅದರ 2 ಗ್ರೂಪ್ ಗಳಲ್ಲಿ ಒಂದರಲ್ಲಿಯಾದರೂ ಉತ್ತೀರ್ಣರಾಗಬೇಕು. (ಈ ಮಧ್ಯೆ Information Technology ಹಾಗೂ Management skills ಬಗ್ಗೆ ICAI ನಡೆಸುವ ಕೋರ್ಸಿನಲ್ಲಿ 4 ವಾರಗಳ ತರಬೇತಿ ಪಡೆಯಬೇಕು).

3. ಬಳಿಕ 3 ವರ್ಷ ವೃತ್ತಿನಿರತ ಸಿ.ಎ. ಬಳಿ ತರಬೇತಿ (Articleship) ಪಡೆಯಬೇಕು. ಈಮಧ್ಯೆ ಇಂಟರ್ ಮೀಡಿಯೇಟ್ ಇನ್ನೊಂದು ಗ್ರೂಪ್ ಪಾಸಾಗಿರದಿದ್ದಲ್ಲಿ ಅದನ್ನು ಪಾಸ್ ಮಾಡಬೇಕು.

4. ಆರ್ಟಿಕಲ್ ಶಿಪ್ನ ಕೊನೆಯ ಆರು ತಿಂಗಳಲ್ಲಿ ಫೈನಲ್ ಪರೀಕ್ಷೆ ಬರೆಯಬಹುದು. (ಪರೀಕ್ಷೆಗೆ ನೊಂದಾಯಿಸುವ ಮೊದಲು Advanced Information Technology ಹಾಗೂ Management skills  ಬಗ್ಗೆ 4 ವಾರಗಳ ತರಬೇತಿ ಪಡೆದಿರಬೇಕು)

ಡಿಗ್ರಿ ನಂತರ ನೇರವಾಗಿ ಸಿ.ಎ ಶಿಕ್ಷಣ
1. ಕಾಮರ್ಸ್ (ಬಿ.ಕಾಂ/ ಬಿ.ಬಿ.ಎಂ ಇತ್ಯಾದಿ) ಪದವಿಯಲ್ಲಿ 55 ಶೇ. ಮತ್ತು ಇತರ ಪದವಿಯಲ್ಲಿ 60 ಶೇ. ಅಂಕ ಗಳಿಸಿರಬೇಕು.

2. ಇಂಟರ್ ಮೀಡಿಯೇಟ್ ಕೋರ್ಸಿಗೆ ಸೇರಿ 4 ವಾರಗಳ ಇನ್ ಫಾರ್ಮೇಶನ್ ಟೆಕ್ನಾಲಜಿ ತರಬೇತಿ ಪಡೆಯಬೇಕು.

3. ಅನಂತರ 3 ವರ್ಷದ ಆರ್ಟಿಕಲ್ ಶಿಪ್ ಗೆ ಸೇರುವುದು, ಆರ್ಟಿಕಲ್ ಶಿಪ್ ನ 9 ತಿಂಗಳ ಅವಧಿ ಮುಗಿದ ಮೇಲೆ ಇಂಟರ್ ಮೀಡಿಯೇಟ್ ನ 2 ಗ್ರೂಪ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಬೇಕು.

4. ಆರ್ಟಿಕಲ್ ಶಿಪ್ ನ ಕೊನೆಯ ಆರು ತಿಂಗಳಲ್ಲಿ ಫೈನಲ್ ಪರೀಕ್ಷೆ ಬರೆಯಬಹುದು. (ಪರೀಕ್ಷೆಗೆ ನೋಂದಾಯಿಸುವ ಮೊದಲು Advanced Information Technology  ಹಾಗೂ Management skills ಬಗ್ಗೆ 4 ವಾರಗಳ ತರಬೇತಿ ಪಡೆದಿರಬೇಕು)
(ಶಿಕ್ಷಣ ಕ್ರಮ, ಸಿಲೆಬಸ್, ಪರೀಕ್ಷೆ ಇತ್ಯಾದಿಗಳ ಬಗ್ಗೆ ಆಸಕ್ತರು ಸಂಸ್ಥೆಯ www.icai.org ವೆಬ್ಸೈಟ್ನಲ್ಲಿ ಮಾಹಿತಿ ಪಡೆಯಬಹುದು)

