Thursday, July 7, 2022
Home ಲೋಕಾಭಿರಾಮ ಉದ್ಯೋಗ ಸ್ಥಳೀಯ ಉತ್ಪನ್ನಗಳ ಮಾರುಕಟ್ಟೆಗೆ `ಇ-ಸಮುದಾಯ್'

ಸ್ಥಳೀಯ ಉತ್ಪನ್ನಗಳ ಮಾರುಕಟ್ಟೆಗೆ `ಇ-ಸಮುದಾಯ್’

ಉಡುಪಿ: ಸ್ಥಳೀಯ ಉತ್ಪನ್ನಗಳನ್ನು ಜಾಗತಿಕವಾಗಿ ಮಾರುಕಟ್ಟೆಗೆ ಪರಿಚಯಿಸಲು ಪೂರಕವಾಗಿ ಇ- ಸಮುದಾಯ್ ಎಂಬ ಆ್ಯಪ್ ಸಿದ್ಧಪಡಿಸಲಾಗಿದ್ದು, ಈ ಆ್ಯಪ್ ಮೂಲಕ ತಮಗೆ ಬೇಕಾದ ಆಹಾರ ವಸ್ತುಗಳು, ಕಿರಾಣಿ ಸಾಮಾನು, ಹೋಟೆಲ್ ತಿಂಡಿಗಳು ಇತ್ಯಾದಿಗಳನ್ನು ಮನೆಯಲ್ಲೇ ಕುಳಿತು ತರಿಸಿಕೊಳ್ಳಬಹುದು. ಈ ಆ್ಯಪ್ ನ್ನು ಉಡುಪಿಯಲ್ಲಿ ಮೊದಲ ಜಾರಿಗೆ ತರಲಾಗಿದೆ ಎಂದು ಇ- ಸಮುದಾಯ್ ಸ್ಥಾಪಕ ನಿರ್ದೇಶಕ ಅನೂಪ್ ಪೈ ತಿಳಿಸಿದರು.

ಬುಧವಾರ ಆ್ಯಪ್ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಸ್ಥಳೀಯ ಉತ್ಪನ್ನಗಳನ್ನು ಪರಿಚಯಿಸುವ ಮೂಲಕ ಸ್ಥಳೀಯ ವರ್ತಕರನ್ನೂ ಇ-ಸಮುದಾಯ್ ವೇದಿಕೆಯಡಿ ತರಲಾಗುವುದು. ಅದರಿಂದಾಗಿ ವರ್ತಕರು ತಮ್ಮ ಔದ್ಯೋಗಿಕ ಕ್ಷೇತ್ರ ವಿಸ್ತರಣೆಯೊಂದಿಗೆ ತಮ್ಮ ವ್ಯವಹಾರ ವೃದ್ಧಿಗೂ ಪೂರಕವಾಗಲಿದೆ. ಪ್ರಸ್ತುತ ನಗರ ಪ್ರದೇಶಗಳಿಗೆ ತಮ್ಮ ಯೋಜನೆ ಸೀಮಿತಗೊಂಡಿದ್ದು, ಮುಂದಿನ ದಿನಗಳಲ್ಲಿ ಮಹಾನಗರ ಹಾಗೂ ವಿದೇಶಗಳಿಗೂ ಗ್ರಾಹಕರ ಬೇಡಿಕೆಗನುಸಾರ ವಿಸ್ತರಿಸಲಾಗುವುದು ಎಂದರು.

ಮೊಬೈಲ್ ಪ್ಲೋಸ್ಟೋರ್ ಮೂಲಕ ಈ ಆ್ಯಪ್ ನ್ನು ಡೌನ್ ಲೋಡ್ ಮಾಡಿಕೊಂಡು ನೋಂದಣಿ ಮಾಡಿಕೊಳ್ಳಬಹುದು. ಉದ್ಯೋಗಾವಕಾಶ ಸೃಷ್ಟಿಗೂ ಇದು ಸಹಕಾರಿಯಾಗಲಿದೆ ಎಂದು ಅನೂಪ್ ತಿಳಿಸಿದರು.

ಸಹ ಸಂಸ್ಥಾಪಕ ರವಿಚಂದನ್ ಹಳದಿಪುರ, ತಮ್ಮ ಈ ಯೋಜನೆ ಪ್ರಧಾನಿ ಆಶಯದ ಆತ್ಮನಿರ್ಭರ ಭಾರತಕ್ಕೆ ಪೂರಕವಾಗಲಿದ್ದು, ಡಿಜಿಟಲ್ ವ್ಯವಹಾರ ವೃದ್ಧಿಗೂ ಸಹಕಾರಿಯಾಗಲಿದೆ ಎಂದರು.

ಇ- ಸಮುದಾಯ್ ದ ಶಿವಾನಂದ ಭಟ್ ಇದ್ದರು.

ಅವಿನಾಶ ಕಾಮತ್ ನಿರೂಪಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!