Monday, July 4, 2022
Home ಲೋಕಾಭಿರಾಮ ಪ್ರಯೋಗಾಲಯ ಪರೀಕ್ಷೆ ಅಗತ್ಯತೆ ಕಾರ್ಯಾಗಾರ

ಪ್ರಯೋಗಾಲಯ ಪರೀಕ್ಷೆ ಅಗತ್ಯತೆ ಕಾರ್ಯಾಗಾರ

ಉಡುಪಿ: ಇಲ್ಲಿನ ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಈಚೆಗೆ ರೋಗ ನಿದಾನ ಮತ್ತು ವಿಕೃತಿ ವಿಜ್ಞಾನ ವಿಭಾಗ ವತಿಯಿಂದ ಪ್ರಯೋಗಾಲಯ ಪರೀಕ್ಷೆಗಳ ಅಗತ್ಯತೆ ಕುರಿತು ಕಾರ್ಯಾಗಾರ ನಡೆಸಲಾಯಿತು.

ಶಿವಮೊಗ್ಗ ಸುಬ್ಬಯ್ಯ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಜೀವ ರಸಾಯನ ವಿಭಾಗ ಪ್ರಾಧ್ಯಾಪಕ ಹಾಗೂ ಉಡುಪಿ ಶಿವಾನಿ ಡಯಗ್ನೋಸ್ಟಿಕ್ಸ್ ಆ್ಯಂಡ್ ರಿಸರ್ಚ್ ಸೆಂಟರ್ ನಿರ್ದೇಶಕ ಪ್ರೊ. ಶಿವಾನಂದ ನಾಯಕ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ವಿವಿಧ ರೀತಿಯ ರೋಗ ಅಭಿವ್ಯಕ್ತಿಯಲ್ಲಿ ಪ್ರಯೋಗಾಲಯ ಪರೀಕ್ಷೆಗಳ ಪ್ರಾಮುಖ್ಯತೆ ಮತ್ತು ದಿನನಿತ್ಯದ ವೈದ್ಯಕೀಯ ಅಭ್ಯಾಸದಲ್ಲಿ ಪ್ರಯೋಗಾಲಯ ಪರೀಕ್ಷೆಗಳ ಅನ್ವಯ ವಿಷಯದ ಕುರಿತು ಮಾಹಿತಿ ನೀಡಿದರು.

ಕಾಲೇಜು ಪ್ರಾಂಶುಪಾಲೆ ಡಾ. ಮಮತಾ ಕೆ. ವಿ. ಅಧ್ಯಕ್ಷತೆ ವಹಿಸಿದ್ದರು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕಕ ಡಾ. ನಾಗರಾಜ್ ಎಸ್. ಇದ್ದರು.

ಎಸ್.ಡಿಎಂ ಸೆಂಟರ್ ಫಾರ್ ರಿಸರ್ಚ್ ನ ಹಿರಿಯ ಸಂಶೋಧನಾಧಿಕಾರಿ ನವೀನಚಂದ್ರ ಎನ್. ಎಚ್. ಹಾಗೂ ರೋಗ ನಿದಾನ ವಿಭಾಗದ ಸಹಪ್ರಾಧ್ಯಾಪಕ ಡಾ. ಪ್ರಸನ್ನ ಎನ್. ಮೊಗಸಾಲೆ ಸ್ವಾಗತಿಸಿದರು. ಸ್ನಾತಕೋತ್ತರ ವಿದ್ಯಾರ್ಥಿಗಳಾದ ಡಾ. ಕಾರ್ತಿಕಾ ಹಾಗೂ ಡಾ. ಪಲ್ಲವಿ ನಿರೂಪಿಸಿದರು. ಡಾ. ಅಭಿತಾ ಸಹಕರಿಸಿದರು. ಡಾ. ಅಕ್ಷತಾ ವಂದಿಸಿದರು. ರೋಗ ನಿಧಾನ ಮತ್ತು ವಿಕೃತಿ ವಿಜ್ಞಾನ ವಿಭಾಗ ಸಹಾಯಕ ಪ್ರಾಧ್ಯಾಪಕ ಡಾ. ಅರುಣ್ ಕುಮಾರ್ ಎಂ. ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕರಾದ ಡಾ. ಸದಾನಂದ ಭಟ್ ಮತ್ತು ಡಾ. ಸರಿತಾ ಟಿ. ಸಂಯೋಜಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!