Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ಶ್ರೀಸಾಯಿ ಅಸೋಸಿಯೇಟ್ಸ್ ರಜತ ಸಂಭ್ರಮ

ಶ್ರೀಸಾಯಿ ಅಸೋಸಿಯೇಟ್ಸ್ ರಜತ ಸಂಭ್ರಮ

ಸುದ್ದಿಕಿರಣ ವರದಿ
ಸೋಮವಾರ, ಜುಲೈ 11

ಶ್ರೀಸಾಯಿ ಅಸೋಸಿಯೇಟ್ಸ್ ರಜತ ಸಂಭ್ರಮ
ಉಡುಪಿ: ಗ್ರಾನೈಟ್ ಉದ್ದಿಮೆಯಲ್ಲಿ ಹೆಸರುವಾಸಿಯಾದ ಇಲ್ಲಿನ ಶ್ರೀ ಸಾಯಿ ಗ್ರಾನೈಟ್ ಅಸೋಸಿಯೇಟ್ಸ್ ಸಂಸ್ಥೆಯ ಬೆಳ್ಳಿ ಹಬ್ಬ ಭಾನುವಾರ ಕುಂಜಿಬೆಟ್ಟು ಶ್ರೀ ಶಾರದಾ ಕಲ್ಯಾಣ ಮಂಟಪದಲ್ಲಿ ನಡೆಯಿತು.

ಇದೇ ಸಂದರ್ಭದಲ್ಲಿ ಎಸ್.ಬಿ. ಫ್ಲೋರಿಂಗ್ ಕನ್ಸಲ್ಟೆನ್ಸಿ ಉಪಸಂಸ್ಥೆಗೆ ಚಾಲನೆ ನೀಡಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಉಡುಪಿ ಇಂಜಿನಿಯರ್ಸ್ ಅಸೋಸಿಯೇಶನ್ (ಎಸಿಸಿಇಎ) ಅಧ್ಯಕ್ಷ ಪಾಂಡುರಂಗ ಆಚಾರ್, ಕಟ್ಟಡ ನಿರ್ಮಾಣ ಸಂದರ್ಭದಲ್ಲಿ ಗ್ರಾಹಕರ ಆರ್ಥಿಕ ಸ್ಥಿತಿಗನುಗುಣವಾಗಿ ನೆಲ (ಫ್ಲೋರಿಂಗ್) ನಿರ್ಮಿಸುವಲ್ಲಿ ಸೂಕ್ತ ಮಾಹಿತಿ ಹಾಗೂ ಒಳಿತು ಕೆಡುಕುಗಳ ಮಾಹಿತಿ ಪಡೆದು ಅಳವಡಿಸಿಕೊಳ್ಳುವಲ್ಲಿ ಸಂಸ್ಥೆ ಪೂರಕವಾಗಲಿ ಎಂದು ಆಶಿಸಿ, ಸಂಸ್ಥೆಗೆ ಶುಭ ಹಾರೈಸಿದರು.

ಅಭ್ಯಾಗತರಾಗಿ ಖ್ಯಾತ ಇಂಜಿನಿಯರ್ ಹಾಗೂ ಎ.ಜಿ. ಅಸೋಸಿಯೇಟ್ಸ್ ನ ಗೋಪಾಲ ಭಟ್, ವಾಸ್ತು ವಿನ್ಯಾಸ ತಜ್ಞ ಹಾಗೂ ಎಸಿಸಿಇಎ ಕಾರ್ಯದರ್ಶಿ ಯೋಗೀಶ್ಚಂದ್ರಧರ, ಇಂಜಿನಿಯರ್ ಮೋಹನ ರಾವ್ ಬೈಲೂರು, ಉದ್ಯಮಿ ಹಾಗೂ ರೋಟರಿ ಜಿಲ್ಲಾ 3182 ಪಿಡಿಜಿ ರಾಜಾರಾಮ ಭಟ್ ಹಾಗೂ ವಾಸ್ತುವಿನ್ಯಾಸ ತಜ್ಞೆ ರಮಣಿ ಮಯ್ಯ ಆಗಮಿಸಿ, ಶುಭ ಹಾರೈಸಿದರು.

ಗಾಯಕ, ಇಂಜಿನಿಯರ್ ಲಕ್ಷ್ಮೀನಾರಾಯಣ ಉಪಾಧ್ಯ ಪಾಡಿಗಾರು ಇದ್ದರು.

ಸಂಸ್ಥೆ ಮುಖ್ಯಸ್ಥರಾದ ರವಿರಾಜ್ ಸ್ವಾಗತಿಸಿ, ದೀಪ ರವಿರಾಜ್ ಪ್ರಸ್ತಾವನೆಗೈದರು. ವಿಷ್ಣು ಪ್ರಸಾದ್ ಪಾಡಿಗಾರ್ ನಿರೂಪಿಸಿ, ವಂದಿಸಿದರು.

ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಸಾಧಕ ಮಕ್ಕಳಿಗೆ ಪುರಸ್ಕಾರ, ಗ್ರಾಹಕ ಸ್ನೇಹಕೂಟ ಆಯೋಜಿಸಲಾಗಿತ್ತು.

 

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!