Thursday, July 7, 2022
Home ಲೋಕಾಭಿರಾಮ ಸುಧಾರಿತ ಎಂಡೊಸ್ಕೋಪ್ ಚಿಕಿತ್ಸೆಗೆ ಚಾಲನೆ

ಸುಧಾರಿತ ಎಂಡೊಸ್ಕೋಪ್ ಚಿಕಿತ್ಸೆಗೆ ಚಾಲನೆ

ಉಡುಪಿ: ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಸುಧಾರಿತ ಮಲ್ಟಿಲೈಟ್ ಟೆಕ್ನಾಲಜಿ ಎಂಡೊಸ್ಕೋಪ್ (ಎಲ್.ಸಿ.ಐ) ದಿನದ ಆರೈಕೆ (ಡೇ ಕೇರ್) ಎಂಡೊಸ್ಕೊಪ್ ಸೇವೆಗಳನ್ನು ಗುರುವಾರ ಆರಂಭಿಸಲಾಯಿತು.

ಸೇವೆಗೆ ಚಾಲನೆ ನೀಡಿದ ಮಾಹೆ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್, ಈ ಹೊಸ ಸೌಲಭ್ಯದಿಂದ ವಿಶ್ವದರ್ಜೆ ಸೇವೆ ಕೈಗೆಟುಕುವ ದರದಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ದೊರಕಿದಂತಾಗಿದೆ. ಈ ತಂತ್ರಜ್ಞಾನ ಅಪರೂಪದ ರೋಗ ಗುರುತಿಸಿ, ಆರೈಕೆ ಮತ್ತು ಚಿಕಿತ್ಸೆ ಒದಗಿಸಲು ಸಹಕಾರಿ ಎಂದರು.

ಸಹ ಉಪಕುಲಪತಿ ಡಾ. ಪಿ. ಎಲ್. ಎನ್. ಜಿ. ರಾವ್, ಕೆಎಂಸಿ ಡೀನ್ ಡಾ. ಶರತ್ ಕುಮಾರ್ ರಾವ್, ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ ಶೆಟ್ಟಿ, ಮುಖ್ಯ ನಿರ್ವಹಣಾಧಿಕಾರಿ ಸಿ. ಜಿ. ಮುತ್ತನ, ಜಠರ ಕರುಳು (ಗ್ಯಾಸ್ಟ್ರೊ ಎಂಟರಾಲಜಿ ಮತ್ತು ಹೆಪಟಾಲಜಿ) ವಿಭಾಗ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಶಿರನ್ ಶೆಟ್ಟಿ, ಫ್ಯೂಜಿಫಿಲ್ಮ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಪ್ರಾದೇಶಿಕ ಮಾರಾಟ ವ್ಯವಸ್ಥಾಪಕ ಬಾಲು ಮಹೇಂದ್ರನ್ ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!