Thursday, July 7, 2022
Home ಲೋಕಾಭಿರಾಮ ಉಡುಪಿ ಸುಲ್ತಾನ್ ಗೋಲ್ಡ್ ನಲ್ಲಿ ಡೈಮಂಡ್ ಎಕ್ಸಿಬಿಷನ್ 'ವಿಶ್ವ ವಜ್ರ' ಉದ್ಘಾಟನೆ

ಉಡುಪಿ ಸುಲ್ತಾನ್ ಗೋಲ್ಡ್ ನಲ್ಲಿ ಡೈಮಂಡ್ ಎಕ್ಸಿಬಿಷನ್ ‘ವಿಶ್ವ ವಜ್ರ’ ಉದ್ಘಾಟನೆ

ಉಡುಪಿ ಸುಲ್ತಾನ್ ಗೋಲ್ಡ್ ನಲ್ಲಿ ಡೈಮಂಡ್ ಎಕ್ಸಿಬಿಷನ್ ‘ವಿಶ್ವ ವಜ್ರ’ ಉದ್ಘಾಟನೆ
(ಸುದ್ದಿಕಿರಣ ವರದಿ)

ಉಡುಪಿ: ಇಲ್ಲಿನ ವಿದ್ಯಾಸಮುದ್ರತೀರ್ಥ ರಸ್ತೆಯ ವೆಸ್ಟ್ ಕೋಸ್ಟ್ ಕಟ್ಟಡದಲ್ಲಿರುವ ಉಡುಪಿ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ನಲ್ಲಿ 10 ದಿನಗಳ ಕಾಲ ನಡೆಯುವ ದಕ್ಷಿಣ ಭಾರತದ ಬೃಹತ್ ಡೈಮಂಡ್ ಎಕ್ಸಿಬಿಷನ್ ವಿಶ್ವ ವಜ್ರ ವಜಿಇನ್ನು ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಗುರುವಾರ ಉದ್ಘಾಟಿಸಿದರು.

ಉತ್ತಮ ಸಿಬ್ಬಂದಿ ಸಂಸ್ಥೆ ಆಸ್ತಿ

ಬಳಿಕ ಮಾತನಾಡಿದ ಅವರು, ಯಾವುದೇ ಸಂಸ್ಥೆಯ ಒಳ್ಳೆಯ ಆಸ್ತಿ ಎಂದರೆ ಆ ಸಂಸ್ಥೆಯ ಸಿಬ್ಬಂದಿ ವರ್ಗ .

ಅವರ ಶ್ರಮ ಹಾಗೂ ಶ್ರದ್ಧೆಯಿಂದ ಸಂಸ್ಥೆಗೆ ಉತ್ತಮ ಹೆಸರು ಬರುತ್ತದೆ.

ಬದುಕು ಬದಲಾದಂತೆ ನಾವು ಹೆಜ್ಜೆಯನ್ನು ಇಟ್ಟುಕೊಂಡು ಹೋಗಬೇಕು. ಜಾತಿ ಮತ ಮೀರಿದಾಗ ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ. ವಿವಿಧ ಧರ್ಮದವರಿಗೆ ಅವರದೇ ಆದ ಆರಾಧನಾ ಕೇಂದ್ರಗಳಿದ್ದರೂ ಚಿನ್ನಾಭರಣ ಖರೀದಿಗೆ ಎಲ್ಲ ಧರ್ಮದವರಿಗೂ ಸುಲ್ತಾನ್ ಡೈಮಂಡ್ಸ್ ಆ್ಯಂಡ್ ಗೋಲ್ಡ್ ಒಂದೇ ಎಂದರು.

ಸುಲ್ತಾನ್ ಡೈಮಂಡ್ಸ್ ವ್ಯವಹಾರದೊಂದಿಗೆ ಸಮಾಜಸೇವೆಲ್ಲೂ ತೊಡಗಿಕೊಂಡಿರುವುದು ಸಂತಸದಾಯಕ ಎಂದರು.

