Monday, July 4, 2022
Home ಲೋಕಾಭಿರಾಮ ಸುಸಜ್ಜಿತ ದಂತ ಸ್ಕ್ಯಾನಿಂಗ್ ಕೇಂದ್ರ ಉದ್ಘಾಟನೆ

ಸುಸಜ್ಜಿತ ದಂತ ಸ್ಕ್ಯಾನಿಂಗ್ ಕೇಂದ್ರ ಉದ್ಘಾಟನೆ

ಸುಸಜ್ಜಿತ ದಂತ ಸ್ಕ್ಯಾನಿಂಗ್ ಕೇಂದ್ರ ಉದ್ಘಾಟನೆ

(ಸುದ್ದಿಕಿರಣ ವರದಿ)
ಉಡುಪಿ: ಅಜ್ಜರಕಾಡು ಲಾಲ್ ಬಹದ್ದೂರ್ ಶಾಸ್ತ್ರೀ ರಸ್ತೆ ಪಕ್ಕದ ವಯೋಲೆಟ್ ಸಂಕೀರ್ಣದಲ್ಲಿ ಸುಸಜ್ಜಿತ ದಂತ ಸ್ಕ್ಯಾನಿಂಗ್ ಸೌಲಭ್ಯ ಕೇಂದ್ರ ಉದ್ಘಾಟನೆಗೊಂಡಿದ್ದು, ಉಡುಪಿಯ ಹಿರಿಯ ದಂತ ವೈದ್ಯ ಡಾ. ರಮಾನಂದ ಸೂಡ, ಕಾರ್ಕಳದ ಹಿರಿಯ ದಂತ ವೈದ್ಯ ಡಾ. ರಮೇಶ್ ಶೆಣೈ, ಅಖಿಲ ಭಾರತೀಯ ದಂತ ವೈದ್ಯ ಸಂಘ ಉಡುಪಿ ಅಧ್ಯಕ್ಷ ಹಾಗೂ ಕುಂದಾಪುರದ ಹಿರಿಯ ದಂತ ವೈದ್ಯ ಡಾ. ಪ್ರಮೋದ್ ಶೆಟ್ಟಿ ಸಂಯುಕ್ತವಾಗಿ ಜ್ಯೋತಿ ಪ್ರಜ್ವಲನದ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಡಾ. ಮನೋಜ್ ಡಿಲಿಮಾ ಬ್ರಹ್ಮಾವರ, ಡಾ. ಗುರುರಾಜ್ ಶಿರ್ವ, ಡಾ. ಸುಧೀರ್ ರಾವ್ ಮಲ್ಪೆ, ಡಾ. ಕಿರಣ್ ಶೆಟ್ಟಿ ಬ್ರಹ್ಮಾವರ, ಡಾ. ನವೀನ್ ಶೆಟ್ಟಿ ಮುಂಬಯಿ, ಡಾ. ಮುರಲೀಧರ್ ಭಟ್ ಕಾರ್ಕಳ, ಡಾ. ಸಯ್ಯದ್ ಫಯಾಝ್ ಉಡುಪಿ, ಇಂಜಿನಿಯರ್ ಸುಧೀರ್ ಪೆರ್ಡೂರು, ಉಡುಪಿಯ ದಂತ ವೈದ್ಯರಾದ ಡಾ. ನಿತೇಶ್ ಶೆಟ್ಟಿ, ಡಾ. ಮನೋಜ್ ಶೆಟ್ಟಿ, ಡಾ. ಪ್ರಕೃತಿ ಶೆಟ್ಟಿ, ಡಾ. ಅನಿತಾ ಸೂಡ ಮೊದಲಾದವರಿದ್ದರು.

ಉಡುಪಿ ಜಿಲ್ಲೆಯಲ್ಲಿ ಪ್ರಪ್ರಥಮವಾಗಿ ಆಧುನಿಕ ತಂತ್ರಜ್ಞಾನದ ಡೆಂಟಲ್ ಸಿಬಿ ಸಿಟಿ ಸ್ಕ್ಯಾನಿಂಗ್ ಸೆಂಟರ್ ಇದಾಗಿದ್ದು ಇಲ್ಲಿ ಒಪಿಜಿ, ಲ್ಯಾಟಿರಲ್ ಸೆಫೆಲೊಗ್ರಾಮ್ ನಂಥ 2ಡಿ/ 3ಡಿ ಸ್ಕ್ಯಾನಿಂಗ್ ಸೌಲಭ್ಯ ಲಭ್ಯವಿದೆ.

ಅಲ್ಲದೆ, ಈ ಕೇಂದ್ರ ದಂತ ವೈದ್ಯರ ಕೌಶಲ ಅಭಿವೃದ್ದಿಗೆ ಪೂರಕವಾಗಿ ನಿರಂತರ ಮುಂದುವರಿಕೆ ಶಿಕ್ಷಣ ಕೇಂದ್ರವಾಗಿಯೂ ಕಾರ್ಯನಿರ್ವಹಿಸುವ ಆಶಯ ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!