ಸಿ.ಎ ಶಿಕ್ಷಣದ ವಿಶೇಷತೆಗಳು
ಅ) ಒಬ್ಬ ಸಿ.ಎ., ಆರ್ಥಿಕ ಜಗತ್ತಿನ ಎಲ್ಲಾ ಆಗು- ಹೋಗುಗಳನ್ನು ತಿಳಿದಿರಬೇಕು. ಹಾಗಾಗಿ ಸಿ.ಎ ಶಿಕ್ಷಣದಲ್ಲಿ ಈ ಬಗ್ಗೆ ಸಮಗ್ರವಾಗಿ ಮಾಹಿತಿ/ ಜ್ಞಾನ ಸಿಗುವಂತೆ ಶಿಕ್ಷಣ ಕ್ರಮ ಸಿದ್ಧಪಡಿಸಲಾಗಿದೆ. ಸಿಲೆಬಸ್ ತುಂಬಾ ವಿಸ್ತಾರವಾಗಿದೆ.

ಬಿ) ಅಧ್ಯಯನದ ಜೊತೆಗೆ ಓದಿದ್ದನ್ನು ಕೃತಿಗಿಳಿಸಲು ಹಾಗೂ ಸಮಗ್ರ/ ವ್ಯಾವಹಾರಿಕ ಜ್ಞಾನ ಪಡೆಯಲು ಸಾಧ್ಯವಾಗುವಂತೆ ಆರ್ಟಿಕಲ್ ಶಿಪ್/ ತರಬೇತಿಯನ್ನು 3 ವರ್ಷ ಕಾಲ ವೃತ್ತಿನಿರತ ಸಿ.ಎ. ಬಳಿ ಪಡೆಯಲು ಸಾಧ್ಯ. ಹಾಗಾಗಿ ಒಬ್ಬ ವಿದ್ಯಾರ್ಥಿ 3 ವರ್ಷ ಕಾಲ ಪಡೆದ ತರಬೇತಿಯ ಜ್ಞಾನದಿಂದ ಸಿ.ಎ. ಪದವಿ ಪಡೆಯದೆಯೂ ತನ್ನ ಸ್ವಂತ ವೃತ್ತಿ (ಲೆಕ್ಕಪತ್ರ ನಿರ್ವಹಣೆ, ತೆರಿಗೆ ಸಲಹೆ ಇತ್ಯಾದಿ) ನಡೆಸಬಲ್ಲ.

ಸಿ) ಸಿ.ಎ ಶಿಕ್ಷಣ ಕ್ರಮ/ ಪರೀಕ್ಷೆಗಳಲ್ಲಿ ಯಾವುದೇ ರೀತಿಯ Donation, Influence Reservation ಇರುವುದಿಲ್ಲ. ಎಲ್ಲಾ ಸಿ.ಎ.ಗಳೂ, ಸಿ.ಎ. ವಿದ್ಯಾರ್ಥಿಗಳೂ ಸಮಾನರು. ಪ್ರತಿಭಾವಂತರಿಗಷ್ಟೇ ಮನ್ನಣೆ. ಹಾಗಾಗಿ ಸಿ.ಎ ಪರೀಕ್ಷೆಗಳ ಮಟ್ಟ ಉನ್ನತ. 50 ಶೇ. ಅಂಕ ಪಡೆದರೂ ಇತರ ಪರೀಕ್ಷೆಗಳಲ್ಲಿ ಡಿಸ್ಟಿಂಕ್ಶನ್ ನಲ್ಲಿ ಪಾಸಾದವರಿಗಿಂತ ಹೆಚ್ಚು ಬೆಲೆ.