ಮುಖ್ಯ ಅತಿಥಿಗಳಾಗಿ ಎನ್.ಟಿ.ಇ. ಕಂಪೆನಿಯ ಆಡಳಿತ ಪಾಲುದಾರ ಪರ್ಕಳ ರಜಬ್ ಬ್ಯಾರಿ ತುಕರಸ್ ಕಲೆಕ್ಷನ್, ಎನ್.ಟಿ.ಇ. ಕಂಪೆನಿ ಆಡಳಿತ ಪಾಲುದಾರ ಮುಹಮ್ಮದ್ ಅಶ್ರಫ್ ಬೆಜ್ಜಿಯಂ ಕಲೆಕ್ಷನ್, ಸೀನಿಯರ್ ಇನ್ಸೂರೆನ್ಸ್ ಕನ್ಸಲ್ಟೆಂಟ್ ಶ್ರೀರಾಮ ರಾವ್ ಮಿಡ್ಲ್ ಈಸ್ಟ್ ಕಲೆಕ್ಷನ್, ಕನ್ನರಪಾಡಿ ಶ್ರೀ ಜಯದುರ್ಗಾಪರಮೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮುರಳೀಧರ ಬಲ್ಲಾಳ್ ಸೋಲಿಟೈರ್ ಕಲೆಕ್ಷನ್, ಕಂಡ್ಲೂರು ಜಾಮೀಯಾ ಮಸೀದಿ ಅಧ್ಯಕ್ಷ ಎಸ್. ದಸ್ತಗಿರ್ ಸಿಂಗಾಪುರ ಕಲೆಕ್ಷನ್, ಕಾಪು ಅಮೃತರಾಜ್ ಚಾರಿಟೇಬಲ್ ಟ್ರಸ್ಟ್ ಕೋ ಮ್ಯಾನೇಜಿಂಗ್ ಟ್ರಸ್ಟಿ ಶ್ವೇತಾ ಕೆ. ಯುಎಸ್ ಕಲೆಕ್ಷನ್, ದಂತ ವೈದ್ಯೆ ಡಾ. ಅನುರಾಧಾ ಸೂಡ ಫ್ರೆಂಚ್ ಕಲೆಕ್ಷನ್, ಕುಂದಾಪುರದ ಮೃದುಲ ರಮೇಶ್ ಶೆಟ್ಟಿ ಇಟಾಲಿಯನ್ ಕಲೆಕ್ಷನ್, ಮಣಿಪಾಲ ಪವರ್ ಸಂಸ್ಥೆ ಅಧ್ಯಕ್ಷೆ ತಾರಾ ತಿಮ್ಮಯ್ಯ ಪೊಲ್ಕಿ ಕಲೆಕ್ಷನ್ ಅನಾವರಣಗೊಳಿಸಿದರು.

ವಿಶ್ವ ವಜ್ರ ಪ್ರದರ್ಶನದ ಮೊದಲ ಗ್ರಾಹಕ ಮುಹಮ್ಮದ್ ಫತೀನ್ ಅವರಿಗೆ ವಜ್ರಾಭರಣ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಸುಲ್ತಾನ್ ಗ್ರೂಪ್ ಪ್ರಧಾನ ವ್ಯವಸ್ಥಾಪಕ ಎ.ಕೆ. ಉನ್ನಿತ್ತನ್, ಪ್ರಾದೇಶಿಕ ವ್ಯವಸ್ಥಾಪಕ ಸುಮೇಶ್, ಉಡುಪಿ ಫ್ಲೋರ್ ಮೆನೇಜರ್ ಸಿದ್ದೀಕ್ ಹಸನ್, ಅಸಿಸ್ಟೆಂಟ್ ಸೇಲ್ಸ್ ಮ್ಯಾನೇಜರ್ ಗಳಾದ ಮುಹಮ್ಮದ್ ಶಾಮೀಲ್, ಅಬ್ದುಲ್ ಖಾದರ್ ಮತ್ತು ನಝೀರ್ ಅದ್ದೂರು ಮೊದಲಾದವರಿದ್ದರು.

ಸುಲ್ತಾನ್ ಗೋಲ್ಡ್ ಉಡುಪಿ ಬ್ರಾಂಚ್ ಮ್ಯಾನೇಜರ್ ಮುಹಮ್ಮದ್ ಅಜ್ಮಲ್ ಸ್ವಾಗತಿಸಿದರು. ಲವಿನಾ ಮಿನೇಜಸ್ ಸ್ವಾಗತಿಸಿ, ನಿರೂಪಿಸಿದರು.

ಅ.30ರ ವರೆಗೆ ನಡೆಯಲಿರುವ ಈ ಪ್ರದರ್ಶದಲ್ಲಿ ಪ್ರತೀ ಡೈಮಂಡ್ ಕ್ಯಾರೆಟ್ ಖರೀದಿಯಲ್ಲಿ 7,500 ರೂ. ರಿಯಾಯಿತಿ ನೀಡಲಾಗುವುದು.

ಪ್ರದರ್ಶನದಲ್ಲಿ ಇಟೆಲಿ, ಫ್ರಾನ್ಸ್, ಯುಎಸ್, ಬೆಲ್ಜಿಯಂ, ಸಿಂಗಾಪುರ, ಟರ್ಕಿ, ಮಿಡ್ಲ್ ಈಸ್ಟ್ ಡೈಮಂಡ್ ಜ್ಯುವೆಲ್ಲರಿಗಳ ಸಂಗ್ರಹಗಳಿವೆ. ಜೊತೆಗೆ ಮೆಟ್ರೋ ಟ್ರೆಂಡ್ ಕಲೆಕ್ಷನ್, ಸೋಲಿಟೈರ್ ಕಲೆಕ್ಷನ್, ಸೆಲೆಬ್ರಿಟಿ ಕಲೆಕ್ಷನ್ಸ್, ಬ್ರೈಡಲ್ ಕಲೆಕ್ಷನ್, ಲೆಗಸ್ಸಿ ಪೊಲ್ಕಿ ಕಲೆಕ್ಷನ್, ಟ್ರೆಡಿಶನಲ್ ಕಲೆಕ್ಷನ್ಸ್, ತನ್ಮನಿಯ ಕಲೆಕ್ಷನ್ಸ್, ಲೈಟ್ವೆಹಿಟ್ ಡೈಲಿ ವೇರ್, ಆಫೀಸ್ ವೇರ್ ಮತ್ತು ಕಾಲೇಜು ವೇರ್ ಕಲೆಕ್ಷನ್ ಗಳಿವೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!