Saturday, July 2, 2022
Home ಲೋಕಾಭಿರಾಮ ಅಮೆರಿಕಾದ ಐಸಿಎಸ್ ಸ್ವಾನ್ ಗೌರವಕ್ಕೆ ಪಾತ್ರರಾದ ಆಸ್ಟ್ರೋ ಮೋಹನ್

ಅಮೆರಿಕಾದ ಐಸಿಎಸ್ ಸ್ವಾನ್ ಗೌರವಕ್ಕೆ ಪಾತ್ರರಾದ ಆಸ್ಟ್ರೋ ಮೋಹನ್

ಅಮೆರಿಕಾದ ಐಸಿಎಸ್ ಸ್ವಾನ್ ಗೌರವಕ್ಕೆ ಪಾತ್ರರಾದ ಆಸ್ಟ್ರೋ ಮೋಹನ್

(ಸುದ್ದಿಕಿರಣ ವರದಿ)
ಉಡುಪಿ: ಅಮೆರಿಕಾದ ಇಮೇಜ್ ಕೊಲೀಗ್ ಸೊಸೈಟಿ, ವಿಶ್ವ ಛಾಯಾಗ್ರಹಣ ದಿನಾಚರಣೆ ಅಂಗವಾಗಿ ನೀಡುವ ಪ್ರತಿಷ್ಠಿತ ಸ್ವಾನ್ ಗೌರವ ಪ್ರಶಸ್ತಿಗೆ ಉದಯವಾಣಿ ಪತ್ರಿಕೆಯ ಹಿರಿಯ ಪತ್ರಿಕಾ ಛಾಯಾಗ್ರಾಹಕ ಆಸ್ಟ್ರೋ ಮೋಹನ್ ಪಾತ್ರರಾಗಿದ್ದಾರೆ.

ಪತ್ರಿಕಾ ಛಾಯಾಗ್ರಹಣದಲ್ಲಿ ಆಸ್ಟ್ರೋ ಅವರ ಅನುಭವ ಮತ್ತು ಕೊಡುಗೆ ಮನ್ನಿಸಿ, ಅವರು ಕಳಿಸಿದ ಪತ್ರಿಕಾ ಛಾಯಾಚಿತ್ರ ಅವಲೋಕಿಸಿ ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ.

ವಿಶ್ವದ 30 ಮಂದಿ ಛಾಯಾಚಿತ್ರ ಕಲಾವಿದರಿಗೆ ಮಾತ್ರ ಈ ಗೌರವ ಲಭಿಸಿದ್ದು, ಆ ಪೈಕಿ ಆಸ್ಟ್ರೋ ಮೋಹನ್ ಓರ್ವರಾಗಿದ್ದಾರೆ ಎಂದು ಆಂಧ್ರಪ್ರದೇಶ ಫೋಟೋಗ್ರಫಿ ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಟಿ. ಎಸ್. ರೆಡ್ಡಿ ಪ್ರಕಟಣೆ ತಿಳಿಸಿದೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!