Wednesday, July 6, 2022
Home ಲೋಕಾಭಿರಾಮ ಛಾಯಾಗ್ರಾಹಕಗೆ ಅಂತಾರಾಷ್ಟ್ರೀಯ ಗೌರವ

ಛಾಯಾಗ್ರಾಹಕಗೆ ಅಂತಾರಾಷ್ಟ್ರೀಯ ಗೌರವ

ಛಾಯಾಗ್ರಾಹಕಗೆ ಅಂತಾರಾಷ್ಟ್ರೀಯ ಗೌರವ

ಸುದ್ದಿಕಿರಣ ವಾರ್ತೆ
ಉಡುಪಿ. ಜ. 4: ಕಲಾತ್ಮಕ ಛಾಯಾಗ್ರಹಣ ಕ್ಷೇತ್ರದಲ್ಲಿ 85ಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ಅಂಗಸಂಸ್ಥೆ ಹೊಂದಿರುವ ಯುನೆಸ್ಕೊ ಮಾನ್ಯತೆ ಪಡೆದ ವಿಶ್ವದ ಏಕೈಕ ಸಂಸ್ಥೆ ಫೆಡರೇಶನ್ ಇಂಟರ್ ನ್ಯಾಷನಲ್ ಡಿ ಆರ್ಟ್ ಫೊಟೊಗ್ರಾಫಿಕ್ (ಎಫ್.ಐ.ಎ.ಪಿ) ನೀಡುವ ಅಂತಾರಾಷ್ಟ್ರೀಯ ಎಫಿಎಪಿ (ಇ.ಎಫ್.ಐ.ಎ.ಪಿ) ಡಿಸ್ಟಿಂಕ್ಷನ್ ಗೌರವ ಉಡುಪಿಯ ಖ್ಯಾತ ಛಾಯಾಗ್ರಾಹಕ ಫೋಕಸ್ ರಾಘು ಅವರಿಗೆ ಲಭಿಸಿದೆ.

ಛಾಯಾಗ್ರಾಹಕರ ಛಾಯಾಚಿತ್ರಗಳು 20ಕ್ಕೂ ಅಧಿಕ ದೇಶಗಳಲ್ಲಿ ಪ್ರದರ್ಶನಗೊಂಡಿರಬೇಕು. ಜೊತೆಗೆ ಕನಿಷ್ಟ 2 ವಿದೇಶಗಳಿಂದ ಪ್ರಶಸ್ತಿ ಲಭಿಸಿರಬೇಕು ಮತ್ತು ಕನಿಷ್ಟ 250 ಚಿತ್ರಗಳು ಪ್ರಶಸ್ತಿಗೆ ಆಯ್ಕೆಗೊಂಡಿರಬೇಕು. ಅಂಥವರಿಗೆ ಮಾತ್ರ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಲಿದೆ. ರಾಘು 25ಕ್ಕೂ ಅಧಿಕ ಅಂತಾರಾಷ್ಟ್ರೀಯ ಪ್ರಶಸ್ತಿ ಪಡೆದಿದ್ದಾರೆ.

ಕರಾವಳಿ ಭಾಗದಲ್ಲಿ ಈ ಗೌರವ ಪಡೆದ ಮೊದಲಿಗರಾಗಿರುವ ರಾಘು, ಖ್ಯಾತ ಛಾಯಾಚಿತ್ರಗ್ರಾಹಕ ಗುರುದತ್ ಕಾಮತ್ ಶಿಷ್ಯ.

ರಾಘು ಅವರಿಗೆ ನಿಕಾನ್ ಕ್ಯಾಮೆರಾ ಕಂಪೆನಿ, ನಿಕೋನ್ ಇನ್ ಫ್ಲುಯೆನ್ಸರ್ ಆಗಿ ನೇಮಿಸುವ ಮೂಲಕ ಗ್ರಾಮೀಣ ಪ್ರತಿಭೆಗೆ ಗೌರವ ನೀಡಿರುವುದನ್ನು ಸ್ಮರಿಸಬಹುದು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!