ಸೆಲ್ಕೊ ಸಂಸ್ಥೆಯಿಂದ ಟ್ಯಾಬ್ ವಿತರಣೆ
(ಸುದ್ದಿಕಿರಣ ವರದಿ
ಉಡುಪಿ: ದ್ವಿತೀಯ ಪಿ.ಯು.ಸಿ.ಯಲ್ಲಿ ವಿದ್ಯಾರ್ಜನೆ ಮಾಡುತ್ತಿರುವ ವಿದ್ಯಾಪೋಷಕ್ ವಿದ್ಯಾರ್ಥಿನಿ, ಮಂದಾರ್ತಿಯ ಗೀತಾ ಎಂಬಾಕೆಗೆ ಸೆಲ್ಕೊ ಸಂಸ್ಥೆ ವತಿಯಿಂದ ಟ್ಯಾಬ್ ನೀಡಲಾಯಿತು.
ಯಕ್ಷಗಾನ ಕಲಾರಂಗ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸೆಲ್ಕೊ ಸಂಸ್ಥೆಯ ಎ.ಜಿ.ಎಂ. ಗುರುಪ್ರಕಾಶ್ ಶೆಟ್ಟಿ ಟ್ಯಾಬ್ ವಿತರಿಸಿ, ವಿದ್ಯಾಪೋಷಕ್ ವಿದ್ಯಾರ್ಥಿಗಳಿಗೆ ಸೆಲ್ಕೊ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿರುವುದನ್ನು ಸ್ಮರಿಸಿದರು.
ಈ ಸಂದರ್ಭದಲ್ಲಿ ಕಲಾರಂಗ ಉಪಾಧ್ಯಕ್ಷ ಎಸ್. ವಿ. ಭಟ್, ಕಾರ್ಯದರ್ಶಿ ಮುರಲಿ ಕಡೆಕಾರ್, ಕೋಶಾಧಿಕಾರಿ ಮನೋಹರ ಕೆ., ಸದಸ್ಯ ಅನಂತರಾಜ ಉಪಾಧ್ಯ ಹಾಗೂ ಸೆಲ್ಕೊ ಸಂಸ್ಥೆಯ ಸುಬ್ರಹ್ಮಣ್ಯ ಇದ್ದರು