Wednesday, August 10, 2022
Home ಲೋಕಾಭಿರಾಮ ಸಾಧನಾ ಜಿ. ಆಶ್ರಿತ್ ಗೆ ಗೋಲ್ಡನ್ ವುಮೆನ್ಸ್ ಅಚೀವರ್ಸ್ ಅವಾರ್ಡ್

ಸಾಧನಾ ಜಿ. ಆಶ್ರಿತ್ ಗೆ ಗೋಲ್ಡನ್ ವುಮೆನ್ಸ್ ಅಚೀವರ್ಸ್ ಅವಾರ್ಡ್

ಸಾಧನಾ ಜಿ. ಆಶ್ರಿತ್ ಗೆ ಗೋಲ್ಡನ್ ವುಮೆನ್ಸ್ ಅಚೀವರ್ಸ್ ಅವಾರ್ಡ್
(ಸುದ್ದಿಕಿರಣ ವರದಿ)

ಕಾರ್ಕಳ: ಇಲ್ಲಿನ ಸುಮೇಧ ಫ್ಯಾಶನ್ ಇನ್ ಸ್ಟಿಟ್ಯೂಟ್ ಹಾಗೂ ಸುಮೇಧ ಡಿಸೈನರ್ ಬುಟಿಕ್ ಸಂಸ್ಥಾಪಕಿ ಸಾಧನಾ ಜಿ. ಆಶ್ರಿತ್ ಅವರಿಗೆ ಗೋಲ್ಡನ್ ವುಮೆನ್ಸ್ ಅಚೀವರ್ಸ್ ಅವಾರ್ಡ್ ಲಭಿಸಿದೆ.

ಸರ್ವ ಸಂತೃಪ್ತಿ ವೆಂಚರ್ಸ್ ಬೆಂಗಳೂರು ಆಶ್ರಯದಲ್ಲಿ ಬೆಂಗಳೂರಿನ ಆರ್.ಜಿ. ರೋಯಲ್ ಹೋಟೆಲ್ ಸಭಾಂಗಣದಲ್ಲಿ ನಡೆದ ರಾಜ್ಯ ಮಟ್ಟದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಚಿತ್ತಾರ ಮ್ಯಾಗಜೀನ್ ಸಂಪಾದಕ ಶಿವಕುಮಾರ್ ಪ್ರಶಸ್ತಿ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ಕಾರ್ಲ್ಟನ್ ಈವೆಂಟ್ ಮ್ಯಾನೇಜ್ ಮೆಂಟ್ ಮುಖ್ಯಸ್ಥ ಬಸವರಾಜ್, ಕಿರುತೆರೆ ನಟ- ನಟಿಯರು, ನಿರ್ದೇಶಕರು, ತಾಂತ್ರಿಕ ವರ್ಗದವರು ಇದ್ದರು.

ಫ್ಯಾಶನ್ ಡಿಸೈನಿಂಗ್ ಕಾಲೇಜುಗಳಲ್ಲಿ 12 ವರ್ಷದ ಅನುಭವಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸಿದ್ದ ಸಾಧನಾ, ಧಾರಾವಾಹಿಗಳು, ಫ್ಯಾಶನ್ ಈವೆಂಟ್, ಕಾಸ್ಟ್ಯೂಮ್ ಡಿಸೈನರಾಗಿ ಮತ್ತು ಅನೇಕ ಹೆಣ್ಣುಮಕ್ಕಳಿಗೆ ಉಚಿತ ತರಬೇತಿ ನೀಡಿ, ಅವರಲ್ಲಿ ಆತ್ಮಸ್ಥೈರ್ಯ ಮೂಡಿಸಿ ಸ್ವಂತ ಉದ್ಯೋಗ ಕೈಗೊಳ್ಳಲು ಅವಕಾಶ ಮಾಡಿಕೊಡುತ್ತಿದ್ದಾರೆ.

ತಮ್ಮಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ಹಾಗೂ ಫ್ಯಾಶನ್ ಡಿಸೈನಿಂಗ್ ಆಗಿರುವ ಬೇರೆ ಕಾಲೇಜು ವಿದ್ಯಾರ್ಥಿಗಳಿಗೆ ಉದ್ಯೋಗ ದೊರಕಿಸಿಕೊಡುವ ಜೊತೆಗೆ ಅನೇಕ ಮಹಿಳೆಯರಿಗೆ ಉದ್ಯೋಗದಾತರಾಗಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!