Wednesday, July 6, 2022
Home ಸಮಾಚಾರ ಜಿಲ್ಲಾ ಸುದ್ದಿ ಆಚಾರ್ಯಾಸ್ ಏಸ್: ಮೇ 19ರಿಂದ ಸಿಇಟಿ, ನೀಟ್ ಕ್ರಾಶ್ ಕೋರ್ಸ್

ಆಚಾರ್ಯಾಸ್ ಏಸ್: ಮೇ 19ರಿಂದ ಸಿಇಟಿ, ನೀಟ್ ಕ್ರಾಶ್ ಕೋರ್ಸ್

ಸುದ್ದಿಕಿರಣ ವರದಿ
ಮಂಗಳವಾರ, ಮೇ 10

ಆಚಾರ್ಯಾಸ್ ಏಸ್: ಮೇ 19ರಿಂದ ಸಿಇಟಿ, ನೀಟ್ ಕ್ರಾಶ್ ಕೋರ್ಸ್
ಉಡುಪಿ: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗುಣಮಟ್ಟದ ತರಬೇತಿ ಆಯೋಜಿಸಿ ಗರಿಷ್ಠ ಫಲಿತಾಂಶ ಗಳಿಸುತ್ತಿರುವ ಇಲ್ಲಿನ ಆಚಾರ್ಯಾಸ್ ಏಸ್ ವತಿಯಿಂದ ಸಿ.ಇ.ಟಿ, ನೀಟ್, ಜೆ.ಇ.ಇ ಕ್ರಾಶ್ ಕೋರ್ಸ್ ತರಬೇತಿ ಮೇ 19ರಿಂದ ಆರಂಭವಾಗಲಿದೆ ಎಂದು ಸಂಸ್ಥೆ ಪ್ರಕಟಣೆ ತಿಳಿಸಿದೆ.

ಕಳೆದ 8 ವರ್ಷದಲ್ಲಿ 10ನೇ ತರಗತಿ, ಪಿಯುಸಿ ಹಾಗೂ ಸಿಇಟಿಯಲ್ಲಿ ಅತ್ಯುತ್ತಮ ಫಲಿತಾಂಶ ಹಾಗೂ ಶ್ರೇಯಾಂಕ ಗಳಿಸಿರುವ ಆಚಾರ್ಯಾಸ್ ಏಸ್ ಈ ಬಾರಿ ಇನ್ನಷ್ಟು ಉಪಯುಕ್ತ ಯೋಜನೆಗಳೊಂದಿಗೆ ತರಬೇತಿ ಆಯೋಜಿಸಿದೆ.

ಸಿಇಟಿ, ಜೆಇಇ, ನೀಟ್
2023ರಲ್ಲಿ ಸಿಇಟಿ, ನೀಟ್ ಹಾಗೂ ಜೆಇಇ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಪ್ರತೀ ಶನಿವಾರ ಹಾಗೂ ಭಾನುವಾರ ತರಬೇತಿ ನಡೆಯಲಿದೆ. ತರಬೇತಿ ಸಂದರ್ಭದಲ್ಲಿ ವಿಶೇಷ ಉಪನ್ಯಾಸಗಳ ಜೊತೆಗೆ ಪ್ರತೀ ಅಧ್ಯಾಯದ ಕುರಿತಾಗಿ ಮಾದರಿ ಪರೀಕ್ಷೆ, ವಿಶೇಷ ಕಾರ್ಯಾಗಾರ ಆಯೋಜಿಸಲಾಗುವುದು.

ಬಯಾಲಜಿ ವಿಷಯದ ಪ್ರಮುಖ ಅಧ್ಯಾಯಗಳ ಉಪನ್ಯಾಸಕ್ಕಾಗಿ ಉಡುಪಿ ಕ್ಷೇತ್ರದಲ್ಲಿ ಪ್ರಸಿದ್ಧ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ತಜ್ಞ ವೈದ್ಯರಿಂದ ಪ್ರಾತ್ಯಕ್ಷಿಕೆ ಸಹಿತ ಉಪನ್ಯಾಸ ಆಯೋಜಿಸಲಾಗಿದೆ.

ಏಸ್ ಸಂಸ್ಥೆಯ ಗ್ರಂಥಾಲಯದ ಮೂಲಕ ವಿದ್ಯಾರ್ಥಿಗಳಿಗೆ ಸಂಸ್ಥೆ ಹಾಗೂ ಜನಪ್ರಿಯ ಪ್ರಕಾಶಕರ ಕೃತಿಗಳನ್ನೂ ನೀಡಲಾಗುವುದು.