ಡಿ) ಅನೇಕರು ಸಿ.ಎ ಪರೀಕ್ಷ ಬಹಳ ಕಷ್ಟಕರ. ಪಾಸಾಗುವವರ ಸಂಖ್ಯೆ ಬಹಳ ವಿರಳ ಎಂದೆಲ್ಲಾ ಆರೋಪಿಸುತ್ತಾರೆ. ಹಾಗೇನಿಲ್ಲ. ಹಿಂದೆಯೂ, ಇಂದೂ ಪರೀಕ್ಷೆಯಲ್ಲಿ ಪಾಸಾಗಲು ಶೇ. 50 ಸರಾಸರಿ ಅಂಕ ಲಭಿಸಿದರೆ ಸಾಕು. ಹಾಗಾಗಿ ಎಲ್ಲಾ ವಿಷಯಗಳಲ್ಲಿ ಂತಜಡಿಚಿರಜ ಜ್ಞಾನ/ ಮಾಹಿತಿಯುಳ್ಳ ವಿದ್ಯಾರ್ಥಿ ಸಿ.ಎ ಮಾಡಬಲ್ಲ. ಆದರೆ, ಸತತ ಅಭ್ಯಾಸ ಬೇಕು. ಕೋಚಿಂಗ್ ಕ್ಲಾಸ್ ಸೇರಿ, ಟಠಣ ಟಞಜಟಥಿ ಪ್ರಶ್ನೆಗಳನ್ನು ಉತ್ತರಿಸಲು ಅಭ್ಯಾಸ ಮಾಡಿದರೆ ಪಾಸಾಗುವುದು ಗ್ಯಾರೆಂಟಿ ಎಂಬ ಮೈಂಡ್ ಸೆಟ್ ಸಿ.ಎ ವಿದ್ಯಾರ್ಥಿಗಳಿಗಿರಬಾರದು.

ಇ) ಇಂದು ಸಿ.ಎ ಪರೀಕ್ಷೆಗಳಲ್ಲಿ ಪಾಸಾಗುವವರ ಶೇಕಡವಾರು ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. 1960- 80ರ ದಶಕಗಳಲ್ಲಿ ಶೇಕಡ 1-2ರಲ್ಲಿದ್ದ ಉತ್ತೀರ್ಣರಾಗುವವರ ಸಂಖ್ಯೆ ಶೇ. 15-20ರಷ್ಟಾಗಿದೆ.

ಇದು ICAI ವಿದ್ಯಾರ್ಥಿಗಳಿಗಾಗಿ ಕೈಗೊಂಡಿರುವ ಈ ಕೆಳಗಿನ ಹಲವಾರು ಶೈಕ್ಷಣಿಕ ಕ್ರಮಗಳಿಂದಾಗಿ.

ICAI ತನ್ನ ವಿದ್ಯಾರ್ಥಿಗಳಿಗಾಗಿ Cloud Campus ನ್ನು ನೀಡಿದೆ. ಈ ವೆಬ್ ಸೈಟ್ನಲ್ಲಿ ಸಿ.ಎ. ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲಾ ಪಠ್ಯಗಳು, ಇ- ಲರ್ನಿಂಗ್, ಇ-ಬುಕ್ಸ್, ವೆಬ್ ಕಾಸ್ಟ್, ವೀಡಿಯೊ ಲೆಕ್ಚರ್ ಗಳು, ಆನ್ ಲೈನ್ ಮೆಂಟೋರಿಂಗ್ ಇತ್ಯಾದಿಗಳನ್ನು ವಿದ್ಯಾರ್ಥಿಗಳು ಉಚಿತವಾಗಿ ಪಡೆಯಬಹುದು. ವಿದ್ಯಾರ್ಥಿಗಳು ಮನೆಯಲ್ಲಿಯೇ ಕುಳಿತು ಇವೆಲ್ಲದರ ಉಪಯೋಗ ಪಡೆದು ಸ್ವಯಂ ಅಧ್ಯಯನ ಮಾಡಬಹುದು.

