Sunday, July 3, 2022
Home ಲೋಕಾಭಿರಾಮ ಅತ್ಯುತ್ತಮ ಪ್ರಾಂಶುಪಾಲ ಪ್ರಶಸ್ತಿಗೆ ಆಯ್ಕೆ

ಅತ್ಯುತ್ತಮ ಪ್ರಾಂಶುಪಾಲ ಪ್ರಶಸ್ತಿಗೆ ಆಯ್ಕೆ

ಅತ್ಯುತ್ತಮ ಪ್ರ್ರಾಂಶುಪಾಲ ಪ್ರಶಸ್ತಿ

(ಸುದ್ದಿಕಿರಣ ವರದಿ)
ಬ್ರಹ್ಮಾವರ: ನವದೆಹಲಿಯ ಅಖಿಲ ಭಾರತ ಅಸೋಸಿಯೇಶನ್ ಫಾರ್ ಕ್ರಿಶ್ಚಿಯನ್ ಹೈಯರ್ ಎಜುಕೇಶನ್ ಮತ್ತು ದೇಶದ ಎಲ್ಲ ಕ್ರಿಶ್ಚಿಯನ್ ಉನ್ನತ ಶಿಕ್ಷಣ ಸಂಸ್ಥೆಗಳ ಸದಸ್ಯರು ಉಡುಪಿ ಜಿಲ್ಲೆಯ ಬ್ರಹ್ಮಾವರ ಕ್ರಾಸ್ ಲ್ಯಾಂಡ್ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ಸ್ಯಾಮುಯೆಲ್ ಕೆ. ಸ್ಯಾಮುಯೆಲ್ ಅವರನ್ನು 2018- 19ನೇ ಸಾಲಿನ ರಾಷ್ಟ್ರೀಯ ಅತ್ಯುತ್ತಮ ಪ್ರಾಂಶುಪಾಲ ಪ್ರಶಸ್ತಿಗೆ ಆಯ್ಕೆ ಮಾಡಿದ್ದಾರೆ.

ಈ ಪ್ರತಿಷ್ಠಿತ ರಾಷ್ಟ್ರೀಯ ಪ್ರಶಸ್ತಿ ಎ.ಐ.ಎ.ಸಿ.ಎಚ್.ಇ ಶೈಕ್ಷಣಿಕ ನಾಯಕತ್ವದ ಗುರುತಿಸುವಿಕೆ, ಶೈಕ್ಷಣಿಕ ಉತ್ಕೃಷ್ಟತೆ, ಶೈಕ್ಷಣಿಕ ಆವಿಷ್ಕಾರಗಳ ಪರಿಚಯದಲ್ಲಿ ಭಾಗವಹಿಸುವಿಕೆ, ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಯ ಕಾಳಜಿ ಮತ್ತು ವೃತ್ತಿಪರ ನೈತಿಕತೆಯ ಉನ್ನತ ಗುಣಮಟ್ಟ ಗಮನಿಸಿ ನೀಡಲಾಗುತ್ತದೆ.

ಎ.ಐ.ಎ.ಸಿ.ಎಚ್.ಇ ವಾರ್ಷಿಕ ಸಾಮಾನ್ಯ ಸಭೆ ಮತ್ತು ತ್ರೈವಾರ್ಷಿಕ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!