ಮೇ 19ರಿಂದ ಕ್ರಾಶ್ ಸಿಇಟಿ, ನೀಟ್ ಕ್ರಾಶ್ ಕೋರ್ಸ್
ಇದೇ ಬರುವ ಜೂನ್ ತಿಂಗಳಲ್ಲಿ ನಡೆಯುವ ಸಿಇಟಿ ಪರೀಕ್ಷೆಗೆ ಪೂರ್ವಭಾವಿಯಾಗಿ ನಿರಂತರ 26 ದಿನಗಳ ಸಿಇಟಿ ಕ್ರಾಶ್ ಕೋರ್ಸ್ ತರಬೇತಿ ಮೇ 19ರಿಂದ ಜೂನ್ 16ರ ವರೆಗೆ ನಡೆಯಲಿದೆ.

ಸೋಮವಾರದಿಂದ ಶನಿವಾರದ ವರೆಗೆ ಪ್ರತಿದಿನ ಬೆಳಿಗ್ಗೆಯಿಂದ ಸಂಜೆ ವರೆಗೆ ತರಬೇತಿ ಆಯೋಜಿಸಲಾಗಿದೆ.

ಉಪನ್ಯಾಸ, ಸಂಕೀರ್ಣ ಪ್ರಶ್ನೆಗಳ ಸುಲಭ ನಿರ್ವಹಣೆ, ಪ್ರಶ್ನೋತ್ತರ ಸೆಷನ್, ಸಂವಹನ ಜೊತೆಗೆ ಮಾಹೆ, ಕಾಮೆಡ್ ಕೆ ಹಾಗೂ ಇನ್ನಿತರ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಿಗೆ ಇದೇ ಸಂದರ್ಭದಲ್ಲಿ ತರಬೇತಿ ನೀಡಲಾಗುವುದು.

9, 10ನೇ ತರಗತಿ
ವಿಜ್ಞಾನ ಹಾಗೂ ಗಣಿತ ಶಾಸ್ತ್ರ ವಿಷಯವಾಗಿ ಈಗಾಗಲೇ ತರಬೇತಿ ಆರಂಭವಾಗಿದೆ.

ಶಾಲೆ ಆರಂಭವಾಗುವ ವರೆಗೆ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಪ್ರತಿದಿನ ಬೆಳಿಗ್ಗೆ 9.30ರಿಂದ ಅಪರಾಹ್ನ 1 ಗಂಟೆ ವರೆಗೆ ತರಬೇತಿ ಹಮ್ಮಿಕೊಳ್ಳಲಾಗಿದೆ. ಶಾಲೆ ಆರಂಭವಾದ ನಂತರ ಈ ತರಬೇತಿ 2023ನೇ ಇಸವಿಯ ಮಾರ್ಚ್ ವರೆಗೆ ಪ್ರತೀ ಶನಿವಾರ ಸಂಜೆ ಹಾಗೂ ಭಾನುವಾರ ಬೆಳಿಗ್ಗೆ ನಡೆಯಲಿದೆ.

ಮಾದರಿ ಪರೀಕ್ಷೆ, ಉಪನ್ಯಾಸಗಳ ಜೊತೆಗೆ ವಿದ್ಯಾರ್ಥಿಗಳ ಸರ್ವತೋಮುಖ ಪ್ರಗತಿಗಾಗಿ ವಿಶಿಷ್ಟ ಕಾರ್ಯಕ್ರಮ ಹಾಗೂ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.

ಬಹುತೇಕ ತರಗತಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ನೋಂದಾವಣೆಯಾಗಿದ್ದು, ಕೆಲವೇ ಸೀಟುಗಳು ಉಳಿದಿವೆ. ಆಸಕ್ತ ವಿದ್ಯಾರ್ಥಿಗಳು ಉಡುಪಿ ತೆಂಕಪೇಟೆಯ ಶ್ರೀಲಕ್ಷ್ಮೀವೆಂಕಟರಮಣ ದೇವಾಲಯದ ಸಮೀಪದಲ್ಲಿರುವ ರಾಧೇಶ್ಯಾಂ ಕಟ್ಟಡದ ಆಚಾರ್ಯಾಸ್ ಏಸ್ ಕಚೇರಿ ಅಥವಾ ಬ್ರಹ್ಮಾವರ ಮಧುವನ ಕಾಂಪ್ಲೆಕ್ಸ್ ನ ಏಸ್ ಕಚೇರಿಯ ಮೊಬೈಲ್ ಸಂಖ್ಯೆ 9901420714ನ್ನು ಸಂಪರ್ಕಿಸುವಂತೆ ಸಂಸ್ಥೆ ನಿರ್ದೇಶಕ ಅಕ್ಷೋಭ್ಯ ಆಚಾರ್ಯ ಪ್ರಕಟಣೆ ತಿಳಿಸಿದೆ.

 

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!