Monday, July 4, 2022
Home ಲೋಕಾಭಿರಾಮ ಅನಾರೋಗ್ಯ ಸಂದರ್ಭದಲ್ಲಿ ಆರೋಗ್ಯ ವಿಮೆ ಸಹಕಾರಿ

ಅನಾರೋಗ್ಯ ಸಂದರ್ಭದಲ್ಲಿ ಆರೋಗ್ಯ ವಿಮೆ ಸಹಕಾರಿ

ಮಣಿಪಾಲ: ವೈದ್ಯಕೀಯ ವೆಚ್ಚ ಹೆಚ್ಚುತ್ತಿರುವ ಈ ದಿನಗಳಲ್ಲಿ ಅನಾರೋಗ್ಯಕ್ಕೆ ತುತ್ತಾದಾಗ ಆರೋಗ್ಯ ವಿಮೆ ಸಹಕಾರಿಯಾಗಲಿದೆ ಎಂದು ಅಂಬಲಪಾಡಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ| ಜಿ. ಶಂಕರ್ ಹೇಳಿದರು.

ಮಣಿಪಾಲ ಉನ್ನತ ಶಿಕ್ಷಣ ಅಕಾಡೆಮಿ (ಮಾಹೆ) ಆಶ್ರಯದಲ್ಲಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಮತ್ತು ಜಿ. ಶಂಕರ್ ಆರೋಗ್ಯ ಸುರಕ್ಷಾ ಯೋಜನೆ ಸಹಯೋಗದೊಂದಿಗೆ ಮಣಿಪಾಲ ಸಿಗ್ನಾ ಹೆಲ್ತ್ ಇನ್ಶೂರೆನ್ಸ್ ಕಂಪೆನಿ ಸಹಯೋಗದೊಂದಿಗೆ ನೀಡಲಾಗುವ ಜಿ. ಶಂಕರ್ ಮಣಿಪಾಲ ಆರೋಗ್ಯ ಕಾರ್ಡನ್ನು ಮಂಗಳವಾರ ಬಿಡುಗಡೆಗೊಳಿಸಿ ಮಾತನಾಡಿದರು.

ಎಟಿಎಂ ಇದ್ದಂತೆ
ಆಸ್ಪತ್ರೆ ವೆಚ್ಚ ನಮ್ಮ ಉಳಿತಾಯದ ಹಣ ಮತ್ತು ಜೇಬು ಖಾಲಿ ಮಾಡಿಬಿಡುತ್ತದೆ. ಆರೋಗ್ಯ ವಿಮೆ ಎಂಥ ಸಂಕಷ್ಟ ಪರಿಸ್ಥಿತಿಯಲ್ಲೂ ಧೈರ್ಯ ನೀಡಬಲ್ಲುದು. ಮಣಿಪಾಲ ಆರೋಗ್ಯ ಸುರಕ್ಷಾ ಕಾಡರ್್ ಎಟಿಎಂ ಇದ್ದಂತೆ ಎಂದು ಜಿ. ಶಂಕರ್ ವಿಶ್ಲೇಷಿಸಿದರು.

ಸಾಂಕೇತಿಕವಾಗಿ ಕಾರ್ಡ್ ವಿತರಿಸಿದ ಮಾಹೆ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್, ನಮ್ಮ ದೇಹದ ಆರೋಗ್ಯ ಸ್ಥಿತಿ ಆಧರಿಸಿ ಆರೋಗ್ಯ ವಿಮೆಯ ಆಯ್ಕೆ ಮಾಡಬೇಕು. ಜಿ. ಶಂಕರ್ ಆರೋಗ್ಯ ಸುರಕ್ಷಾ ಕಾರ್ಡ್ ನಮ್ಮನ್ನು ಸಂಕಷ್ಟದಿಂದ ರಕ್ಷಿಸುತ್ತದೆ ಎಂದರು.

2 ಲಕ್ಷಕ್ಕೂ ಅಧಿಕ ಕಾರ್ಡು ವಿತರಣೆ
ಈ ಬಾರಿ 52 ಸಾವಿರ ಕುಟುಂಬಗಳ 2.23 ಲಕ್ಷ ಫಲಾನುಭವಿಗಳಿಗೆ ಜಿ. ಶಂಕರ್ ಆರೋಗ್ಯ ಸುರಕ್ಷಾ ಕಾರ್ಡು ವಿತರಿಸಲಾಗುತ್ತಿದೆ. ಈ ತಿಂಗಳ 28ರ ನಂತರ ಮೊಗವೀರ ಯುವ ಸಂಘಟನೆಯ ಜಿಲ್ಲಾ ಕಚೇರಿ ಮತ್ತು ಘಟಕಗಳ ವ್ಯಾಪ್ತಿಯಲ್ಲಿ ಅರ್ಜಿದಾರರಿಗೆ ಸರಕಾರಿ ಕೋವಿಡ್ ನಿಯಮದಂತೆ ಕಾರ್ಡು ವಿತರಿಸಲಾಗುವುದು.

ಬಡವರು ಮತ್ತು ಅನಕ್ಷರಸ್ಥರ ಅನುಕೂಲಕ್ಕಾಗಿ ಹಾಗೂ ಆರೋಗ್ಯ ಸುರಕ್ಷಾ ಕಾರ್ಡ್ ಬಳಕೆದಾರರಿಗಾಗಿ ಮಾಹಿತಿ ನೀಡಲು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಪ್ರತ್ಯೇಕ ಕೌಂಟರ್ ತೆರೆಯಲಾಗುವುದು ಎಂದು ಡಾ| ಶಂಕರ್ ಮಾಹಿತಿ ನೀಡಿದರು.

ಮಾಹೆ ಉಪಕುಲಪತಿ ಡಾ. ಎಂ. ಡಿ. ವೆಂಕಟೇಶ್, ಹೆಚ್ಚುವರಿ ಉಪಕುಲಪತಿ ಡಾ. ಪಿ.ಎಲ್.ಎನ್.ಜಿ ರಾವ್, ಸಿಗ್ನಾ ಹೆಲ್ತ್ ಇನ್ಶೂರೆನ್ಸ್ ನ ಡಾ. ಪ್ರಶಾಂತ ನಲವಾಡೆ ಮತ್ತು ನೀಲಾಂಜನ್ ರೊಯ್, ಮೊಗವೀರ ಯುವ ಸಂಘಟನೆ ಜಿಲ್ಲಾಧ್ಯಕ್ಷ ಶಿವರಾಮ್ ಕೆ. ಎಂ., ದ.ಕ. ಉಚ್ಚಿಲ ದ.ಕ. ಮೊಗವೀರ ಮಹಾಜನ ಸಂಘ ಅಧ್ಯಕ್ಷ ಜಯ ಸಿ. ಕೋಟ್ಯಾನ್ ಮೊದಲಾದವರಿದ್ದರು.

ಕಸ್ತೂರ್ಬಾ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಸ್ವಾಗತಿಸಿ, ಇನ್ಶೂರೆನ್ಸ್ ವಿಭಾಗ ಮುಖ್ಯಸ್ಥ ಯು. ಎಸ್. ಶ್ರೀಪತಿ ಆರೋಗ್ಯ ಸುರಕ್ಷಾ ಕಾರ್ಡ್ ಕುರಿತು ಮಾಹಿತಿ ನೀಡಿದರು.

ಚಂದ್ರೇಶ್ ಪಿತ್ರೋಡಿ ನಿರೂಪಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!