ವಿದ್ಯಾರ್ಥಿಗಳಿಗೆ ನೋಂದಣಿ ಮಾಡಲು ಅನುಕೂಲವಾಗುವಂತೆ www.icai.org ವೆಬ್ ಸೈಟ್ನಲ್ಲಿ ಸ್ವಯಂ ಸೇವಾ ಪೋರ್ಟಲ್ (Self Service Portal) ಒದಗಿಸಲಾಗಿದೆ. ಅದರ ಮುಖಾಂತರ ಸ್ವಯಂ ವಿದ್ಯಾರ್ಥಿಗಳೇ ಸಿ.ಎ ಕೋರ್ಸಿಗೆ ನೋಂದಣಿ ಮಾಡಬಹುದು. ಸ್ಕಾಲರ್ ಶಿಪ್ ಪಡೆಯಬಹುದು.

ತನ್ನ ನೂರಾರು ಶಾಖೆಗಳ ಮುಖಾಂತರ ಅಂ ವಿದ್ಯಾರ್ಥಿಗಳಿಗಾಗಿ ಅಂಗಸಂಸ್ಥೆ ಖಅಂಖಂ ಸ್ಥಾಪಿಸಿದೆ. ಆ ಮೂಲಕ ವಿದ್ಯಾರ್ಥಿಗಳಿಗಾಗಿ ಪಠ್ಯ/ ಪಠೇತರ ಚಟುವಟಿಕೆ ನಡೆಸುತ್ತಿದೆ. ಉದಾಹರಣೆಗೆ ಭಾಷಣ, ಕ್ವಿಜ್ ಸ್ಪರ್ಧೆ ನಡೆಸುತ್ತಿದೆ. ಆಟೋಟಗಳು, ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರತಿಭಾ ಪ್ರದರ್ಶನ ಇತ್ಯಾದಿಗಳು ನಿರಂತರವಾಗಿ ನಡೆಯುತ್ತದೆ.

ಸಿ.ಎ ಶಿಕ್ಷಣ ಕ್ರಮಕ್ಕೆ ತಗಲುವ ವೆಚ್ಚ (ಕೋಚಿಂಗ್ ಕ್ಲಾಸುಗಳಿಗೆ ಸೇರದಿದ್ದರೆ) ಕೇವಲ ರೂ. 75 ಸಾವಿರ. ಈ ವೆಚ್ಚಗಳನ್ನು ವಿದ್ಯಾರ್ಥಿಗಳು ತಮ್ಮ ಆರ್ಟಿಕಲ್ ಶಿಪ್ ನ ಸ್ಟೈಫಂಡ್ ನಿಂದ ಹೊಂದಿಸಲು ಸಾಧ್ಯ. ಹಾಗಾಗಿ ಸಿ.ಎ.ಯಂಥ ಉಚ್ಚ ಶಿಕ್ಷಣ ಭಾರತದ ವಿದ್ಯಾರ್ಥಿಗಳಿಗೆ ಉಚಿತವಾಗಿ ದೊರೆಯುತ್ತಿದೆ. ಅಲ್ಲದೇ ಸಿ.ಎ. ಮುಗಿಸಿ ಮೊದಲ ತಿಂಗಳೇ 75 ಸಾವಿರ ರೂ.ಗೂ ಹೆಚ್ಚು ಸಂಬಳ ಪಡೆಯುವ ಉದ್ಯೋಗಾವಕಾಶಗಳಿವೆ.

