Thursday, July 7, 2022
Home ಲೋಕಾಭಿರಾಮ ಭಾವತರಂಗ ವಿಶ್ವೇಶ ಅಭಿನಂದನ

ವಿಶ್ವೇಶ ಅಭಿನಂದನ

ಸಮಾಜಸೇವೆಯಲ್ಲಿ ದೇವಸೇವೆಯನ್ನು ಕಂಡ ರಾಷ್ಟಸಂತ ಕೀರ್ತಿಶೇಷ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ಭಾರತ ಸರ್ಕಾರದ ಪದ್ಮವಿಭೂಷಣ ಪ್ರಶಸ್ತಿ ಸಂದ ಸದವಸರದಲ್ಲಿ ಶ್ರೀಗಳ ಅಭಿಮಾನಿ ರಾಜೇಂದ್ರ ಬೀಡು ಅಕ್ಷರ ನಮನ ಸಲ್ಲಿಸುವ ಮೂಲಕ ಶ್ರೀಪಾದರಿಗೆ ಅಭಿನಂದನಪೂರ್ವಕ ಪ್ರಣಾಮಗಳನ್ನು ಸಲ್ಲಿಸಿದ್ದಾರೆ.

ವಿಶ್ವೇಶ ಅಭಿನಂದನ

ಆಹಾ ನೋಡು ಬಾಲವಟುವು
ಬೆಳೆದು ನಿಂತ ಪರಿಯ
ಪದ್ಮವಿಭೂಷಣಕೆ
ಬೆಲೆಯ ತಂದ ಸಿರಿಯ l

ರಾಮಕುಂಜದಲ್ಲಿ
ಮೂಡಿತೊಂದು ಚೇತನ
ವೆಂಕಟರಮಣನೆಂಬ
ಅಭಿದಾನದಲ್ಲಿ ll

ಎಂಟನೆಯ ವರುಷದಲ್ಲಿ
ವಿಶ್ವೇಶತೀರ್ಥರಾಗಿ
ಪೇಜಾವರ ಮಠದಿ ನಿಂದು
ಲೋಕಮಾನ್ಯರಾಗಿ l

ಮಾಧ್ವ ತತ್ವ ಅಮೃತವನು
ಆನಂದದಿ ಸವಿದು
ಕೃಷ್ಣಭಕ್ತಿ ಮಧುರ ಭಾವ
ಅಂತರಂಗ ಸೊಬಗು ll

ಮುಗ್ದ ಮನಸು ಶುದ್ಧ ನಡೆಯು
ಕರುಣಭಾವ ಸೊಗಸು
ಮೊಗದ ತುಂಬ ಲಾಸ್ಯಬಿಂಬ
ಧೀಃಶಕ್ತಿಯ ಝಳಕು l

ದೇಶಕಾಗಿ ಜೀವನವನೆ
ಮೀಸಲಿಟ್ಟ ಸಾಧು
ದಲಿತರ ಕಣ್ಣಂಚಿನಲಿ
ಆನಂದದ ಭಾಷ್ಪಬಿಂದು ll

ಹಿಂದುಗಳ ಐಕ್ಯತೆಯ
ಧ್ವನಿಯಾದ ಸ್ನೇಹಸಿಂಧು
ಜೀವನವೇ ಸಂದೇಶವಾದ
ಪರಿವ್ರಾಜಕ ದೀನಬಂಧು l

ದೀನರಲ್ಲಿ ದೇವರನ್ನು
ಕಂಡ ಲೋಕಬಂಧು
ವಿದ್ಯೆ ಧರ್ಮ ಸೇವೆಗಾಗಿ
ಜೀವ ತಳೆದ ಸಾಧು ll

ರಾಮಸದನ ದೇವಸದನ
ಭವ್ಯಸೌಧ ಚಿಂತನ
ದೇಹ ಕಳೆದರೇನು
ಸಂದೇಶ ಚಿರನೂತನ l

ಆಹಾ ನೋಡು ಬಾಲವಟುವು
ಬೆಳೆದು ನಿಂತ ಪರಿಯ
ಪದ್ಮವಿಭೂಷಣಕೆ
ಬೆಲೆಯ ತಂದ ಸಿರಿಯ ll

-ರಾಜೇಂದ್ರ ಬೀಡು, ಕನ್ನರ್ಪಾಡಿ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!