Wednesday, July 6, 2022
Home ಲೋಕಾಭಿರಾಮ ಭಾವತರಂಗ ಆದರ್ಶಪ್ರಾಯ ಶ್ರೀಪತಿ ಆಚಾರ್ಯರಿಗೊಂದು ನುಡಿನಮನ

ಆದರ್ಶಪ್ರಾಯ ಶ್ರೀಪತಿ ಆಚಾರ್ಯರಿಗೊಂದು ನುಡಿನಮನ

ಆದರ್ಶಪ್ರಾಯ ಶ್ರೀಪತಿ ಆಚಾರ್ಯರಿಗೊಂದು ನುಡಿನಮನ

ಕಕ್ಷಿದಾರರ ನ್ಯಾಯಯುತ ಅಂಶಗಳನ್ನು ಎತ್ತಿಹಿಡಿದು, ವೃತ್ತಿಯಲ್ಲಿ ಸಾಫಲ್ಯ ಕಂಡಿದ್ದ ಹಿರಿಯ ವಕೀಲ ಅಲೆವೂರು ಶ್ರೀಪತಿ ಆಚಾರ್ಯ ರೋಟರಿಯಂಥ ಸಂಸ್ಥೆಗಳಲ್ಲೂ ಸಕ್ರಿಯರಾಗಿದ್ವರು. ಅವರನ್ನು ಹತ್ತಿರದಿಂದ ಬಲ್ಲ ಹಿರಿಯ ರೊಟೇರಿಯನ್ ಸುಬ್ರಹ್ಮಣ್ಯ ಬಾಸ್ರಿ ಹಾಗೂ ಶುಭಾ ಬಾಸ್ರಿ ಅವರು ಆಚಾರ್ಯರ ನಿಧನಕ್ಕೆ ಕಂಬನಿ ಮಿಡಿದು ನುಡಿನಮನ ಸಲ್ಲಿಸಿದ್ದಾರೆ.

ಗಂಭೀರ ನಡೆನುಡಿಯ, ವಸ್ತುನಿಷ್ಠ ಧೋರಣೆ, ಸತ್ಯ ನ್ಯಾಯ, ಪ್ರಾಮಾಣಿಕತೆ, ಕರ್ತವ್ಯ ನಿಷ್ಠೆ, ಸ್ನೇಹಮಯಿ ವ್ಯಕ್ತಿತ್ವ, ಸಮಾಧಾನ, ಶಾಂತಿ ಸಂಯಮದಿಂದ ಸಮಾಜದಲ್ಲಿ ಅತ್ಯಂತ ಗೌರವದ ಸ್ಥಾನವನ್ನು ಸಂಪಾದಿಸಿದ ಹಿರಿಯ ಹಾಗೂ ಆದರ್ಶಪ್ರಾಯರಾಗಿದ್ದವರು ಹಿರಿಯ ವಕೀಲರಾಗಿದ್ದ ಅಲೆವೂರು ಶ್ರೀಪತಿ ಆಚಾರ್ಯ.
8 ದಶಕಗಳ ಸುದೀರ್ಘ ಜೀವನ ಸವೆಸಿದ ಅವರು ಇನ್ನು ನಮ್ಮೊಂದಿಗಿಲ್ಲ.

ರೋಟರಿ ಅಭಿಯಾನದಲ್ಲಿ ಅವರ ನಿರಂತರ ತೊಡಗಿಕೊಳ್ಳುವಿಕೆ ಮತ್ತು ಸೇವೆ, ಹಮ್ಮುಬಿಮ್ಮುಗಳಿಲ್ಲದೇ ಎಲ್ಲರೊಳಗೊಂದಾಗಿ ರೋಟರಿ ಚಟುವಟಿಕೆಗಳಿಗೆ ಸಹಸದಸ್ಯರನ್ನು ಹುರಿದುಂಬಿಸುವ ಅವರ ಹಿರಿಯ ಗುಣ ರೋಟರಿ ಆಂದೋಲನಕ್ಕೊಂದು ಮಾದರಿ.

ಹಿರಿಯ ವಕೀಲರಾಗಿ ನ್ಯಾಯವನ್ನು ಎತ್ತಿಹಿಡಿದು ತನ್ನ ಕಕ್ಷಿಗಾರರ ನ್ಯಾಯಯುತ ಅಂಶಗಳನ್ನು ಪ್ರತಿಪಾದಿಸುವ ಮೂಲಕ ವೃತ್ತಿಸೇವೆಯಲ್ಲಿ ಅವರು ಕಂಡುಕೊಂಡ ಯಶಸ್ಸು, ಮಾಧ್ವ ಸಂಪ್ರದಾಯ ಸಿದ್ಧಾಂತಗಳ ಸಂರಕ್ಷಣೆಗಾಗಿ ಅಗತ್ಯವಿರುವಾಗಲೆಲ್ಲಾ ಅವರು ನೀಡುತ್ತಿದ್ಧ ನ್ಯಾಯಯುತ ಸಲಹೆಗಳಿಂದ ಉಡುಪಿ ಅಷ್ಟಮಠಗಳ ಯತಿಗಳ ಪ್ರತ್ಯಾದರಗಳಿಗೆ ಪಾತ್ರರಾದ, ನ್ಯಾಯಾಂಗ ವ್ಯವಸ್ಥೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ರೊಟೇರಿಯನ್ ಅಲೆವೂರು ಶ್ರೀಪತಿ ಆಚಾರ್ಯ ಅವರಿಗೆ ಭಾವಪೂರ್ಣ ಶೃದ್ಧಾಂಜಲಿ.

ಅವರ ಆತ್ಮಕ್ಕೆ ಸದ್ಗತಿ ದೊರೆಯಲಿ. ಅವರ ಮಡದಿ ರೋಟರಿ ಮತ್ತು ಇನ್ನರ್ ವ್ಹೀಲ್ ಸಂಘಟನೆಗಳ ಸಕ್ರಿಯ ಸದಸ್ಯೆ ಜಯಲಕ್ಷ್ಮಿ ಆಚಾರ್ಯ ಮತ್ತು ಅವರ ಕುಟುಂಬ, ಬಂಧು ಬಳಗ ಹಾಗೂ ಅವರ ಕಕ್ಷಿಗಾರರು ಮತ್ತವರ ಒಡನಾಡಿಗಳಿಗೆ ಅವರ ಅಗಲುವಿಕೆಯ ದುಃಖ ಸಹಿಸುವ ಶಕ್ತಿಯನ್ನು ನೀಡಲಿ ಎಂದು ಜಗದೊಡೆಯ ಉಡುಪಿ ಶ್ರೀಕೃಷ್ಣನಲ್ಲಿ ಪ್ರಾರ್ಥನೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!