ಇಷ್ಟೆಲ್ಲಾ ವಿಶೇಷ ಸವಲತ್ತುಗಳು ಈ ಉಚ್ಚ ಶಿಕ್ಷಣಕ್ಕೆ ಇರುವುದರಿಂದ ಸಿ.ಎ. ವೃತ್ತಿಗೆ ಮಹತ್ವ ಗೌರವ ಇರುವುದರಿಂದ ನಮ್ಮ ಅರ್ಹ ವಿದ್ಯಾರ್ಥಿಗಳಿಗೆ ಈ ಬಗ್ಗೆ ತಿಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ. Information system audit, financial accounting, risk management, insolvency bankruptcy code, business valuation ಹೀಗೆ ಹಲವಾರು ಕ್ಷೇತ್ರಗಳಲ್ಲಿ ಸಿ.ಎ.ಗಳ ಸೇವೆ ವಿಸ್ತರಿಸುತ್ತಿದೆ. ಭಾರತದಲ್ಲಿ ಮುಂದಿನ ದಿನಗಳಲ್ಲಿ ಸಿ.ಎ.ಗಳಿಗೆ ಬಹಳಷ್ಟು ಅವಕಾಶ ಹೆಚ್ಚಾಗಲಿವೆ.
ಅಂ ದೇಶದ ಲೆಕ್ಕಪತ್ರಗಳ ಗುಣಮಟ್ಟ, ಲೆಕ್ಕಪರಿಶೋಧನೆ, ಲೆಕ್ಕಪತ್ರ- ಶಾಸ್ತ್ರ (Accountancy)ದ ಅಧ್ಯಯನ ಮುಂತಾದವುಗಳ ಬಗ್ಗೆ ಶಿಕ್ಷಣ, ಮಾನದಂಡ ಇತ್ಯಾದಿಗಳನ್ನು ನಿರ್ಧರಿಸಲು, ತನ್ನ ಸದಸ್ಯರ ಮೂಲಕ ಜಾರಿಗೆ ತರಲು ಶಾಸನಬದ್ಧ ಅಧಿಕಾರ ಹೊಂದಿದೆ. ಹಾಗಾಗಿ ಅಂ ನಡೆಸುವ ಸಿ.ಎ. ಶಿಕ್ಷಣ ಕ್ರಮಗಳು ಪರೀಕ್ಷೆಗಳಿಗೆ ಭಾರತ ಸರ್ಕಾರದ ಬೆಂಬಲವಿದೆ ಮತ್ತು ಸಿ.ಎ.ಗಳಿಗೆ ಭಾರತ ಸರ್ಕಾದಿಂದ ಹಾಗೂ ಅನೇಕ ರಾಜ್ಯ ಸರ್ಕಾರಗಳಿಂದ ಜಾರಿಗೊಳಿಸಲ್ಪಟ್ಟ ವಿವಿಧ ಕಾನೂನು, ಸುತ್ತೋಲೆ, ಶಾಸನಗಳಲ್ಲಿ ಮಹತ್ವದ ಸ್ಥಾನವಿದೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಹೇಳಿರುವಂತೆ 1ನೀವು (ಸಿ.ಎ) ನಮ್ಮ ಆರ್ಥಿಕ ಸ್ವಾಸ್ಥ್ಯ ಕಾಪಾಡಬೇಕಾದ ವೈದ್ಯರು’. ಸಿ.ಎ.ಗಳು ಮಾಜಿ ರಾಷ್ಟ್ರಪತಿ ಎ.ಪಿ.ಜೆ ಅಬ್ದುಲ್ ಕಲಾಮ್ ಮಾತಿನಂತೆ ರಾಷ್ಟ್ರ ನಿರ್ಮಾಣದಲ್ಲಿ ಪಾಲುಗಾರರು. ಸಿ.ಎ.ಗಳು ನಿಜವಾಗಿಯೂ ದೇಶದ ಪ್ರಗತಿ ಪಥದ ಜೊತೆಗಾರರು ಹಾಗೂ ದೇಶದ ಹಿತಚಿಂತಕರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!