Saturday, July 2, 2022
Home ಲೋಕಾಭಿರಾಮ ಕೋವಿಡ್ ನಿಯಮ ಕಟ್ಟುನಿಟ್ಟನ ಪಾಲನೆಗೆ ಸೂಚನೆ

ಕೋವಿಡ್ ನಿಯಮ ಕಟ್ಟುನಿಟ್ಟನ ಪಾಲನೆಗೆ ಸೂಚನೆ

ಉಡುಪಿ: ರಾಜ್ಯದಲ್ಲಿ ಕೊರೊನಾ ಮೂರನೇ ಅಲೆ ಬಾಧಿಸುವುದು ಬೇಡ ಎಂದಾದಲ್ಲಿ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ಇದು ರಾಜ್ಯ ಆರೋಗ್ಯ ಸಚಿವ ಡಾ. ಸುಧಾಕರ್ ಜನತೆಗೆ ಮಾಡಿದ ಮನವಿ.

ಬುಧವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಗಡಿ ಜಿಲ್ಲೆಗಳಲ್ಲಿ ಕೋವಿಡ್ ತಪಾಸಣೆಯಲ್ಲಿ ನಿರ್ಲಕ್ಷ್ಯ ಮಾಡಬಾರದು ಎಂಬ ಎಚ್ಚರಿಕೆ ನೀಡಿದ ಸಚಿವ ಸುಧಾಕರ್, ಈಗಾಗಲೇ ಸೂಕ್ತ ತಪಾಸಣೆಗೆ ಜಿಲ್ಲಾಡಳಿತಗಳಿಗೆ ಸಿಎಂ ಈಗಾಗಲೇ ಸೂಚನೆ ನೀಡಿದ್ದಾರೆ. ಈ ಸೂಚನೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು. ಕಡ್ಡಾಯವಾಗಿ ಲಸಿಕೆ ಹಾಕಿದವರಿಗೆ ಮಾತ್ರ ಗಡಿ ಪ್ರವೇಶ ನೀಡಬೇಕು ಮತ್ತು ಆರ್.ಟಿ.ಪಿಸಿ.ಆರ್ ನೆಗೆಟಿವ್ ಇದ್ದವರನ್ನು ಮಾತ್ರ ರಾಜ್ಯದೊಳಗೆ ಬಿಡಬೇಕು ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.

2.6 ಕೋಟಿ ಲಸಿಕೆ ಪೂರ್ಣ
ಈಗಾಗಲೇ 2.60 ಕೋಟಿ ಲಸಿಕೆ ಹಾಕಿಸಲಾಗಿದೆ. ಇನ್ನು 2ರಿಂದ 3 ಕೋಟಿ ಲಸಿಕೆ ಹಾಕಿದರೆ ಎಲ್ಲರಿಗೂ ಒಂದು ಡೋಸ್ ಪೂರ್ಣವಾಗುತ್ತದೆ. ರಾಜ್ಯದಲ್ಲಿ ಯಾವ ಅಲೆಯೂ ಪ್ರಭಾವ ಬೀರುವುದಿಲ್ಲ. ಆದರೆ, ಲಸಿಕೆ ಪೂರ್ಣವಾಗುವ ವರೆಗೆ ಶಿಷ್ಟಾಚಾರ ಪಾಲನೆ ಮುಂದುವರಿಸಬೇಕು. ಪ್ರವಾಸಿ ತಾಣ, ಜಾತ್ರೆ, ಮದುವೆ ಎಂದು ಸಾವಿರಾರು ಜನ ಸೇರಬಾರದು. ನಿರ್ಲಕ್ಷ್ಯ ಮಾಡಿದಲ್ಲಿ ಮೂರನೇ ಅಲೆಗೆ ಆಹ್ವಾನ ನೀಡಿದಂತಾಗುತ್ತದೆ. ನಿರ್ಲಕ್ಷ್ಯ ಮಾಡಬೇಡಿ ಎಂದು ಪ್ರಧಾನಿ ಕೂಡಾ ಹೇಳಿದ್ದಾರೆ ಎಂದರು.

ಬೇರೆ ದೇಶಗಳಲ್ಲಿ ಲಸಿಕೆ ಕೊಟ್ಟರೂ ಸೋಂಕಿತರ ಪ್ರಕರಣ ಹೆಚ್ಚಾಗುತ್ತಿದ್ದು, ಎಚ್ಚರಿಕೆ ವಹಿಸುವಂತೆ ಸೂಚಿಸಿದರು.

ಶಾಸಕ ರಘುಪತಿ ಭಟ್, ಜಿಲ್ಲಾಧಿಕಾರಿ ಜಿ. ಜಗದೀಶ್, ಹೆಚ್ವುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮೊದಲಾದವರಿದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!