Wednesday, August 10, 2022
Home ಲೋಕಾಭಿರಾಮ ಆರೋಗ್ಯ ಜಿಲ್ಲಾಸ್ಪತ್ರೆಗೆ ಎಂ.ಟಿ.ಆರ್.ನಿಂದ ಆ್ಯಂಬುಲೆನ್ಸ್ ಕೊಡುಗೆ

ಜಿಲ್ಲಾಸ್ಪತ್ರೆಗೆ ಎಂ.ಟಿ.ಆರ್.ನಿಂದ ಆ್ಯಂಬುಲೆನ್ಸ್ ಕೊಡುಗೆ

ಜಿಲ್ಲಾಸ್ಪತ್ರೆಗೆ ಎಂ.ಟಿ.ಆರ್.ನಿಂದ ಆ್ಯಂಬುಲೆನ್ಸ್ ಕೊಡುಗೆ
(ಸುದ್ದಿಕಿರಣ ವರದಿ)

ಉಡುಪಿ: ಪ್ರತಿಷ್ಠಿತ ಎಂ.ಟಿ.ಆರ್ ಸಂಸ್ಥೆ, ತನ್ನ ಸಿ.ಎಸ್.ಆರ್ ಚಟುವಟಿಕೆಯಡಿ 50 ಲಕ್ಷ ರೂ. ವೆಚ್ಚದ ಹವಾನಿಯಂತ್ರಿತ ವೆಂಟಿಲೇಟರ್ ಸೌಲಭ್ಯವನ್ನೊಳಗೊಂಡ ಆ್ಯಂಬುಲೆನ್ಸ್ ಮತ್ತು 10 ಐಸಿಯು ಬೆಡ್ ಗಳನ್ನು ಇಲ್ಲಿನ ಜಿಲ್ಲಾಸ್ಪತ್ರೆಗೆ ಸಾರ್ಜಜನಿಕ ಸೇವೆಗೆ ನೀಡಲಾಯಿತು.

ಜಿಲ್ಲಾಡಳಿತದ ಪರವಾಗಿ ಗುರುವಾರ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಜಿ.ಪಂ. ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ., ಡಿ.ಎಚ್.ಓ. ಡಾ. ನಾಗಭೂಷಣ ಉಡುಪ, ಜಿಲ್ಲಾ ಸರ್ಜನ್ ಡಾ. ಮಧುಸೂದನ ನಾಯಕ್, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಡಾ. ಪ್ರಶಾಂತ್ ಭಟ್, ಎಂ.ಟಿ.ಆರ್ ಸಂಸ್ಥೆಯ ಜನರಲ್ ಬ್ಯುಸಿನೆಸ್ ಮ್ಯಾನೇಜರ್ ಮೂರ್ತಿ ಆರ್., ಎಂ.ಟಿ.ಆರ್. ಸಂಸ್ಥೆಯ ಮುಖ್ಯಾಧಿಕಾರಿ ಪ್ರಕಾಶ್ ದೇಬಶೆಟ್ಟಿ, ಸಂಸ್ಥೆಯ ಏರಿಯಾ ಸೇಲ್ಸ್ ಮ್ಯಾನೇಜರ್ ಆಶಿಶ್ ಭಂಡಾರಿ ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!