Wednesday, July 6, 2022
Home ಲೋಕಾಭಿರಾಮ ಆರೋಗ್ಯ ಮೇ 1: ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ

ಮೇ 1: ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ

ಸುದ್ದಿಕಿರಣ ವರದಿ
ಶುಕ್ರವಾರ, ಏಪ್ರಿಲ್ 29

ಮೇ 1: ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ
ಉಡುಪಿ: ಜಿಲ್ಲಾ ಬ್ರಾಹ್ಮಣ ಮಹಾಸಭಾ, ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ, ತುಳು ಶಿವಳ್ಳಿ ಮಾಧ್ವ ಮಹಾಮಂಡಳ (ತುಶಿಮಾಮ) ಹಾಗೂ ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಸಂಯುಕ್ತಾಶ್ರಯದಲ್ಲಿ ಮೇ 1ರಂದು ಬೆಳಿಗ್ಗೆ 9ರಿಂದ ಅಪರಾಹ್ನ 1 ಗಂಟೆ ವರೆಗೆ ಬ್ರಾಹ್ಮಣ ಸಮುದಾಯದವರಿಗಾಗಿ ಉಚಿತ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ಆಯೋಜಿಸಲಾಗಿದೆ ಎಂದು ಉಡುಪಿ ತಾಲೂಕು ಬ್ರಾಹ್ಮಣ ಸಭಾ ಅಧ್ಯಕ್ಷ ಮಂಜುನಾಥ ಉಪಾಧ್ಯಾಯ ಪರ್ಕಳ ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮಣಿಪಾಲ ಕೆಎಂಸಿ ರಕ್ತನಿಧಿ ವಿಭಾಗ, ಬ್ರಹ್ಮಾವರ ಮಹೇಶ ಆಸ್ಪತ್ರೆ ಮತ್ತು ಮಂಗಳೂರು ಎ.ಜೆ. ಆಸ್ಪತ್ರೆ ಸಹಯೋಗದೊಂದಿಗೆ ಕಿನ್ನಿಮೂಲ್ಕಿ ಗೋವಿಂದ ಕಲ್ಯಾಣ ಮಂಟಪದಲ್ಲಿ ನಡೆಯುವ ಕಾರ್ಯಕ್ರಮವನ್ನು ಭಾವಿ ಪರ್ಯಾಯ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಉದ್ಘಾಟಿಸುವರು. ಉಡುಪಿ ತಾಲೂಕು ಬ್ರಾಹ್ಮಣ ಸಭಾ ಅಧ್ಯಕ್ಷ ಮಂಜುನಾಥ ಉಪಾಧ್ಯ ಅಧ್ಯಕ್ಷತೆ ವಹಿಸುವರು.

ಅಭ್ಯಾಗತರಾಗಿ ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ವೈ. ಸುಧಾಕರ ಭಟ್ ಕಾರ್ಕಳ, ಮಕ್ಕಳ ತಜ್ಞ ಡಾ. ರಾಕೇಶ ಅಡಿಗ, ದಂತ ವೈದ್ಯ ಡಾ. ಮಿಥುನ್ ಎಂ. ಉಪಾಧ್ಯಾಯ, ತುಶಿಮಾಮ ಅಧ್ಯಕ್ಷ ರ ವಿಪ್ರಕಾಶ ಭಟ್ ಮತ್ತು ಯುವ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಚೈತನ್ಯ ಎಂ.ಜಿ. ಆಗಮಿಸುವರು.

ಭಾಗವಹಿಸುವ ತಜ್ಞ ವೈದ್ಯರು
ನುರಿತ ವೈದ್ಯರಾದ ಡಾ. ರಾಕೇಶ ಭಟ್ (ಮಕ್ಕಳ ತಜ್ಞ), ಡಾ. ಶರತ್ ಮಧ್ಯಸ್ಥ (ಜನರಲ್ ಮೆಡಿಸಿನ್), ಡಾ. ಕೀರ್ತನ್ ಕುಮಾರ್ ಎಂ. ಉಪಾಧ್ಯಾಯ (ಜನರಲ್ ಸರ್ಜರಿ), ಡಾ. ವೀಣಾ ಯು. ಎಚ್. (ನೇತ್ರ ಚಿಕಿತ್ಸೆ), ಡಾ. ದೀಕ್ಷಿತಾ (ಪ್ರಸೂತಿ ತಜ್ಞೆ), ಡಾ. ಮಿಥುನ್ ಎಂ. ಉಪಾಧ್ಯಾಯ (ದಂತ ವೈದ್ಯ), ಡಾ. ಚಂದ್ರಶೇಖರ್ (ಆಯುರ್ವೇದ) ಭಾಗವಹಿಸುವರು.

ಉಚಿತ ತಪಾಸಣೆ, ಚಿಕಿತ್ಸೆ, ಇಸಿಜಿ, ರಕ್ತ ಪರೀಕ್ಷೆ, ವರ್ಗೀಕರಣ, ದಂತ- ನೇತ್ರ ತಪಾಸಣೆ ನಡೆಯಲಿದೆ ಎಂದು ಉಪಾಧ್ಯಾಯ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ತಾಲೂಕು ಬ್ರಾಹ್ಮಣ ಮಹಾಸಭಾ ಕಾರ್ಯದರ್ಶಿ ಸಂದೀಪಕುಮಾರ್ ಮಂಜ, ಜಿಲ್ಲಾ ಬ್ರಾಹ್ಮಣ ಸಭಾ ಕಾರ್ಯದರ್ಶಿ ಶ್ರೀಕಾಂತ ಉಪಾಧ್ಯಾಯ, ಜೊತೆ ಕಾರ್ಯದರ್ಶಿ ನಾಗರಾಜ ಉಪಾಧ್ಯಾಯ, ಸಂಘಟನಾ ಕಾರ್ಯದರ್ಶಿ ಜಯರಾಮ ಆಚಾರ್ಯ, ತುಶಿಮಾಮ ಅಧ್ಯಕ್ಷ ರವಿಪ್ರಕಾಶ ಭಟ್, ಯುವ ಬ್ರಾಹ್ಮಣ ಪರಿಷತ್ ಪ್ರಧಾನ ಕಾರ್ಯದರ್ಶಿ ವಿವೇಕಾನಂದ ಪಾಂಗಣ್ಣಾಯ ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!