ಸುದ್ದಿಕಿರಣ ವರದಿ
ಸೋಮವಾರ, ಮಾರ್ಚ್ 7
ಕೌಶಲ್ಯ ಯೋಜನೆ ಕಾರ್ಯಾಗಾರ
ಉಡುಪಿ: ಸ್ವ ಉದ್ಯೋಗ, ಉಚಿತ ತರಬೇತಿ ಮತ್ತು ಉದ್ಯೋಗಾವಕಾಶವನ್ನು ಸೃಷ್ಟಿಸುವ ಪ್ರಧಾನ ಮಂತ್ರಿ ಕೌಶಲ್ಯ ಯೋಜನೆಯ 3ನೇ ಆವೃತ್ತಿಯ ತರಬೇತಿ ಮಣಿಪಾಲದಲ್ಲಿರುವ ಪ್ರಧಾನ ಮಂತ್ರಿ ಕೌಶಲ್ಯ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರೋಮನ್ ಸೆಂಟರ್ ಹೆಡ್ ರಾಘವೇಂದ್ರ ರಾವ್ ತಿಳಿಸಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ತರಬೇತಿಯಲ್ಲಿ 15ರಿಂದ 45 ವರ್ಷ ವರೆಗಿನ ಯುವಕ, ಯುವತಿಯರು, ಮಹಿಳೆ ಹಾಗೂ ಪುರುಷರು ಭಾಗವಹಿಸಬಹುದು. ಮಾ. 15ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಒಂದು ಬ್ಯಾಚ್ ನಲ್ಲಿ 30ರಿಂದ 40 ಮಂದಿ ತರಬೇತಿ ಪಡೆಯಬಹುದು ಎಂದರು.
ತರಬೇತಿಯಲ್ಲಿ ಭಾಗವಹಿಸಲಿಚ್ಛಿಸುವವರು ಆಧಾರ್ ಕಾರ್ಡ್, 2 ಭಾವಚಿತ್ರ, ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ ಅಂಕಪಟ್ಟಿ, ಬ್ಯಾಂಕ್ ಖಾತೆಯ ಜೆರಾಕ್ಸ್ ಪ್ರತಿಯನ್ನು ನೀಡಬೇಕು. ಬೆಳಿಗ್ಗೆ 9ರಿಂದ ಮಧ್ಯಾಹ್ನ 1 ಗಂಟೆ ಹಾಗೂ ಅಪರಾಹ್ನ 2 ಗಂಟೆಯಿಂದ ಸಂಜೆ 6 ಗಂಟೆ ವರೆಗೆ ತರಬೇತಿ ನೀಡಲಾಗುತ್ತದೆ ಎಂದವರು ವಿವರಿಸಿದರು.
ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ 95350 40711 ಅಥವಾ 94489 37896ನ್ನು ಸಂಪರ್ಕಿಸಬಹುದು.