ಸುದ್ದಿಕಿರಣ ವರದಿ
ಬುಧವಾರ, ಜೂನ್ 15
ಎಂಜಿಎಂ ಸಂಧ್ಯಾ ಕಾಲೇಜು ಆರಂಭ
ಉಡುಪಿ: 1949ರಲ್ಲಿ ಆರಂಭವಾದ ಮಹಾತ್ಮ ಗಾಂಧಿ ಸ್ಮಾರಕ (ಎಂಜಿಎಂ) ಕಾಲೇಜು ಅಮೃತ ಮಹೋತ್ಸವದ ಸನಿಹದಲ್ಲಿದ್ದು, ಉನ್ನತ ಶ್ರೇಯಾಂಕದಲ್ಲಿ ಗುರುತಿಸಲ್ಪಟ್ಟ ಕಾಲೇಜಾಗಿದೆ.
ಬಹುಜನರ ಬೇಡಿಕೆ ಮೇರೆಗೆ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಸಂಧ್ಯಾ ಕಾಲೇಜು ಆರಂಭಿಸಲಾಗುವುದು. ಎಂಜಿಎಂ ಸಂಧ್ಯಾ ಕಾಲೇಜು ಹೊಸ ಶಿಕ್ಷಣ ನೀತಿಯನ್ವಯ ಯುವಜನತೆಗೆ ಉನ್ನತ ಶಿಕ್ಷಣ ತಲುಪಿಸುವ ಸದಾಶಯ ಹೊಂದಿದೆ ಎಂದು ಕಾಲೇಜು ಪ್ರಕಟಣೆ ತಿಳಿಸಿದೆ.
ಈ ವರ್ಷದಿಂದ ಬಿಸಿಎ (ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್) ಹಾಗೂ ಬಿ.ಕಾಂ (ಬ್ಯಾಚುಲರ್ ಆಫ್ ಕಾಮರ್ಸ್) ಪದವಿ ತರಗತಿಗಳನ್ನು ಆರಂಭಿಸಲು ಮಂಗಳೂರು ವಿಶ್ವವಿದ್ಯಾನಿಲಯದ ಅಫಿಲಿಯೇಶನ್ ಕಮಿಟಿ ಶಿಫಾರಸು ಮಾಡಿದೆ ಎಂದು ಎಂಜಿಎಂ ಕಾಲೇಜು ಪ್ರಾಂಶುಪಾಲ ಡಾ| ದೇವಿದಾಸ್ ಎಸ್. ನಾಯ್ಕ ಪ್ರಕಟಣೆ ತಿಳಿಸಿದೆ