Saturday, July 2, 2022
Home ಲೋಕಾಭಿರಾಮ ಸೈಲಸ್ ಮಹೇಶ್ ಪ. ಪೂ. ಕಾಲೇಜಿನಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಸೈಲಸ್ ಮಹೇಶ್ ಪ. ಪೂ. ಕಾಲೇಜಿನಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

ಸೈಲಸ್ ಮಹೇಶ್ ಪ. ಪೂ. ಕಾಲೇಜಿನಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ

(ಸುದ್ದಿಕಿರಣ ವರದಿ)
ಉಡುಪಿ: ನಿಟ್ಟೂರು ಸೈಲಸ್ ಮಹೇಶ್ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ 600 ಅಂಕ ಗಳಿಸಿ ಪ್ರಥಮ ಸ್ಥಾನಿಯಾದ ಸಫಾ, 598 ಅಂಕ ಗಳಿಸಿದ ನಿಧಿ ಸುರೇಶ ಹೆಗಡೆೆ ಮತ್ತು 596 ಅಂಕ ಗಳಿಸಿದ ಸಿಂಚನ ಶೆಟ್ಟಿ ಅವರನ್ನು ಆಡಳಿತ ಮಂಡಳಿ ವತಿಯಿಂದ ಪ್ರಾಂಶುಪಾಲೆ ಡಾ| ಅನ್ನಪೂರ್ಣ ರಾವ್ ಈಚೆಗೆ ಸನ್ಮಾನಿಸಿದರು.

ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ವರ್ಗ ಹಾಗು ಪೋಷಕರು ಇದ್ದರು.

ಉಪನ್ಯಾಸಕಿಯರಾದ ಸರಸ್ವತಿ ನಾವಡ ಸ್ವಾಗತಿಸಿ, ಸೌಮ್ಯ ಹೊಳ್ಳ ನಿರೂಪಿಸಿದರು.

ಸಂಸ್ಥೆಯ 100 ಮಂದಿ ವಿದ್ಯಾರ್ಥಿಗಳಲ್ಲಿ 21 ಮಂದಿ ಉನ್ನತ ಶ್ರೇಣಿ, 75 ಮಂದಿ ಪ್ರಥಮ ಶ್ರೇಣಿ ಮತ್ತು 4 ಮಂದಿ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!